BBK 12 : ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಗಡ್ಡ ಮೀಸೆ ಲುಕ್ನಲ್ಲೇ ಗಿಲ್ಲಿ ಸಖತ್ ಆಗೇ ಕಾಣಿಸಿಕೊಂಡಿದ್ದರು.

BBK 12 : ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಗಡ್ಡ ಮೀಸೆ ಲುಕ್ನಲ್ಲೇ ಗಿಲ್ಲಿ ಸಖತ್ ಆಗೇ ಕಾಣಿಸಿಕೊಂಡಿದ್ದರು. ಮೊನ್ನೆ ಮೊನ್ನೆಯಷ್ಟೆ ಕಾವ್ಯ ಮಾತು ಕೇಳಿ ಕೆಂಪೇಗೌಡ ಸ್ಟೈಲ್ನಲ್ಲಿ ಮೀಸೆ ಬಿಟ್ಟು ಗಡ್ಡ ತೆಗೆದಿದ್ರು. ಈಗ ಅದಕ್ಕೂ ಸಂಚಕಾರ ಬಂದಿದೆ. ಈ ವಾರ ಗಿಲ್ಲಿ ಅವರ ಲುಕ್ಗೆ ಭಾರೀ ಬದಲಾವಣೆ ಬಂದಿದೆ.
ಕಾವ್ಯ ಹೇಳಿದ್ರೆ… ಗಿಲ್ಲಿ ಮಾಡ್ತಾರೆ!
ಕಾವ್ಯ ಹೇಳಿದ ಮಾತಿಗೆ ಸ್ಪಂದಿಸಿ ಗಿಲ್ಲಿ ಸುದೀಪ್ ಅವರ “ಕೆಂಪೇಗೌಡ” ಸಿನಿಮಾದ ಸ್ಟೈಲ್ನಲ್ಲಿ ಗಡ್ಡ ತೆಗೆದಿದ್ದರು, ಮೀಸೆ ಮಾತ್ರ ಉಳಿಸಿಕೊಂಡಿದ್ದರು. ಈ ಲುಕ್ ಅವರಿಗೆ ಚೆನ್ನಾಗೇ ಸೂಟಾಗಿತ್ತು.
ಕ್ಯಾಪ್ಟನ್ ರಘು ನೀಡಿದ ಅಚ್ಚರಿ ಆದೇಶ
ಆದ್ರೆ ಕ್ಯಾಪ್ಟನ್ ಆಗಿ ರಘು ಹೊಸ ಟಾಸ್ಕ್ ನೀಡಿದ್ದು ಗಿಲ್ಲಿಗೆ ಅಚ್ಚರಿ ತಂದಿದೆ. ರಘು ಅವರ ಆದೇಶದಂತೆ ಗಿಲ್ಲಿ ತಮ್ಮ ಮೀಸೆಯನ್ನೂ ಕಳೆದುಕೊಳ್ಳಬೇಕಾದ ಸ್ಥಿತಿ ಬಂದಿದೆ. ರಘು ಸ್ವತಃ ತಮ್ಮ ಕೈಯಾರೆ ಗಿಲ್ಲಿಯ ಮೀಸೆಗೆ ಕತ್ತರಿ ಹಿಡಿದಿದ್ದಾರೆ.
ಇದನ್ನು ಓದಿ : ಬೆಂಗಳೂರು ರಸ್ತೆ ಗುಂಡಿಗೆ ಮತ್ತೊಂದು ಬಲಿ

ಧನುಷ್ ಮತ್ತು ಅಭಿಷೇಕ್ ಸಹಕಾರದಲ್ಲಿ ಗಡ್ಡ ಕತ್ತರಿ ಡ್ರಾಮಾ
ಈ ವೇಳೆ ಧನುಷ್ ಹಾಗೂ ಅಭಿಷೇಕ್ ಸಹಾಯಕ್ಕೆ ಬಂದಿದ್ದು, ಗಿಲ್ಲಿಯ ತೊಯ್ದಾಟಗಳ ಮಧ್ಯೆ ಅರ್ಧ ಮೀಸೆ ಕಳೆದುಕೊಂಡ ಘಟನೆ ಮನೆಯಲ್ಲಿ ಹಾಸ್ಯ-ಗಲಾಟೆ ಎರಡನ್ನೂ ಹುಟ್ಟು ಹಾಕಿದೆ.
ಪ್ರೇಕ್ಷಕರ ಕುತೂಹಲ: ಗಿಲ್ಲಿಯ ಹೊಸ ಲುಕ್ ಹೇಗಿದೆ?
ಇದೀಗ ಎಲ್ಲರ ಕುತೂಹಲ ಒಂದೇ — ಗಿಲ್ಲಿಯ ಹೊಸ ಲುಕ್ ಹೇಗಿದೆ?
ಗಡ್ಡ-ಮೀಸೆಯ ಅಟಿಟ್ಯೂಡ್ನಿಂದ ಖ್ಯಾತಿ ಪಡೆದ ಗಿಲ್ಲಿ ಈಗ ಕ್ಲೀನ್ ಶೇವ್ ಲುಕ್ನಲ್ಲಿ ಹೇಗೆ ಕಾಣಿಸ್ತಾರೆ ಅನ್ನೋದನ್ನ ನೋಡೋಕೆ ಇವತ್ತಿನ ಎಪಿಸೋಡ್ ಕಾತುರದಿಂದ ಎದುರುನೋಡುತ್ತಿದೆ.

ಇದನ್ನು ನೋಡಿ : ದೊಡ್ಮನೆಯಲ್ಲಿ ಕೆಂಪೇಗೌಡ ಲುಕ್ ಕೊಟ್ಟಿದ್ದ ಗಿಲ್ಲಿ ನಟ.. ಅರ್ಧ ಮೀಸೆ ಕಟ್!




