Bengaluru Murder Case : ಬೆಂಗಳೂರು ತಮ್ಮೇನಹಳ್ಳಿಯಲ್ಲಿ ಯುವತಿ ದೇವಿಶ್ರೀ ಭೀಕರ ಹತ್ಯೆ. ಸ್ನೇಹಿತೆಯ ರೂಮ್ಗೆ ಕರೆದೊಯ್ದ ಯುವಕ ಪ್ರೇಮ್ ವರ್ಧನ್ ಪರಾರಿ. ಪ್ರಕರಣದಲ್ಲಿ FIR, ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.

Bengaluru Murder Case : ತಮ್ಮೇನಹಳ್ಳಿಯಲ್ಲಿ ಯುವತಿಯ ನಿಗೂಢ ಹತ್ಯೆ
ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಯುವತಿಯೊಬ್ಬಳ ಭೀಕರ ಹತ್ಯೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಹಿಡಿಯಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಸ್ನೇಹಿತೆಯ ರೂಮ್ಗೆ ಕರೆದುಕೊಂಡು ಹೋಗಿ ಕೊಲೆ
ಘಟನೆ ಪ್ರಕಾರ, ಯುವಕ ಪ್ರೇಮ್ ವರ್ಧನ್ ಯುವತಿ ದೇವಿಶ್ರೀ (21) ಅವರನ್ನು ತನ್ನ ಸ್ನೇಹಿತೆಯ ರೂಮ್ಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯೇ ಆಕೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ಯುವಕ ಒಬ್ಬನೇ ವಾಪಸ್ ಆಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಮೃತರು ಆಂಧ್ರ ಮೂಲದ ವಿದ್ಯಾರ್ಥಿನಿ
ಮೃತ ದೇವಿಶ್ರೀ ಮೂಲತಃ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದವರಾಗಿದ್ದರು. ಅವರು ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪ್ರತಿಷ್ಠಿತ ಕಾಲೇಜಿನಲ್ಲಿ BBM ವ್ಯಾಸಂಗ ಮಾಡುತ್ತಿದ್ದ ಯುವತಿ. ಪೋಷಕರು ರೆಡ್ಡಪ್ಪ ಮತ್ತು ಜಗದಂಬಾ ಅವರ ಕೊನೆಯ ಮಗಳು
ಭಾನುವಾರ ಬೆಳಗ್ಗೆ ದೇವಿಶ್ರೀ ಪ್ರೇಮ್ ವರ್ಧನ್ ಜೊತೆಗೆ ರೂಮ್ಗೆ ತೆರಳಿದ್ದರು ಎಂದು ಹೇಳಲಾಗಿದೆ.
ಇದನ್ನು ಓದಿ : Madhugiri Death|ಮಧುಗಿರಿ ಮಾಜಿ ಪುರಸಭೆ ಅಧ್ಯಕ್ಷರ ಅಣ್ಣನ ಮಗ ಸಾವು
ಸೋಮವಾರ ಬೆಳಗ್ಗೆ ಘಟನೆ ಬೆಳಕಿಗೆ
ಘಟನೆ ನಡೆದ ದಿನ ಯುವಕ ಮಾತ್ರ ವಾಪಸ್ ಬಂದಿರುವುದನ್ನು ಕಂಡು ಸ್ನೇಹಿತರು ಅನುಮಾನ ಪಟ್ಟು ಪರಿಶೀಲನೆ ನಡೆಸಿದ್ದಾಗ, ಯುವತಿಯ ಶವ ಪತ್ತೆಯಾಗಿದೆ. ನಂತರ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ ತನಿಖೆ ವೇಗ
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಾಗಿದ್ದು, ಪ್ರೇಮ್ ವರ್ಧನ್ ಪರಾರಿಯಾಗಿದ್ದು , ಬಂಧಿಸಲು ತಂಡಗಳಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ
ಘಟನೆಯ ನಿಖರ ಕಾರಣ ಇನ್ನೂ ಬಹಿರಂಗವಾಗದಿದ್ದರೂ, ಪೊಲೀಸರು ಹತ್ಯೆಯ ಉದ್ದೇಶ, ವ್ಯಕ್ತಿಗತ ವೈಮನಸ್ಸು, ಸಂಬಂಧದ ಅಸಮಾಧಾನ ಸೇರಿದಂತೆ ಹಲವು ಕೋಣಗಳಿಂದ ತನಿಖೆ ಮುಂದುವರೆಸಿದ್ದಾರೆ.




