Madhugiri : ಮಧುಗಿರಿ ಮಾಜಿ ಮುನ್ಸಿಪಾಲ್ ಅಧ್ಯಕ್ಷರ ಅಣ್ಣನ ಮಗನಾದ ಮಧು ಪಾಳೇಗಾರ ಎಂಬುವವರು ರಸ್ತೆ ಮಾರ್ಗದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮಧುಗಿರಿ ಮಾಜಿ ಮುನ್ಸಿಪಾಲ್ ಅಧ್ಯಕ್ಷರ ಅಣ್ಣನ ಮಗನಾದ ಮಧು ಪಾಳೇಗಾರ ಎಂಬುವವರು ರಸ್ತೆ ಮಾರ್ಗದಲ್ಲಿ ಶವವಾಗಿ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೆರೆ- ನೇರಳೆಕೆರೆ ರಸ್ತೆ ಮಾರ್ಗವು ಅವೈಜ್ಞಾನಿಕವಾಗಿದ್ದು, ಅಪಘಾತ ಸಂಭವಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ
ಮೃತ ಯುವಕ ಮಧು ಮೂರು ದಿನಗಳ ಹಿಂದೆ ರಾತ್ರಿ ವೇಳೆ ಮನೆಗೆ ವಾಪಸ್ ಆಗುವ ವೇಳೆ ರಸ್ತೆ ಬದಿ ಬಿದ್ದು, ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇನ್ನು ಈ ಹಿಂದೆ ಅವರ ಕುಟುಂಬದವರು ಕಾಣೆಯಾಗಿದ್ದಾರೆ ಎಂದು ದೂರು ನೀಡಲಾಗಿತ್ತು.
ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ಹುಡುಕಾಟ ನಡೆಸಿದ್ರು, ಯುವಕ ಮಧು ಮಾತ್ರ ಪತ್ತೆಯಾಗಿರಲಿಲ್ಲ. ಆದ್ರೆ ಎಫ್ಐಆರ್ ದಾಖಲಾಗಿ ಮೂರು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾರೆ.
ಇದನ್ನು ಓದಿ : Tamil Nadu Bus Accident : 2 ಬಸ್ಸುಗಳ ಮುಖಾಮುಖಿ ಡಿಕ್ಕಿ – 6 ಸಾವು, 28 ಮಂದಿಗೆ ಗಾಯ

PWD ಇಲಾಖೆಯ ಬೇಜವಾಬ್ದಾರಿಯಿಂದ ಯುವಕ ಬಲಿ..?
ಇನ್ನು ಈ ರಸ್ತೆಯಲ್ಲಿ ವಾರಕ್ಕೆ ಒಂದು ಅಪಘಾತವಾಗುತ್ತಿದ್ದು, ಈ ರಸ್ತೆಯಲ್ಲಿ ಕ್ರಾಸಿಂಗ್ ಜಾಸ್ತಿಯಿದೆ. ಹೀಗಾಗಿ ಗಾಡಿಗಳು ಕಾಣೊದಿಲ್ಲ, ಈ ಬಗ್ಗೆ ಇಂಜಿನಿಯರ್ ಬಳಿ ಮಾತನಾಡಿ ಬಲಭಾಗಕ್ಕೆ ರಸ್ತೆ ಮಾಡಿ ಅಂತ ಮನವಿಯನ್ನು ಮಾಡಿಕೊಳ್ಳಲಾಗಿತ್ತು. ರಸ್ತೆ ಮಾಡದೇ ಬ್ಯಾರಿಕೇಡ್ ಅಳವಡಿಸಿದ್ದು ಅಪಫಾತಕ್ಕೆ ನೇರ ಕಾರಣವಾಗಿದೆ.
ಅಲ್ದೇ ಕಾಮಗಾರಿಯ ಸ್ಥಳದಲ್ಲಿ ಎಚ್ಚರಿಕೆಯ ಸೂಚನಾ ಫಲಕ ಆಗಲಿ ಲೈಟ್ ಆಗಲಿ ಇಲ್ಲದಿರೋದ್ರಿಂದ ಅಪಘಾತ ಸಂಭವಿಸ್ತಿದ್ದು. ಪ್ರತಿ ತಿಂಗಳು ಅಪಘಾತಗಳಾಗಿ ಸಾವುಗಳು ಆಗುತ್ತಿವೆ. ಪಕ್ಕದಲ್ಲಿ ಹಳ್ಳ ಇದ್ದು ಅಲ್ಲಿ ಬಿದ್ರೂ ಯಾರಿಗೂ ಗೊತ್ತಾಗಲ್ಲ. ಕೂಡಲೇ ಸಂಬಂಧಪಟ್ಟ ಅದಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡ್ಬೇಕು, ಇಲ್ಲದಿದ್ರೆ ಉಗ್ರ ಹೋರಾಟ ಮಾಡ್ತೇವೆ ಎಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ರು.
ಪೋಲೀಸರು ಭೇಟಿ, ಪರಿಶೀಲನೆ
ಸದ್ಯ ವಿಷಯ ತಿಳಿದು ಮಿಡಿಗೇಶಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನು ನೋಡಿ : ಕಳೆದ ಚುನಾವಣೆಯಲ್ಲಿ ವೈಯಕ್ತಿಕ ಸಮಸ್ಯೆಗಳಿಂದ ಸೋಲಾಗಿದೆ- ಹೀಗ್ಯಾಕಂದ್ರು ಮಾಜಿ ಶಾಸಕ ಡಿ.ಸಿ ಗೌರಿಶಂಕರ್




