Two Boys Drown In Lake : ಆಟವಾಡುತ್ತಿದ್ದಾಗ ಕೆರೆಯ ಬಳಿ ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಹೊರವಲಯದ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದ ಕೆರೆಯಲ್ಲಿ ಇಬ್ಬರು ಬಾಲಕರು ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಮೃತರ ಗುರುತು
ಮೃತ ಬಾಲಕರನ್ನು ಅನಿಕೇತ್ ಕುಮಾರ್ (8) ಮತ್ತು ರೆಹಮಾತ್ ಬಾಬಾ (11) ಎಂದು ಗುರುತಿಸಲಾಗಿದೆ. ಅನಿಕೇತ್ ಕುಮಾರ್ ಅವರ ಪೋಷಕರು ಬಿಹಾರ ಮೂಲದವರು̤ ರೆಹಮಾತ್ ಬಾಬಾ ಪೋಷಕರು ಆಂಧ್ರಪ್ರದೇಶದ ಕದಿರಿ ಮೂಲದವರು ಎಂದು ತಿಳಿದುಬಂದಿದೆ.
ಇದನ್ನು ಓದಿ : Gold Price Today : ಚಿನ್ನ, ಬೆಳ್ಳಿ ಬೆಲೆ ಸೋಮವಾರ ಭರ್ಜರಿ ಏರಿಕೆ
ಆಟದ ವೇಳೆ ದುರಂತ
ಮೃತ ಬಾಲಕರು ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಿನ್ನೆ ಸಂಜೆ ಇಬ್ಬರೂ ಕೂಡ ಮನೆಯ ಹತ್ತಿರವೇ ಆಟ ಆಡಿಕೊಂಡಿದ್ದರು. ಆದರೆ, ಆಟ ಆಡುತ್ತಾ ಇಬ್ಬರೂ ಕೆರೆಯ ಬಳಿ ಬಂದಿದ್ದು, ಈ ಸಮಯದಲ್ಲಿ ನೀರನ್ನು ನೋಡಿ ಕೆರೆಗೆ ಇಳಿದಿದ್ದಾರೆ. ಆದರೆ, ಈಜು ಬರದ ಕಾರಣ, ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪೋಷಕರ ಆತಂಕ ಮತ್ತು ಹುಡುಕಾಟ
ಸಂಜೆಯಾದರೂ ಮಕ್ಕಳು ಮನೆಗೆ ಮರಳದ ಹಿನ್ನೆಲೆಯಲ್ಲಿ ಪೋಷಕರು ಆತಂಕಗೊಂಡು ಗ್ರಾಮದ ಸುತ್ತಮುತ್ತ ಹುಡುಕಾಟ ನಡೆಸಿದರು. ರಾತ್ರಿ ಪೂರ್ತಿ ಹುಡುಕಾಟ ಮುಂದುವರೆದರೂ ಮಕ್ಕಳ ಪತ್ತೆಯಾಗಲಿಲ್ಲ.
ಬೆಳಿಗ್ಗೆ ಪತ್ತೆಯಾದ ಶವಗಳು
ಇಂದು ಬೆಳಿಗ್ಗೆ ಸ್ಥಳೀಯರು ಕೆರೆಯಲ್ಲಿ ಎರಡು ಶವಗಳು ತೇಲುತ್ತಿರುವುದನ್ನು ಕಂಡು ಗ್ರಾಮಸ್ಥರು ತಕ್ಷಣವೇ ಅತ್ತಿಬೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು ಕೆರೆಯಿಂದ ಹೊರತೆಗೆದು ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಅಸ್ವಾಭಾವಿಕ ಸಾವಿನ ಪ್ರಕರಣ (UDR) ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಇದನ್ನು ನೋಡಿ : ಬೆಂಗಳೂರು: 2026ರ ಮಾರ್ಚ್ 31 ರವರೆಗೆ ಬೀದಿ ನಾಯಿಗಳಿಗೆ ಲಸಿಕೆ ಅಭಿಯಾನ ಆರಂಭ




