POLITICAL NEWS: ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಂಗಳೂರಿನ ಟನಲ್ ರಸ್ತೆ ಯೋಜನೆಗೆ ವಿರೋಧದ ಕೂಗು ಜೋರಾಗಿ ಎದ್ದಿದೆ. ಬಿಜೆಪಿ ನಾಯಕರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿಯವರು ಸುರಂಗ ರಸ್ತೆ ನಿರ್ಮಿಸಿದರೆ ಅಭಿವೃದ್ಧಿ ಅಂತಾರೆ ಎಂದು ತಿರುಗೇಟು ನೀಡಿದ್ದಾರೆ.

POLITICAL NEWS: ರಾಜ್ಯ ಕಾಂಗ್ರೆಸ್ ಸರ್ಕಾರ ಉದ್ದೇಶಿಸಿರುವ ಬೆಂಗಳೂರಿನ ಟನಲ್ ರಸ್ತೆ ಯೋಜನೆ ಇದೀಗ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ವೈಯಕ್ತಿಕ ಲಾಭಕ್ಕಾಗಿ ಯೋಜನೆ ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ವಿರುದ್ಧ ಡಿಕೆಶಿ ತೀವ್ರ ಪ್ರತಿಕ್ರಿಯೆ ನೀಡಿದ್ದು, “ಬಿಜೆಪಿಯವರು ಸುರಂಗ ರಸ್ತೆ ನಿರ್ಮಿಸಿದರೆ ಅಭಿವೃದ್ಧಿ, ನಾವು ಮಾಡಿದರೆ ವಿವಾದವೇ?” ಎಂದು ಪ್ರಶ್ನಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಹಿಂದಿನ ಹೇಳಿಕೆಯ ವಿಡಿಯೋವನ್ನು ಹಂಚಿಕೊಂಡು, “ಟನಲ್ ರಸ್ತೆ ನನ್ನ ವೈಯಕ್ತಿಕ ಯೋಜನೆಯಲ್ಲ. ಇದು ಬೆಂಗಳೂರಿನ ಭವಿಷ್ಯಕ್ಕಾಗಿ ರೂಪಿತವಾದ ಯೋಜನೆ. ನಿತಿನ್ ಗಡ್ಕರಿ ಅವರೇ ಈ ಯೋಜನೆಯನ್ನು ಸಲಹೆ ನೀಡಿ ಬೆಂಬಲಿಸಿದ್ದಾರೆ,” ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ED RAID: ಅನಿಲ್ ಅಂಬಾನಿಗೆ ಇ.ಡಿ. ಶಾಕ್ – 3,084 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳು ಜಫ್ತಿ!
ಇದಕ್ಕೆ ವಿರುದ್ಧವಾಗಿ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಆರ್. ಅಶೋಕ್ ನೇತೃತ್ವದಲ್ಲಿ ಲಾಲ್ಬಾಗ್ ಉದ್ಯಾನವನದಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಯಿತು. ನೂರಾರು ಸಾರ್ವಜನಿಕರು ಟನಲ್ ರಸ್ತೆ ಯೋಜನೆ ವಿರೋಧಿಸಿ ಸಹಿ ಸಂಗ್ರಹದಲ್ಲಿ ಪಾಲ್ಗೊಂಡರು. ಈ ಯೋಜನೆಯಿಂದ ಲಾಲ್ಬಾಗ್ ಪರಿಸರಕ್ಕೆ ಹಾನಿಯಾಗಲಿದೆ ಎಂದು ತೇಜಸ್ವಿ ಸೂರ್ಯ ಎಚ್ಚರಿಸಿದ್ದಾರೆ.
MUST WATCH: KMF SCAM | ಮೂಕ ಜೀವಿಗಳ ಜೊತೆ KMF ಚೆಲ್ಲಾಟ? – ಕಳಪೆ ಫೀಡ್ಸ್ ಮಹಾ ದಂಧೆ ಬಯಲು | GUBBI NEWS |




