Gilli Nata : ದರ್ಶನ್ ನಟನೆಯ ಬಹು ನಿರೀಕ್ಷಿತ ಡೆವಿಲ್ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ‘ಬಿಗ್ ಬಾಸ್ ಸೀಸನ್ 12’ರ ಸ್ಪರ್ಧಿ ಆಗಿರೋ ಗಿಲ್ಲಿ ನಟಿಸಿದ್ದಾರೆ.

Gilli Nata : ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಡೆವಿಲ್’ (Devil) ಇದೀಗ ದೊಡ್ಡ ತಾರಾಗಣದೊಂದಿಗೆ ಸುದ್ದಿಯಲ್ಲಿದೆ. ಈ ಚಿತ್ರದಲ್ಲಿ ‘ಬಿಗ್ ಬಾಸ್ ಸೀಸನ್ 12’ ರ ಸ್ಪರ್ಧಿಯಾಗಿರುವ ಗಿಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಗಿಲ್ಲಿಯ ಲುಕ್ ಪೋಸ್ಟರ್ ರಿಲೀಸ್
ಚಿತ್ರ ತಂಡ ಗಿಲ್ಲಿಯ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಅವರ ಹೊಸ ಅವತಾರ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ಗಿಲ್ಲಿ ಅಭಿನಯಿಸಿರುವ ಪಾತ್ರವು ಅವರಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಡಲಿದೆ ಎಂಬ ನಿರೀಕ್ಷೆ ಇದೆ.
ಇದನ್ನು ಓದಿ : ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ
ಹಾಸ್ಯದಿಂದ ಮನ ಗೆದ್ದ ಗಿಲ್ಲಿ ಈಗ ‘ಡೆವಿಲ್’ನಲ್ಲಿ
ಪ್ರಸ್ತುತ ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಸಖತ್ ಮನರಂಜನೆ ನೀಡುತ್ತಿದ್ದು, ತಮ್ಮ ಹಾಸ್ಯಭರಿತ ನಡವಳಿಕೆಯಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಹಾಸ್ಯ ಮೂಲಕ ಗುರುತಿಸಿಕೊಂಡಿರುವ ಗಿಲ್ಲಿ, ‘ಡೆವಿಲ್’ ಚಿತ್ರದ ಪಾತ್ರ ಹೇಗಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಇನ್ನು ದರ್ಶನ್ ನಟನೆಯ ಡೆವಿಲ್ ಸಿನಿಮಾ ಡಿಸೆಂಬರ್ 12ರಂದು ಭರ್ಜರಿಯಾಗಿ ಬಿಡುಗಡೆಯಾಗಲಿದೆ.
ಇದನ್ನು ನೋಡಿ : ದರ್ಶನ್ ‘ಡೆವಿಲ್’ ಚಿತ್ರದಲ್ಲಿ ಗಿಲ್ಲಿ ನಟ.. ಪೊಸ್ಟರ್ ರಿಲೀಸ್..!




