Rain Alert : ಇಂದಿನಿಂದ ಬೆಂಗಳೂರು ಸೇರಿದಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Rain Alert : ರಾಜ್ಯದ ಹಲವು ಭಾಗಗಳಲ್ಲಿ, ವಿಶೇಷವಾಗಿ ಬೆಂಗಳೂರು, ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ, ಮುಂದಿನ ಕೆಲ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಹಿನ್ನೆಲೆ ಜನರು ಮತ್ತು ಮೀನುಗಾರರು ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆಯು ಸೂಚಿಸಿದೆ.
ನಗರದ ಗರಿಷ್ಠ ತಾಪಮಾನ
ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ. ಮಡಿಕೇರಿಯಲ್ಲಿ ಗರಿಷ್ಠ 28 ಡಿಗ್ರಿ, ಕನಿಷ್ಠ 17 ಡಿಗ್ರಿ ತಾಪಮಾನ ದಾಖಲಾಗಲಿದೆ.
ಇದನ್ನು ಓದಿ : ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಆಡಳಿತಾಧಿಕಾರಿ ಲೋಕಾ ಬಲೆಗೆ..!
ಪ್ರಮುಖ ನಗರಗಳ ಹವಾಮಾನ ವರದಿ
- ಬೆಂಗಳೂರು: 27° / 21°
- ಮಂಗಳೂರು: 29° / 23°
- ಶಿವಮೊಗ್ಗ: 31° / 19°
- ಮೈಸೂರು: 31° / 19°
- ಮಡಿಕೇರಿ: 28° / 17°
- ಉಡುಪಿ: 29° / 22°
- ಕಾರವಾರ: 30° / 22°
- ಚಿಕ್ಕಮಗಳೂರು: 28° / 16°
- ರಾಯಚೂರು: 32° / 24°
- ಕಲಬುರಗಿ: 31° / 24°
- ಮಂಡ್ಯ: 31-20
- ರಾಮನಗರ: 29-21
- ಹಾಸನ: 28-17
- ಚಾಮರಾಜನಗರ: 32-21
- ಚಿಕ್ಕಬಳ್ಳಾಪುರ: 27-19
- ಕೋಲಾರ: 27-21
- ತುಮಕೂರು: 27-19
- ಉಡುಪಿ: 29-22
- ದಾವಣಗೆರೆ: 31-20
ಕೆಲವು ಪ್ರದೇಶಗಳಲ್ಲಿ ಮಳೆಗಾಲದ ಚಂಡಮಾರುತ
ಹವಾಮಾನ ಇಲಾಖೆ ಪ್ರಕಟಿಸಿರುವ ಮುನ್ಸೂಚನೆಯ ಪ್ರಕಾರ, ಕೆಲವು ಪ್ರದೇಶಗಳಲ್ಲಿ ಮಳೆಗಾಲದ ಚಂಡಮಾರುತದ ಪರಿಣಾಮದಿಂದ ಗಾಳಿ ವೇಗ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿ ಭಾಗದ ಮೀನುಗಾರರು ಮುಂದಿನ ಕೆಲವು ದಿನಗಳು ಸಮುದ್ರಯಾನ ತಪ್ಪಿಸಲು ಸಲಹೆ ನೀಡಲಾಗಿದೆ.
ಇದನ್ನು ನೋಡಿ : ರಾಜ್ಯದ ಹವಾಮಾನ ವರದಿ 05-11-2025




