Lokayukta Raid : ತುಮಕೂರಿನಲ್ಲಿ ಗ್ರಾಮ ಆಡಳಿತಾಧಿಕಾರಿಯೋರ್ವ ಪಿತ್ರಾರ್ಜಿತ ಜಮೀನಿನ ಖಾತೆಯನ್ನ ಬದಲಾವಣೆ ಮಾಡಿಕೊಡಲು ಹತ್ತು ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.

Lokayukta Raid: ಪಿತ್ರಾರ್ಜಿತ ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಕ್ಯಾತ್ಸಂದ್ರ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಎಂಬುವರು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿದ್ದಾರೆ.
ಪಿತ್ರಾರ್ಜಿತ ಜಮೀನು ಖಾತೆ ಬದಲಾವಣೆ ಮಾಡಲು ಲಂಚ ಬೇಡಿಕೆ
ಊರ್ಡಿಗೆರೆ ಹೋಬಳಿಯ ಮಾಚನಹಳ್ಳಿಯ ಯೋಗೀಶ್ ತಾತ ಗಂಗಗುಡ್ಡಯ್ಯ ಹೆಸರಿನಲ್ಲಿದ್ದ ಮೈದಾಳ ಅಮಾನಿಕೆರೆ ಸರ್ವೆ ನಂಬರಿನ 38.25 ಗುಂಟೆ ಜಮೀನನ್ನು ತಂದೆ ಬಸವರಾಜು ಹೆಸರಿಗೆ ಖಾತೆ ಬದಲಾವಣೆ ಮಾಡಿಸಲು ಮಂಜುನಾಥ ₹10,000 ಪಡೆದು, ಬಳಿಕ ಮತ್ತಷ್ಟು ಹಣದ ಬೇಡಿಕೆ ಇಟ್ಟಿದ್ದಾರೆ.
ಲಂಚ ನೀಡಲು ಇಷ್ಟವಿಲ್ಲದೇ ಲೋಕಾಯುಕ್ತ ಅಧಿಕಾರಿಗೆ ದೂರು ನೀಡಿದ ವ್ಯಕ್ತಿ
ಇನ್ನು ಯೋಗೀಶ್ ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸ್ ಉಪಾಧೀಕ್ಷಕರಾದ ಡಾ. ಸಂತೋಷ್ ಕೆ.ಎಂ. ನೇತೃತ್ವದಲ್ಲಿ ಭ್ರಷ್ಟಾಚಾರ ನಿರೋಧ ಕಾಯ್ದೆ 1988ರ ಕಲಂ 7(b) ಅಡಿಯಲ್ಲಿ ಮಂಜುನಾಥ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : Chitradurga : ಚಿತ್ರದುರ್ಗದಲ್ಲಿ ಭ್ರಷ್ಠ ಅಧಿಕಾರಿಗೆ ಲೋಕಾಯುಕ್ತ ಶಾಕ್
10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ
ಊರ್ಡಿಗೆರೆ ಕಂದಾಯ ನಿರೀಕ್ಷಕರ ಕಚೇರಿ ಬಳಿ ಯೋಗೀಶ್ ರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಮಂಜುನಾಥ್ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು, ಆರೋಪಿಯನ್ನ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಲೋಕಾಯುಕ್ತ ತಂಡದ ಟ್ಯ್ರಾಪ್ ಯಶಸ್ವಿ
ಪೊಲೀಸ್ ಅಧೀಕ್ಷಕರಾದ ಲಕ್ಷ್ಮಿನಾರಾಯಣ ಎ.ವಿ. ಅವರ ಮಾರ್ಗದರ್ಶನದಲ್ಲಿ, ಉಪಾಧೀಕ್ಷಕರಾದ ಡಾ. ಸಂತೋಷ್ ಕೆ.ಎಂ. ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು ಬಿ. ಮೊಹಮ್ಮದ್ ಸಲೀಂ, ಕೆ. ಸುರೇಶ್, ಶಿವರುದ್ರಪ್ಪ ಮೇಟಿ, ರಾಜು ಟಿ. ಹಾಗೂ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
MUST WATCH: LOKA RAID | ಭ್ರಷ್ಟ ಪಿಡಿಒ ಹಾಗೂ ಬಿಲ್ ಕಲೆಕ್ಟರ್ಗೆ ಚಳಿ ಬಿಡಿಸಿದ ಲೋಕಾ




