Actress Rajini Marriage : ಕಿರುತೆರೆಯ ಜನಪ್ರಿಯ ನಟಿ ರಜಿನಿ (Rajini) ಅವರು ಸದ್ದಿಲ್ಲದೆ ಅರುಣ್ ಅವರನ್ನು ಮದುವೆಯಾಗಿದ್ದಾರೆ.

ಕಿರುತೆರೆಯ ಜನಪ್ರಿಯ ನಟಿ ರಜಿನಿ (Rajini) ಅವರು ಸದ್ದಿಲ್ಲದೆ ಮದುವೆಯಾಗಿದ್ದಾರೆ. ಅವರು ತಮ್ಮ ಸ್ನೇಹಿತ ಹಾಗೂ ಜಿಮ್ ಟ್ರೇನರ್ ಅರುಣ್ ವೆಂಕಟೇಶ್ (Arun Venkatesh) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
‘ಅಮೃತವರ್ಷಿಣಿ’ ಮೂಲಕ ಮನೆಮಾತಾದ ರಜಿನಿ
‘ಅಮೃತವರ್ಷಿಣಿ’ ಧಾರಾವಾಹಿಯ ಮೂಲಕ ರಜಿನಿ ಮನೆಮಾತಾದರು. ನಂತರ ‘ಹಿಟ್ಲರ್ ಕಲ್ಯಾಣ’ ಸೇರಿದಂತೆ ಅನೇಕ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಕೆಲ ಶೋಗಳನ್ನು ಅವರು ನಿರೂಪಕರಾಗಿ (Host) ಸಹ ಮಾಡಿದ್ದರು.
ಇದನ್ನು ಓದಿ : Bengaluru : ಆಟವಾಡುತ್ತಿದ್ದಾಗ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ದಾರುಣ ಸಾವು
ಅರುಣ್ ಜೊತೆಗಿನ ಸ್ನೇಹವೇ ಪ್ರೇಮಕ್ಕೆ ತಿರುಗಿತಾ?
ಅರುಣ್ ವೆಂಕಟೇಶ್ ಜಿಮ್ ಟ್ರೇನರ್ ಆಗಿದ್ದು, ರಜಿನಿಯೊಂದಿಗೆ ಹಲವಾರು Instagram Reels ಗಳಲ್ಲಿ ಕಾಣಿಸಿಕೊಂಡಿದ್ದರು. ‘ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ’ ಎಂದು ಕೆಲ ತಿಂಗಳ ಹಿಂದೆ ರಜಿನಿ ಅವರು ಸ್ಪಷ್ಟನೆ ನೀಡಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಸದ್ದು
ಇತ್ತೀಚಿನ ದಿನಗಳಲ್ಲಿ ರಜಿನಿ ಟಿವಿ ಸ್ಕ್ರೀನ್ನಿಂದ ದೂರವಾಗಿದ್ದರೂ, ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದರು. ಅರುಣ್ ಜೊತೆ ಮಾಡಿದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ನವೆಂಬರ್ 10ರಂದು ಮದುವೆ ನೆರವೇರಿತು
ಇಂದು ರಜಿನಿ ಮತ್ತು ಅರುಣ್ ವೆಂಕಟೇಶ್ ಮದುವೆ ನೆರವೇರಿದ್ದು, ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಶಾಸ್ತ್ರಗಳು ನಡೆದಿವೆ.

ಇದನ್ನು ನೋಡಿ : Bus Accident: ಕೆಕೆಆರ್ಟಿಸಿ ಸ್ಲೀಪರ್ ಕೋಚ್ ಬಸ್ ಪಲ್ಟಿ: ಸುಮಾರು 15 ಜನ ಪ್ರಯಾಣಿಕರಿಗೆ ಗಾಯ




