WORLD CUP FINAL: ಚೊಚ್ಚಲ ವಿಶ್ವಕಪ್ ಟ್ರೋಫಿಯನ್ನು ಟೀಮ್ ಇಂಡಿಯಾ ಮುಡಿಗೇರಿಸಿಕೊಂಡು ಇಡೀ ಭಾರತೀಯರ ಕನಸನ್ನು ನನಸು ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ 52 ರನ್ಗಳಿಂದ ಗೆಲುವು ಸಾಧಿಸಿದ ಭಾರತದ ನಾರಿಯರು ಮೈದಾನದಲ್ಲಿ ಓಡಾಡಿ ಬಿಗ್ ಸೆಲೆಬ್ರೆಟ್ ಮಾಡಿದರು. ಆಗ ಸ್ಟೇಡಿಯಂನ ಗ್ಯಾಲರಿಯಲ್ಲಿ ಕುಳಿತು ವೀಕ್ಷಣೆ ಮಾಡುತ್ತಿದ್ದ ಲೆಜೆಂಡರಿ ಬ್ಯಾಟರ್ ರೋಹಿತ್ ಶರ್ಮಾ ಹೃದಯಸ್ಪರ್ಶಿ ಕ್ಷಣಕ್ಕೆ ಕಾರಣರಾದರು.

WORLD CUP FINAL: ನವಿ ಮುಂಬೈಯ ಡಿ.ವೈ ಪಾಟೀಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ದಕ್ಷಿಣ ಆಫ್ರಿಕಾವನ್ನು 52 ರನ್ಗಳಿಂದ ಮಣಿಸಿ, ತನ್ನ ಚೊಚ್ಚಲ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಮೊದಲ ಬ್ಯಾಟಿಂಗ್ನಲ್ಲಿ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ಭರ್ಜರಿ ಪ್ರದರ್ಶನ ನೀಡಿದರೆ, ಬೌಲರ್ಗಳು ಅದ್ಭುತವಾಗಿ ಬೌಲಿಂಗ್ ಮಾಡಿ ಎದುರಾಳಿಗಳನ್ನು 246 ರನ್ಗಳಲ್ಲೇ ಆಲ್ಔಟ್ ಮಾಡಿದರು.
ಈ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಗಿದ್ದ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಪತ್ನಿ ರಿತಿಕಾ ಜೊತೆ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದರು. ಭಾರತದ ಗೆಲುವು ಖಚಿತವಾದ ಕ್ಷಣದಲ್ಲಿ ರೋಹಿತ್ ಕಣ್ಣೀರಿನಲ್ಲಿ ಭಾವನೆ ವ್ಯಕ್ತಪಡಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: UIDAI ಹೊಸ ನಿಯಮಗಳು ಜಾರಿಗೆ: ಆಧಾರ್ ನವೀಕರಣ ಈಗ ಎಲ್ಲಿಂದಲಾದರೂ ಸಾಧ್ಯ
2024ರ ವರ್ಲ್ಡ್ ಕಪ್ನಲ್ಲಿ ಸೋಲು ಕಂಡ ಬಳಿಕ, ಪುರುಷರ ತಂಡವನ್ನು ಟಿ20 ಮತ್ತು ಚಾಂಪಿಯನ್ಸ್ ಟ್ರೋಫಿ ಗೆಲುವಿನತ್ತ ಮುನ್ನಡೆಸಿದ್ದ ರೋಹಿತ್ ಶರ್ಮಾ, ಇದೀಗ ಮಹಿಳಾ ತಂಡದ ಐತಿಹಾಸಿಕ ಜಯದ ಸಾಕ್ಷಿಯಾಗಿದ್ದಾರೆ. ಈ ಜಯದಿಂದ ಇಡೀ ದೇಶದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
MUST WATCH: ಶಿಥಿಲಗೊಂಡಿದೆ ಓವರ್ ಹೆಡ್ ಟ್ಯಾಂಕ್ ಉದ್ಘಾಟನೆಗೊಂಡ 3 ತಿಂಗಳಿಗೆ ಹಾಳು | SIRA NEWS |




