June ತಿಂಗಳಲ್ಲಿ ಮೊಹರಂ ಸೇರಿ 12 ದಿನಗಳವರೆಗೆ ಬ್ಯಾಂಕ್ ರಜೆ – ದೇಶವ್ಯಾಪಿ ಎಷ್ಟಿದೆ ರಜೆ?

2026ರ June ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 12 ದಿನಗಳವರೆಗೆ ರಜೆಗಳು ಇರಲಿವೆ. ಆದರೆ ಈ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಮೊಹರಂ, ಮಹಾರಾಣಾ ಪ್ರತಾಪ್ ಜಯಂತಿ, ಗುರು ಅರ್ಜುನ ದೇವ್ ಬಲಿದಾನ ದಿನ, ಕಬೀರ್ ಜಯಂತಿ ಸೇರಿದಂತೆ ಹಲವು ವಿಶೇಷ ಆಚರಣೆಗಳ ಹಿನ್ನೆಲೆ ಕೆಲ ರಾಜ್ಯಗಳಲ್ಲಿ ಹೆಚ್ಚುವರಿ ರಜೆಗಳು ಘೋಷಿಸಲಾಗಿದೆ.
ಈ 12 ರಜೆಗಳಲ್ಲಿ ಆರು ದಿನಗಳು ನಿಯಮಿತ ವಾರಾಂತ್ಯದ ರಜೆಗಳಾಗಿವೆ. ಮಿಝೋರಾಂ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಇತರ ರಾಜ್ಯಗಳಿಗಿಂತ ಎರಡು ಹೆಚ್ಚುವರಿ ರಜೆಗಳು ಸಿಗಲಿವೆ. ಮೊಹರಂ ಹಬ್ಬದ ನಿಮಿತ್ತ ದೇಶದ ಹೆಚ್ಚಿನ ರಾಜ್ಯಗಳಲ್ಲಿ ಬ್ಯಾಂಕುಗಳು ಬಂದ್ ಆಗಲಿವೆ.

2026ರ ಜೂನ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ
- ಜೂನ್ 7 – ಭಾನುವಾರದ ರಜೆ
- ಜೂನ್ 13 – ಎರಡನೇ ಶನಿವಾರ
- ಜೂನ್ 14 – ಭಾನುವಾರದ ರಜೆ
- ಜೂನ್ 15, ಸೋಮವಾರ – ರಾಜ ಸಂಕ್ರಾಂತಿ, ವೈಎಂಎ ದಿನ (ಒಡಿಶಾ ಮತ್ತು ಮಿಝೋರಾಂನಲ್ಲಿ ರಜೆ)
- ಜೂನ್ 17, ಬುಧವಾರ – ಮಹಾರಾಣಾ ಪ್ರತಾಪ್ ಜಯಂತಿ (ಹರ್ಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನದಲ್ಲಿ ರಜೆ)
- ಜೂನ್ 18, ಗುರುವಾರ – ಶ್ರೀ ಗುರು ಅರ್ಜುನ ದೇವ್ ಬಲಿದಾನ ದಿನ (ಪಂಜಾಬ್ನಲ್ಲಿ ರಜೆ)
- ಜೂನ್ 21 – ಭಾನುವಾರದ ರಜೆ
- ಜೂನ್ 26, ಶುಕ್ರವಾರ – ಮೊಹರಂ ಹಬ್ಬ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
- ಜೂನ್ 27 – ನಾಲ್ಕನೇ ಶನಿವಾರ
- ಜೂನ್ 28 – ಭಾನುವಾರದ ರಜೆ
- ಜೂನ್ 29, ಸೋಮವಾರ – ಸಂತ ಗುರು ಕಬೀರ್ ಜಯಂತಿ (ಹಿಮಾಚಲ ಪ್ರದೇಶದಲ್ಲಿ ರಜೆ)
- ಜೂನ್ 30, ಮಂಗಳವಾರ – ರೆಮ್ನಾ ನೀ (ಮಿಝೋರಾಂನಲ್ಲಿ ರಜೆ)
ಇದನ್ನು ಓದಿ : ಬ್ಯಾಂಕ್ ವ್ಯವಹಾರ ಇದ್ರೆ ಇಂದೇ ಮುಗಿಸಿಕೊಳ್ಳಿ – 4 ದಿನ Bank Bandh

ಕರ್ನಾಟಕದಲ್ಲಿ ಜೂನ್ ತಿಂಗಳ ಬ್ಯಾಂಕ್ ರಜೆಗಳು
ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 7 ದಿನ ರಜೆ ಇರಲಿದೆ. ಅವುಗಳ ಪಟ್ಟಿ ಹೀಗಿದೆ:
- ಜೂನ್ 7 – ಭಾನುವಾರ
- ಜೂನ್ 13 – ಎರಡನೇ ಶನಿವಾರ
- ಜೂನ್ 14 – ಭಾನುವಾರ
- ಜೂನ್ 21 – ಭಾನುವಾರ
- ಜೂನ್ 26 – ಮೊಹರಂ ಹಬ್ಬ
- ಜೂನ್ 27 – ನಾಲ್ಕನೇ ಶನಿವಾರ
- ಜೂನ್ 28 – ಭಾನುವಾರ
ಆನ್ಲೈನ್ ಬ್ಯಾಂಕಿಂಗ್ ಸೇವೆಗಳು ಲಭ್ಯ
ಬ್ಯಾಂಕ್ ರಜೆಗಳ ಸಂದರ್ಭದಲ್ಲಿ ಶಾಖಾ ಕಚೇರಿಗಳು ಮಾತ್ರ ಬಂದ್ ಆಗುತ್ತವೆ. ಆದರೆ ಗ್ರಾಹಕರು ಹೆಚ್ಚಿನ ಬ್ಯಾಂಕಿಂಗ್ ಸೇವೆಗಳನ್ನು ಆನ್ಲೈನ್ ಮೂಲಕ ಪಡೆಯಬಹುದು. ಯುಪಿಐ, ನೆಟ್ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ.
ಹಣ ವರ್ಗಾವಣೆ, ಬಿಲ್ ಪಾವತಿ, ಮೊಬೈಲ್ ರೀಚಾರ್ಜ್ ಸೇರಿದಂತೆ ಹಲವು ಸೇವೆಗಳು ಡಿಜಿಟಲ್ ಮೂಲಕ ಸುಲಭವಾಗಿ ಮಾಡಬಹುದು. ಜೊತೆಗೆ, ಎಟಿಎಂ ಸೇವೆಗಳು 24 ಗಂಟೆಗಳೂ ಲಭ್ಯವಿರುವುದರಿಂದ ನಗದು ವಹಿವಾಟಿಗೆ ತೊಂದರೆ ಇರುವುದಿಲ್ಲ.

ಇದನ್ನು ನೋಡಿ : ಹಿಂದುಳಿದ ವರ್ಗದ ನಾಯಕತ್ವಕ್ಕೆ ಪೆಟ್ಟು – SIDDU ರಾಜೀನಾಮೆಗೆ BOMMAI ಹೀಗ್ಯಾಕಂದ್ರು?




