Rukmini Vasanth : ನಟಿ ರುಕ್ಮಿಣಿ ವಸಂತ್ ಅವರು, ಇತ್ತೀಚೆಗೆ ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಬಗ್ಗೆ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ನನ್ನ ಹೆಸರಿನಲ್ಲಿ ನಕಲಿ ಮೊಬೈಲ್ ನಂಬರನ್ನು ಬಳಸಿಕೊಂಡು ಜನರನ್ನು ಸಂಪರ್ಕಿಸುತ್ತಿದ್ದಾರೆ. ಆ ನಂಬರಿಗೂ ತಮಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

Rukmini Vasanth: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಹೆಸರನ್ನು ಬಳಸಿಕೊಂಡು ವಂಚನೆ ಮಾಡಲಾಗ್ತಿದೆ. ಇದೀಗ ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿಯೂ ವಂಚನೆ ನಡೆದಿರೋದು ಬೆಳಕಿಗೆ ಬಂದಿದೆ.
ರುಕ್ಮಿಣಿ ವಸಂತ್ ಹೆಸರಲ್ಲಿ ಸೈಬರ್ ವಂಚಕರ ಕಾಟ
‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ಕನಕವತಿ ಪಾತ್ರದಲ್ಲಿ ಮಿಂಚಿದ್ದ ರುಕ್ಮಿಣಿ ವಸಂತ್ ಹೆಸರಲ್ಲಿ ಸೈಬರ್ ಕಳ್ಳರ ಕಾಟ ಶುರುವಾಗಿದೆ. ಈ ಬಗ್ಗೆ ನಟಿ ರುಕ್ಮಿಣಿ ಅವರು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Rukmini Vasanth: ಕಲಾಂಕಾರಿ ಎಥ್ನಿಕ್ವೇರ್ನಲ್ಲಿ ಕಂಗೊಳಿಸಿದ ರುಕ್ಮಿಣಿ ವಸಂತ್
ಸೋಶಿಯಲ್ ಮೀಡಿಯಾದಲ್ಲಿ ನಟಿಯ ಎಚ್ಚರಿಕೆ ಮತ್ತು ಮನವಿ
9445893273 ಸಂಖ್ಯೆಯಿಂದ ರುಕ್ಮಿಣಿ ವಸಂತ್ ಎಂದು ಕೆಲವರಿಗೆ ಕರೆಗಳು ಹಾಗೂ ಮೆಸೇಜ್ಗಳು ಬರುತ್ತಿವೆ ಎಂದು ತಿಳಿಸಿದ್ದಾರೆ. “ಈ ಸಂಖ್ಯೆ ನನಗೆ ಸೇರಿದುದಲ್ಲ, ಇದರ ಮೂಲಕ ಬರುವ ಯಾವುದೇ ಕರೆ ಅಥವಾ ಮೆಸೇಜ್ ನಕಲಿ, ದಯವಿಟ್ಟು ಪ್ರತಿಕ್ರಿಯಿಸಬೇಡಿ” ಎಂದು ನಟಿ ಎಚ್ಚರಿಕೆ ನೀಡಿದ್ದಾರೆ.

ಹೆಚ್ಚುತ್ತಿರುವ ನಕಲಿ ಖಾತೆಗಳ ಅಪಾಯ
“ಈ ರೀತಿಯ ಕೃತ್ಯಗಳು ಸೈಬರ್ ಅಪರಾಧದ ವ್ಯಾಪ್ತಿಗೆ ಬರುತ್ತವೆ. ಇಂತಹ ವಂಚನೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಪರಿಶೀಲನೆ ಬೇಕಿದ್ದರೆ ನನ್ನ ತಂಡವನ್ನು ಸಂಪರ್ಕಿಸಬಹುದು. ಆನ್ಲೈನ್ನಲ್ಲಿ ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ,” ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆಗಳು ತೆರೆಯುವುದು, ಕರೆಗಳು ಹಾಗೂ ಸಂದೇಶಗಳ ಮೂಲಕ ಹಣ ವಸೂಲಿ ಮಾಡಲು ಯತ್ನಿಸುವ ಘಟನೆಗಳು ಹೆಚ್ಚುತ್ತಲಿದೆ.
MUST WATCH: KANTARA SHOW CANCELLED | S MALL ನಲ್ಲಿ ಫುಲ್ ಫೈಟ್ | KANTARA SHOW IN TUMKUR |




