Rukmini Vasanth : ನೇರಳೆ ಬಣ್ಣದ ಕಲಾಂಕಾರಿ ಎಥ್ನಿಕ್ವೇರ್ನಲ್ಲಿ ಕಾಂತಾರ ಚಾಪ್ಟರ್ 1 ಚಿತ್ರದ ನಾಯಕ ನಟಿ ರುಕ್ಮುಣಿ ವಸಂತ್ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ನೇರಳೆ ಬಣ್ಣದ ಕಲಾಂಕಾರಿ ಎಥ್ನಿಕ್ವೇರ್ನಲ್ಲಿ ಕಾಂತಾರ ಚಾಪ್ಟರ್ 1 ಚಿತ್ರದ ನಾಯಕ ನಟಿ ರುಕ್ಮುಣಿ ವಸಂತ್ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದ್ಯಾವ ಬಗೆಯ ಔಟ್ಫಿಟ್? ವಿಶೇಷತೆ ಏನು? ಅವರ ಲುಕ್ ಬಗ್ಗೆ ಫ್ಯಾಷನ್ ವಿಮರ್ಶಕರು ಹೇಳುವುದೇನು? ಇಲ್ಲಿದೆ ವಿವರ.
ನೇರಳೆ ಬಣ್ಣದ ಕಲಾಂಕಾರಿ ಎಥ್ನಿಕ್ವೇರ್ನಲ್ಲಿ ಮಿಂಚಿದ ರುಕ್ಮಿಣಿ
‘ಕಾಂತಾರ ಚಾಪ್ಟರ್ 1’ ಚಿತ್ರದ ಯಶಸ್ಸಿನ ನಂತರ ನಟಿ ರುಕ್ಮಿಣಿ ವಸಂತ್ ತಮ್ಮ ಸ್ಟೈಲಿಷ್ ಲುಕ್ಗಳಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಅವರು ಧರಿಸಿದ ಗಾಢ ನೇರಳೆ ಬಣ್ಣದ ಕಲಾಂಕಾರಿ ಎಥ್ನಿಕ್ವೇರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಫ್ಯಾಷನ್ ಪ್ರಿಯರಿಂದ ಮೆಚ್ಚುಗೆ ಗಳಿಸಿದೆ.

ಫೆಸ್ಟೀವ್ ಲುಕ್ಗೆ ಪರ್ಫೆಕ್ಟ್ ಆಯ್ಕೆ
ರುಕ್ಮಿಣಿ ಧರಿಸಿದ ನೇರಳೆ ಬಣ್ಣದ ಔಟ್ಫಿಟ್ ಒಂದು ಲೆಹೆಂಗಾ ಆಗಿದ್ದು, ಅದಕ್ಕೆ ಮ್ಯಾಚ್ ಆಗುವ ಪೆನ್ ಕಲಾಂಕಾರಿ ವಿನ್ಯಾಸದ ದುಪಟ್ಟಾ ಸ್ಟೈಲ್ಗೆ ಪೂರಕವಾಗಿದೆ. ಈ ಎಥ್ನಿಕ್ ಲುಕ್ ಅವರಿಗೆ ಒಂದು ಕ್ಲಾಸಿ ಹಾಗೂ ಫೆಸ್ಟೀವ್ ವೈಬ್ ನೀಡಿದೆ.
ಇದನ್ನು ಓದಿ : ಗಿಲ್ಲಿಯ ‘ಕೆಂಪೇಗೌಡ’ ಮೀಸೆ ಬೋಳಿಸಿದ ಸ್ಪರ್ಧಿಗಳು

ಸ್ಟೈಲಿಂಗ್ ಟೀಮ್ ಮತ್ತು ಮೆಕಪ್ ಕ್ರೆಡಿಟ್
ರುಕ್ಮಿಣಿಯ ಈ ಸುಂದರ ಲುಕ್ ಹಿಂದೆ ಇರುವವರು ರುತುಜಾ, ಕೀರ್ತಿ ಮದುಸೂಧನ್ ಮತ್ತು ಪೂಜಾ ಅವರ ಸ್ಟೈಲಿಂಗ್ ತಂಡ. ಮೇಕಪ್ ಕ್ರೆಡಿಟ್ ಅಭಿಲಾಷಾ ಅವರಿಗೆ ಸಲ್ಲುತ್ತದೆ; ಹೇರ್ಸ್ಟೈಲಿಂಗ್ನ ಜವಾಬ್ದಾರಿ ಯಶ್ದೀಪ್ ವಹಿಸಿಕೊಂಡಿದ್ದರು. ಕುಂದನ್ ಕಾಲಿ ಜ್ಯುವೆಲರಿಗಳು ರುಕ್ಮಿಣಿಯ ಡಿಸೈನರ್ ಲುಕ್ಗೆ ಇನ್ನಷ್ಟು ಕಳೆ ನೀಡಿವೆ.

ಫ್ಯಾಷನ್ ವಿಮರ್ಶಕರ ಮೆಚ್ಚುಗೆ
ಫ್ಯಾಷನ್ ವಿಮರ್ಶಕರು ಹೇಳುವಂತೆ, ರುಕ್ಮಿಣಿಯ ಈ ನೇರಳೆ ಬಣ್ಣದ ಎಥ್ನಿಕ್ ಲುಕ್ ಫೆಸ್ಟೀವ್ ಸೀಸನ್ಗಾಗಿ ಪರ್ಫೆಕ್ಟ್ ಆಯ್ಕೆ ಆಗಿದೆ. ನೋಡುಗರ ಮನಸೆಳೆಯುವಲ್ಲಿ ಅವರು ಸಂಪೂರ್ಣ ಯಶಸ್ವಿಯಾಗಿದ್ದಾರೆ ಎಂದು ವಿಮರ್ಶಕರು ತಿಳಿಸಿದ್ದಾರೆ.

ಇದನ್ನು ನೋಡಿ : ಕಲಾಂಕಾರಿ ಎಥ್ನಿಕ್ವೇರ್ನಲ್ಲಿ ಕಂಗೊಳಿಸಿದ ನಟಿ ರುಕ್ಮಿಣಿ ವಸಂತ್




