Belagavi : ಸಾಲವಾಗಿ ಕೊಟ್ಟ ಹಣ ಮರುಪಾವತಿಸದ ಸ್ನೇಹಿತನಿಗೆ ತನ್ನ ಸ್ನೇಹಿತನೇ ಚಟ್ಟ ಕಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಸಾಲವಾಗಿ ಕೊಟ್ಟ ಹಣ ಮರುಪಾವತಿಸದ ಸ್ನೇಹಿತನಿಗೆ ತನ್ನ ಸ್ನೇಹಿತನೇ ಚಟ್ಟ ಕಟ್ಟಿ ಪೊಲೀಸರಿಗೆ ಶರಣಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಘಟನೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ
ಸ್ನೇಹಿತರ ಮಧ್ಯೆ ಹಣದ ವಿವಾದ
ಮೃತನನ್ನು ಗಿರಿಯಾಲ ಗ್ರಾಮದ ಮಂಜುನಾಥ ಗೌಡರ (30) ಎಂದು ಗುರುತಿಸಲಾಗಿದೆ. ಆರೋಪಿಯಾಗಿರುವ ದಯಾನಂದ ಗುಂಡ್ಲೂರ ಕಳೆದ ವಾರ ಮಂಜುನಾಥನಿಗೆ 2 ಸಾವಿರ ಹಣವನ್ನು ಸಾಲವಾಗಿ ನೀಡಿದ್ದ. ಒಂದು ವಾರದೊಳಗೆ ಹಣ ಮರಳಿಸುವ ಭರವಸೆ ನೀಡಿದ್ದರೂ, ಮಂಜುನಾಥ ಹಣವನ್ನು ಮರಳಿಸದಿದ್ದರಿಂದ ಇಬ್ಬರ ಮಧ್ಯೆ ವಾಗ್ವಾದ ಉಂಟಾಗಿದೆ.
ಇದನ್ನು ಓದಿ : ಕಂದಕಕ್ಕೆ ಉರುಳಿದ ಕಂಟೈನರ್ ಲಾರಿ – ಇಬ್ಬರು ಸಾವು
ಜಗಳ ಕೊಲೆಗೆ ತಿರುಗಿದ ಘಟನೆ
ರಾತ್ರಿ ನಡೆದ ಜಗಳದ ಸಿಟ್ಟಿನಲ್ಲಿ ಬೆಳಗಿನ ಜಾವ ದಯಾನಂದ ಕೊಡಲಿಯಿಂದ ಮಂಜುನಾಥನ ಮೇಲೆ ದಾಳಿ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಗಾಯಗೊಂಡ ಮಂಜುನಾಥನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಪ್ರಾಣ ಬಿಟ್ಟಿದ್ದಾನೆ.

ಆರೋಪಿ ಪೊಲೀಸರಿಗೆ ಶರಣು
ಇನ್ನು ಘಟನೆಯ ನಂತರ ತನ್ನ ತಪ್ಪನ್ನು ಅರಿತುಕೊಂಡ ದಯಾನಂದ ಗುಂಡ್ಲೂರ ಸ್ವಯಂ ಪ್ರೇರಿತವಾಗಿ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣದ ಕುರಿತು ಬೈಲಹೊಂಗಲ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಗ್ರಾಮದಲ್ಲಿ ಆಘಾತದ ವಾತಾವರಣ
ಈ ಘಟನೆಯ ಸುದ್ದಿ ತಿಳಿದು ಗಿರಿಯಾಲ ಗ್ರಾಮದಲ್ಲಿ ಶೋಕ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೇವಲ ಎರಡು ಸಾವಿರ ರೂಪಾಯಿ ಸಾಲದ ವಿಚಾರಕ್ಕೆ ಜೀವ ಹೋಗಿರುವುದು ಎಲ್ಲರಿಗೂ ದುಃಖ ತಂದಿದೆ.

ಇದನ್ನು ನೋಡಿ : ಬೆಳಗಾವಿ | 2,000 ಹಣಕ್ಕಾಗಿ ಹರಿಯಿತು ಯುವಕನ ನೆತ್ತರು




