BBK : ವೀಕೆಂಡ್ ಮುಗಿದ ಬೆನ್ನಲ್ಲೇ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಕಾವು ಜೋರಾಗಿದೆ.

BBK : ವೀಕೆಂಡ್ ಮುಗಿದ ಬೆನ್ನಲ್ಲೇ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಕಾವು ಜೋರಾಗಿದೆ. ವಿಶೇಷ ಅಂದ್ರೆ ಈ ಬಾರಿ ರಕ್ಷಿತಾ, ಗಿಲ್ಲಿ ನಟನ ಟಾರ್ಗೆಟ್ ಮಾಡಿದ್ದಾರೆ.
ನಾಮಿನೇಷನ್ ಪ್ರಕ್ರಿಯೆ ಈ ಬಾರಿ ತುಂಬಾ ವಿಭಿನ್ನ
ನಾಮಿನೇಷನ್ ಪ್ರಕ್ರಿಯೆ ಈ ಬಾರಿ ತುಂಬಾ ವಿಭಿನ್ನವಾಗಿದ್ದು, ಗಾರ್ಡನ್ ಏರಿಯಾದಲ್ಲಿ ಸದಸ್ಯರ ಬಟ್ಟೆಗಳನ್ನು ಇಡಲಾಗಿತ್ತು. ಪ್ರತಿಯೊಬ್ಬರು ತಮ್ಮ ಟಾರ್ಗೆಟ್ ಸದಸ್ಯರ ಬಟ್ಟೆಯನ್ನು ತೆಗೆದು ಕಲ್ಲಿಗೆ ಹೊಡೆಯಬೇಕು, ಕೊಳೆಯನ್ನು ತೆಗೆಯಬೇಕು ಮತ್ತು ನಂತರ ನಾಮಿನೇಷನ್ ಮಾಡಬೇಕಾಗಿದೆ.
ಧ್ರುವಂತ್ ಅವರನ್ನು ನಾಮಿನೇಟ್ ಜಾಹ್ನವಿ
ಈ ಸಂದರ್ಭದಲ್ಲಿ ಜಾಹ್ನವಿ ಧ್ರುವಂತ್ ಅವರನ್ನು ನಾಮಿನೇಟ್ ಮಾಡಿದ್ದಾರೆ, ಧ್ರುವಂತ್ ಅಶ್ವಿನಿ ಗೌಡರ ಹೆಸರನ್ನು ತೆಗೆದುಕೊಂಡಿದ್ದಾರೆ. ಅಶ್ವಿನಿ ಗೌಡ ಒಂದು ಫೇಕ್ ಮುಖವಾಡ ಹಾಕಿಕೊಂಡಿದ್ದಾರೆ. ಈ ಮನೆಯನ್ನು ಜಾಹ್ನವಿ ಹಾಗೂ ಅಶ್ವಿನಿ ಮಿಸ್ ಲೀಡ್ ಮಾಡಿದಷ್ಟು ಬೇರೆ ಯಾರೂ ಮಾಡಿಲ್ಲ ಎಂದು ಕೂಗಾಡಿದ್ದಾರೆ.
ಇದನ್ನು ಓದಿ : Bengaluru Murder Case : ಸ್ನೇಹಿತೆಯ ರೂಮ್ಗೆ ಕರೆದೊಯ್ದು ಯುವತಿಯನ್ನು ಭೀಕರವಾಗಿ ಕೊಲೆ ಮಾಡಿದ ಯುವಕ
ಅಷ್ಟಕ್ಕೆ ಕೋಪಿಸಿಕೊಂಡ ಅಶ್ವಿನಿ ಗೌಡ “ನೀವು ಫೇಕ್. ನಾವಲ್ಲ. ನೀವು ನಮ್ಮನ್ನ ತೆಕ್ಕೆಗೆ ತೆಗೆದುಕೊಳ್ಳಲು ನೀಡಿದ್ರಿ. ನಾವು ಮಲ್ಲಮ್ಮ ಅಲ್ಲ. ನಿಮ್ಮ ತೆಕ್ಕೆಗೆ ಬೀಳೋದಕ್ಕೆ ಮಲ್ಲಪ್ಪ ಅಲ್ಲ,” ಎಂದು ಕೂಗಿದ್ದಾರೆ.
ಗಿಲ್ಲಿಯನ್ನು ನಾಮಿನೇಟ್ ಮಾಡಿದ ರಕ್ಷಿತಾ
ಇನ್ನೊಂದು ವಿಚಾರ ಅಂದ್ರೆ ಇದೇ ಮೊದಲ ಬಾರಿಗೆ ರಕ್ಷಿತಾ ಶೆಟ್ಟಿ ಗಿಲ್ಲಿಯ ಹೆಸರನ್ನು ನಾಮಿನೇಷನ್ನಲ್ಲಿ ತೆಗೆದುಕೊಂಡಿದ್ದಾರೆ. ಕಳೆದ ಎರಡು ವಾರಗಳಿಂದ ಗಿಲ್ಲಿ ಮತ್ತು ರಕ್ಷಿತಾ “ನಮ್ಮ ವಂಶಕದ ಕುಡಿ” ಎಂದು ಹೇಳಿಕೊಂಡಿದ್ದರು. ಅಶ್ವಿನಿ ಗೌಡ ಮತ್ತು ಜಾಹ್ನವಿ ಹೊರಹೋಗುವ ವೇಳೆಗೆ ಗಿಲ್ಲಿ ರಕ್ಷಿತಾ ಪರ ನಿಂತಿದ್ದರು. ಆದರೆ ಇದೀಗ ರಕ್ಷಿತಾ ಗಿಲ್ಲಿಯ ವಿರುದ್ಧ ತಿರುಗಿ ಬಿದ್ದಿದ್ದು, ನಾಮಿನೇಟ್ ಮಾಡಿದ್ದಾರೆ.
ಇದನ್ನು ನೋಡಿ : ಮಾಜಿ ಪುರಸಭೆ ಅಧ್ಯಕ್ಷರ ಅಣ್ಣನ ಮಗ ಸಾ* – PWD ಇಲಾಖೆಯ ಬೇಜವಾಬ್ದಾರಿಯಿಂದ ಯುವಕ ಬಲಿ..?




