Haveri Suicide : ಪತ್ನಿ, ಅತ್ತೆ-ಮಾವನ ಕಿರುಕುಳಕ್ಕೆ ಬೇಸತ್ತು ವೀಡಿಯೋ ಮಾಡಿಟ್ಟು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಪತ್ನಿ, ಅತ್ತೆ-ಮಾವನ ಕಿರುಕುಳಕ್ಕೆ ಬೇಸತ್ತು ವೀಡಿಯೋ ಮಾಡಿಟ್ಟು ಪತಿ (Husband) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ (Haveri) ಜಿಲ್ಲೆ ಹಿರೇಕೆರೂರು (Hirekerur) ತಾಲೂಕಿನ ವರಹ ಗ್ರಾಮದಲ್ಲಿ ನಡೆದಿದೆ.
ಅತ್ತೆ-ಮಾವನ ಕಿರುಕುಳಕ್ಕೆ ಬೇಸೆತ್ತು ಆತ್ಮಹತ್ಯೆ
ಮಂಜುನಾಥ್ ಚಿಲ್ಲೋಜಿ (26) ಆತ್ಮಹತ್ಯೆ ಮಾಡಿಕೊಂಡ ಪತಿ. ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮ ನಿವಾಸಿ ಮಂಜುನಾಥ್ ಕುರಿಗಾಹಿಯಾಗಿದ್ದರು. ತಮ್ಮ ಪತ್ನಿ ಹಾಗೂ ಅತ್ತೆ-ಮಾವನ ಕಿರುಕುಳಕ್ಕೆ (Harassement) ಬೇಸತ್ತು ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನು ಓದಿ : Sira | ಆಕಸ್ಮಿಕ ಬೆಂಕಿ ಅವಘಡಕ್ಕೆ ಹೊತ್ತಿ ಉರಿದ ಗುಡಿಸಲು
ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣು
ಮಂಜುನಾಥ್ ಆತ್ಮಹತ್ಯೆಗೆ ಮೊದಲು ವಿಡಿಯೋ ಮಾಡಿ ಮನೋವೈಕಲ್ಯ ಹಾಗೂ ತಮ್ಮ ಮೇಲೆ ಆಗಿರುವ ಮಾನಸಿಕ ಹಿಂಸೆ ಕುರಿತು ವಿವರಿಸಿದ್ದಾರೆ. ಪತ್ನಿ, ಅವರ ತಂದೆ-ತಾಯಿ ಮತ್ತು ಅವರ ಮಾವರಾದ ಭೀರಪ್ಪ, ಹೊನ್ನಸಿದ್ದಪ್ಪ ಹಾಗೂ ರಾಜಪ್ಪ ವಿರುದ್ಧ ಮಾನಸಿಕ ಹಿಂಸೆಯ ಆರೋಪಿಸಲಾಗಿದೆ.
ಹಿರೇಕೆರೂರು ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡಿದ್ದಾರೆ ಮತ್ತು ತನಿಖೆ ಆರಂಭಿಸಿದ್ದಾರೆ.
ಇದನ್ನು ನೋಡಿ : ಬಿಸಿಎಂ ಹಾಸ್ಟೆಲ್ಗೆ ಉಪಲೋಕಾಯುಕ್ತ ವೀರಪ್ಪ ದಿಢೀರ್ ವಿಸಿಟ್ – ಅಧಿಕಾರಿಗಳಿಗೆ ಫುಲ್ ಕ್ಲಾಸ್




