ED RAID : ಅನಿಲ್ ಅಂಬಾನಿ ವಾಸ ಇರುವ ಮನೆ ಸೇರಿದಂತೆ 3 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಇ.ಡಿ. ಜಫ್ತಿ ಮಾಡಿದೆ. ಸಿಬಿಐ ಮತ್ತು ಇ.ಡಿ. ಲಂಚ ನೀಡಿ ಬ್ಯಾಂಕ್ ಗಳಿಂದ ಸಾಲ ಪಡೆದ ಆರೋಪದಡಿ ಕೇಸ್ ದಾಖಲಿಸಿದ್ದವು. ಬಳಿಕ ಇ.ಡಿ. ಆಕ್ರಮ ಹಣ ವರ್ಗಾವಣೆಯ ಆರೋಪದಡಿ ಕೇಸ್ ದಾಖಲಿಸಿತ್ತು.

ED RAID: ಉದ್ಯಮಿ ಅನಿಲ್ ಅಂಬಾನಿಗೆ ಅಕ್ರಮ ಹಣ ವರ್ಗಾವಣೆ ಹಾಗೂ ಬ್ಯಾಂಕ್ ಸಾಲದ ಲಂಚ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಅನಿಲ್ ಅಂಬಾನಿಗೆ ಸೇರಿದ ದೇಶದ ವಿವಿಧ ನಗರಗಳ ಆಸ್ತಿಗಳನ್ನು ಜಫ್ತಿ ಮಾಡಿದೆ.
ಇನ್ನು ಮುಂಬೈನ ಬಾಂದ್ರಾದ ಪಾಲಿ ಹಿಲ್ನಲ್ಲಿರುವ ಅನಿಲ್ ಅಂಬಾನಿಯ ಬಂಗಲೆಯ ಜೊತೆಗೆ ದೆಹಲಿಯ ರಿಲಯನ್ಸ್ ಸೆಂಟರ್ ಸೇರಿದಂತೆ ಒಟ್ಟು 3,084 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳು ತಾತ್ಕಾಲಿಕವಾಗಿ ಜಫ್ತಿ ಆಗಿವೆ. ಅಲ್ದೇ ದೆಹಲಿ, ನೋಯ್ಡಾ, ಗಾಜಿಯಾಬಾದ್, ಮುಂಬೈ, ಪುಣೆ, ಥಾಣೆ, ಹೈದರಾಬಾದ್, ಚೆನ್ನೈ ಮತ್ತು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಗಳಲ್ಲಿ ಅನಿಲ್ ಅಂಬಾನಿ ಮಾಲೀಕತ್ವದ ವಸತಿ, ಕಚೇರಿ ಕಟ್ಟಡಗಳು ಹಾಗೂ ಭೂಮಿ ಇದ್ದು, ಅವುಗಳನ್ನು ಅಕ್ಟೋಬರ್ 31ರಂದು ಟ್ರಿಬ್ಯುನಲ್ ಆದೇಶದಂತೆ ಜಫ್ತಿ ಮಾಡಲಾಗಿದೆ.
ಇದನ್ನೂ ಓದಿ: World Cup Final: ಮಹಿಳಾ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ – ರೋಹಿತ್ ಶರ್ಮಾ ಭಾವುಕರಾದ ಕ್ಷಣ ವೈರಲ್!
ಇನ್ನು ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ ಕಂಪನಿಗಳ ಮೂಲಕ ಯೆಸ್ ಬ್ಯಾಂಕ್ನಿಂದ ಪಡೆದ ಹಣವನ್ನು ಆಕ್ರಮವಾಗಿ ವರ್ಗಾವಣೆ ಮಾಡಿ ಆಸ್ತಿಗಳನ್ನು ಖರೀದಿಸಲಾಗಿದೆ ಎಂಬ ಆರೋಪ ಇದೆ. 2017–19ರ ಅವಧಿಯಲ್ಲಿ ಯೆಸ್ ಬ್ಯಾಂಕ್ ಕ್ರಮವಾಗಿ 2,965 ಕೋಟಿ ಹಾಗೂ 2,045 ಕೋಟಿ ರೂಪಾಯಿ ಹೂಡಿಕೆ ಮಾಡಿತ್ತು. ಈ ಮೊತ್ತಗಳಲ್ಲಿ 3,300 ಕೋಟಿಗೂ ಹೆಚ್ಚು ಹಣವನ್ನು ಕಂಪನಿಗಳು ಮರುಪಾವತಿಸಲು ವಿಫಲವಾಗಿರುವುದರಿಂದ ಇ.ಡಿ. ತನಿಖೆ ಮುಂದುವರಿಸಿದೆ.
MUST WATCH: ಜೆಜೆಎಂ ಗುಂಡಿಗಳಿಂದ ಜನರಿಗೆ ಸಂಕಷ್ಟ ಪ್ರತಿನಿತ್ಯ ಶಾಗದಡು ಗ್ರಾಮಸ್ಥರ ಪರದಾಟ | SIRA NEWS |




