BBK 12 : ಬಿಗ್ ಬಾಸ್ ಆರಂಭದಿಂದಲೂ ಆಶ್ವಿನಿ ಗೌಡ ಹಿಂದೆ ಸುತ್ತುತ್ತಿದ್ದ ಜಾಹ್ನವಿ ಈಗ ಇಬ್ಬರು ದೂರ ದೂರ ಆಗಿದ್ದಾರೆ.

BBK 12 : ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್, ಕಿಚ್ಚ ಸುದೀಪ್ ಅವರ ನಿರ್ವಹಣೆಯಲ್ಲಿ ಮತ್ತೊಮ್ಮೆ ರಂಗೇರಿದೆ. ಮನೆಯೊಳಗೆ ಯಾವ ಕ್ಷಣದಲ್ಲಾದರೂ ಜಗಳ ಎದ್ದು ಬರಬಹುದು ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ.
ಸ್ನೇಹಿತೆಯರ ನಡುವಿನ ಬಿರುಕು
ಇಷ್ಟು ದಿನ ಒಟ್ಟಾಗಿ ಓಡಾಡುತ್ತಿದ್ದ ಜಾಹ್ನವಿ ಮತ್ತು ಅಶ್ವಿನಿ ಗೌಡ ಈಗ ಪರಸ್ಪರ ವಿರೋಧಿಗಳಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇಬ್ಬರ ನಡುವೆ ಮಾತಿನ ಸಮರ ಉಂಟಾಗಿದೆ.
ಬಿಗ್ ಬಾಸ್ನ ಪ್ರಶ್ನೆಗೆ ಅಶ್ವಿನಿಯ ಕಟು ಉತ್ತರ
ಬಿಗ್ ಬಾಸ್ ಸ್ಪರ್ಧಿಗಳಿಗೆ “ಯಾರು ಮನೆಯಲ್ಲಿ ಇರಲು ಯೋಗ್ಯರಲ್ಲ?” ಎಂದು ಕೇಳಿದಾಗ, ಮೊದಲಿಗೆ ಮಾತನಾಡಿದ ಅಶ್ವಿನಿ ಗೌಡ, “ಜಾಹ್ನವಿ ಫ್ರೆಂಡ್ಶಿಪ್ನಿಂದ ನನಗೆ ಕಳಂಕ ಬಂದಿದೆ,” ಎಂದು ನೇರವಾಗಿ ಹೇಳಿದ್ದಾರೆ.
ಇದನ್ನು ಓದಿ : ಕೇವಲ 2,000 ಹಣಕ್ಕಾಗಿ ಹರಿಯಿತು ಯುವಕನ ನೆತ್ತರು

ಜಾಹ್ನವಿಯ ಸ್ಪಷ್ಟ ಪ್ರತಿಕ್ರಿಯೆ
ಇದಕ್ಕೆ ಉತ್ತರವಾಗಿ ಜಾಹ್ನವಿ, “ನೀವು ನಿಮ್ಮ ಆಟ ಆಡುತ್ತಿದ್ದೀರಾ ನಾನು ನನ್ನ ಆಟ ಆಡುತ್ತಿದ್ದೇನೆ. ಕೆಲವರ ಆಟ ವೇಗವಾಗಿ ಕಾಣಬಹುದು, ಕೆಲವರದು ನಿಧಾನವಾಗಿರಬಹುದು, ಆದರೆ ಗುರಿ ಎರಡಕ್ಕೂ ಒಂದೇ”ಎಂದು ಹೇಳಿದ್ದಾರೆ.
ಸ್ನೇಹದಿಂದ ಹಗೆತನದತ್ತ!
ಇನ್ನು ಇದಕ್ಕೆ ಅಶ್ವಿನಿ ಗೌಡ ಕೋಪದಿಂದ ಪ್ರತಿಕ್ರಿಯಿಸಿ, “ನನ್ನನ್ನು ಮುಂದೆ ಬಿಟ್ಟು ನೀವು ಹಿಂದೆ ತಮಾಷೆ ನೋಡುತ್ತಿದ್ದೀರಾ? ನನ್ನನ್ನು ಹೊರಹಾಕಲು ಕಾಯುತ್ತಿದ್ದೀರಾ? ಇಂಥ ಸ್ನೇಹಕ್ಕಿಂತ ಬ್ರೇಕ್ ಕೊಡುವುದು ಉತ್ತಮ,” ಎಂದು ಕಟುವಾಗಿ ಹೇಳಿದ್ದಾರೆ.
ಪ್ರೇಕ್ಷಕರಿಗೆ ಶಾಕ್
ಬಿಗ್ ಬಾಸ್ ಆರಂಭದಿಂದಲೇ ಅಶ್ವಿನಿ ಗೌಡ ಹಿಂದೆ ಸುತ್ತುತ್ತಿದ್ದ ಜಾಹ್ನವಿ ಈಗ ಅವರಿಂದ ದೂರವಾಗಿದ್ದಾರೆ. ಇಬ್ಬರು ಒಬ್ಬರಿಗೊಬ್ಬರು ಸ್ಟ್ಯಾಂಡ್ ತೆಗೆದುಕೊಂಡು ಮಾತನಾಡುತ್ತಿ ರುವುದನ್ನು ಕಂಡು ಪ್ರೇಕ್ಷಕರು ಶಾಕ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸ್ನೇಹ- ಪ್ರೀತಿ ಯಾವುದು ಕೆಲಸಕ್ಕೆ ಬರಲ್ಲ ಎಂಬುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಇದನ್ನು ನೋಡಿ : ನಿನ್ನ ಫ್ರೆಂಡ್ಶಿಪ್ನಿಂದ ನನಗೆ ಕಳಂಕ ಬಂತು.. ಜಾಹ್ನವಿ- ಅಶ್ವಿನಿ ಗೌಡ ನಡುವೆ ಬಿಗ್ ಫೈಟ್




