Sira Fire : ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಧಗಧಗಿಸಿದ್ದು, ಗುಡಿಸಲಿನಲ್ಲಿದ್ದ ನಗದು ಹಾಗೂ ದಾಖಲೆ ಪತ್ರಗಳು ಸುಟ್ಟುಕರಕಾಲಗಿರೋ ದಾರುಣ ಘಟನೆ ಶಿರಾದಲ್ಲಿ ನಡೆದಿದೆ.

ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಧಗಧಗಿಸಿದ್ದು, ಗುಡಿಸಲಿನಲ್ಲಿದ್ದ ನಗದು ಹಾಗೂ ದಾಖಲೆ ಪತ್ರಗಳು ಸುಟ್ಟುಕರಕಾಲಗಿರೋ ದಾರುಣ ಘಟನೆ ಶಿರಾ ತಾಲೂಕಿನ ಬಂದಕುಂಟೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಗುಡಿಸಲು ಹಾಗೂ ಗುಡಿಸಲಿನಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಗುಡಿಸಲಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದ್ರೆ ಗುಡಿಸಲು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಾಕಿದ್ರು.
ಆಕಸ್ಮಿಕ ಬೆಂಕಿ ಅವಘಡಕ್ಕೆ ಹೊತ್ತಿ ಉರಿದ ಗುಡಿಸಲು
ಶಿರಾ ತಾಲೂಕಿನ ಬಂದಕುಂಟೆ ಗೊಲ್ಲರಹಟ್ಟಿಯ ತಿಮ್ಮಕ್ಕ ಹಾಗೂ ಯೋಗೀಶ್ ಎಂಬುವವರಿಗೆ ಸೇರಿದ ಗುಡಿಸಲಿನಲ್ಲಿ ರಾತ್ರಿ ಇದ್ದಕ್ಕಿದ್ದ ಹಾಗೆ ಗುಡಿಸಲು ಧಗಧಗ ಹೊತ್ತಿ ಉರಿದಿದೆ.
ಬೆಂಕಿಯ ಕೆನ್ನಾಲಗೆಗೆ ಗುಡಿಸಲು ಸಂಪೂರ್ಣವಾಗಿ ಭಸ್ಮವಾಗಿದ್ದು, ಗುಡಿಸಲಿನಲ್ಲಿದ್ದ 3 ಲಕ್ಷ ನಗದು, ದಾಖಲೆ ಪತ್ರಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಬೆಂಕಿ ಅವಘಡ ಸಂದರ್ಭದಲ್ಲಿ ಗುಡಿಸಲಿನಲ್ಲಿ ಯಾರು ಇಲ್ಲದಿರೋದ್ರಿಂದ ಯಾವುದೇ ಪ್ರಾಣಹಾನಿ ಸಂಭವಿಸಿದೆ.
ಇದನ್ನು ಓದಿ : Gold Price Today : ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ
ಗುಡಿಸಲಿನಲ್ಲಿ ಇದ್ದ ವಸ್ತುಗಳು ಸುಟ್ಟು ಕರಕಲು
ಗೊಲ್ಲರಹಟ್ಟಿ ಗ್ರಾಮದಲ್ಲಿ ಕಳೆದ ರಾತ್ರಿ ದೇವರ ಉತ್ಸವ ನಡೆಯುತ್ತಿದ್ದು, ಮನೆಯವರೆಲ್ಲರೂ ಉತ್ಸವಕ್ಕೆ ಹೋಗಿದ್ದ ವೇಳೆ ಗುಡಿಸಲಿಗೆ ಬೆಂಕಿ ತಗುಲಿದೆ. ಕೂಡಲೇ ಸ್ಥಳೀಯರು ಕರೆ ಮಾಡಿ ಗುಡಿಸಲಿಗೆ ಬೆಂಕಿ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ್ದು, ದೇವಸ್ಥಾನಕ್ಕೆ ತರಿಸಲಾಗಿದ್ದು ನೀರಿನ ಟ್ಯಾಂಕರ್ ಸಹಾಯದಿಂದ ಬೆಂಕಿ ನಂದಿಸುವ ಕೆಲಸ ಮಾಡಲಾಗಿದೆ.
ಆದರೆ ಬೆಂಕಿಯ ಕೆನ್ನಾಲಗೆಗೆ ಗುಡಿಸಲಿನಲ್ಲಿ ಇದ್ದ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಮನೆಯಲ್ಲಿದ್ದ ವಸ್ತುಗಳ ನಾಶವಾಗಿದ್ದರಿಂದ ಕುಟುಂಬಸ್ಥರು ಕಣ್ಣೀರಾಕಿದ್ರು. ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟ ಗೊಂಡಿದ್ದರಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗ್ತಿದೆ.
ಸ್ಥಳಕ್ಕೆ ಅಧಿಕಾರಿಗಳು, ಜೆಡಿಎಸ್ ಮುಖಂಡ ಭೇಟಿ
ಸದ್ಯಈ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. ಇತ್ತ ಘಟನಾ ಸ್ಥಳಕ್ಕೆ ಜೆಡಿಎಸ್ ಮುಖಂಡ ಆರ್ ಉಗ್ರೇಶ್ ಹಾಗೂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಟುಂಬಸ್ಥರಿಗೆ ಸರ್ಕಾರ ಸಹಾಯ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ರು.
ಇದನ್ನು ನೋಡಿ : JDS ಅಲ್ಲಿ ಇದ್ದಿದ್ದರೆ CM ಆಗ್ತಿರಲಿಲ್ಲ – ಸಿದ್ದು ಹೆಂಗೆ ಗುಟುರು ಹಾಕಿದ್ರು ಗೊತ್ತಾ




