Rohit Sharma : ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಎರಡು ಕ್ಯಾಚ್ಗಳನ್ನು ಹಿಡಿದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಏಕದಿನ (IND vs AUS 3rd ODI) ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಎರಡು ಅದ್ಭುತ ಕ್ಯಾಚ್ಗಳನ್ನು ಹಿಡಿದು ಹೊಸ ಮೈಲುಗಲ್ಲು ಸಾಧಿಸಿದ್ದಾರೆ. ಈ ಎರಡು ಕ್ಯಾಚ್ಗಳೊಂದಿಗೆ ಅವರು ಭಾರತ ಪರ ಫೀಲ್ಡರ್ ಆಗಿ 100 ಕ್ಯಾಚ್ಗಳನ್ನು ಪೂರ್ತಿಗೊಳಿಸಿದ 6ನೇ ಭಾರತೀಯನಾದರು.
ಭಾರತ ಪರ ಫೀಲ್ಡರ್ ಆಗಿ 100+ ಕ್ಯಾಚ್ಗಳು (ODI)
ವಿರಾಟ್ ಕೊಹ್ಲಿ-163*
ಮೊಹಮ್ಮದ್ ಅಜರುದ್ದೀನ್-156
ಸಚಿನ್ ತೆಂಡೂಲ್ಕರ್-140
ರಾಹುಲ್ ದ್ರಾವಿಡ್-124
ಸುರೇಶ್ ರೈನಾ-102
ರೋಹಿತ್ ಶರ್ಮಾ-100*
ಹರ್ಷಿತ್ ರಾಣಾ ಬೌಲಿಂಗ್ದ ಬಿರುಗಾಳಿ!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ 46.4 ಓವರ್ಗಳಲ್ಲಿ 236 ರನ್ಗಳಿಗೆ ಆಲೌಟ್ ಆಯಿತು. ಭಾರತದ ವೇಗಿ ಹರ್ಷಿತ್ ರಾಣಾ 39 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಕಳೆದ ಎರಡು ಪಂದ್ಯಗಳಲ್ಲಿ ಟೀಕೆಗೆ ಒಳಗಾಗಿದ್ದ ಅವರು, ಈ ಪಂದ್ಯದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.
ಇದನ್ನು ಓದಿ : ಉಸಿರುಗಟ್ಟಿಸಿ 7 ವರ್ಷದ ಮಗಳ ಕೊಂದ ಮಲತಂದೆ

ಸ್ಪಿನ್ನರ್ಗಳ ಹೊಳಪು – ಅಕ್ಷರ್ ಮತ್ತು ಸುಂದರ್ ಭರ್ಜರಿ ಪ್ರದರ್ಶನ
ಆಸ್ಟ್ರೇಲಿಯಾ ಬ್ಯಾಟರ್ಗಳನ್ನು ಅಟ್ಟಾಡಿಸಿದವರು ಸ್ಪಿನ್ನರ್ ಜೋಡಿ — ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್. ಇಬ್ಬರೂ ತಲಾ ಪ್ರಮುಖ ವಿಕೆಟ್ಗಳನ್ನು ಪಡೆದು ಮಧ್ಯದ ಓವರ್ಗಳಲ್ಲಿ ಆಸೀಸ್ರನ್ನು ತತ್ತರಿಸಿದರು.
ಕಲ್ಪಿಸಿದಷ್ಟು ಪ್ರಭಾವ ಬೀರದ ಕುಲ್ದೀಪ್ ಮತ್ತು ಪ್ರಸಿದ್ಧ್
ಗಾಯಾಳು ನಿತೀಶ್ ಕುಮಾರ್ ರೆಡ್ಡಿ ಬದಲು ತಂಡಕ್ಕೆ ಬಂದ ಕುಲ್ದೀಪ್ ಯಾದವ್ 50 ರನ್ ನೀಡಿ ಕೇವಲ ಒಂದು ವಿಕೆಟ್ ಮಾತ್ರ ಪಡೆದರು. ಪ್ರಸಿದ್ಧ್ ಕೃಷ್ಣ ದುಬಾರಿ ಓವರ್ಗಳನ್ನು ಬೌಲಿಂಗ್ ಮಾಡಿ, ಒಂದು ಪ್ರಮುಖ ಕ್ಯಾಚ್ ಕೈಚೆಲ್ಲಿದರು.
ಆಸ್ಟ್ರೇಲಿಯಾ ಪರ ಮ್ಯಾಟ್ ರೆನ್ಶಾ ಶತಕದ ಹಾದಿಯಲ್ಲಿದ್ದರೂ ಅರ್ಧಶತಕವರೆಗೂ
ಆಸ್ಟ್ರೇಲಿಯಾ ಪರ ಮ್ಯಾಟ್ ರೆನ್ಶಾ 56 ರನ್ಗಳ ಅಮೂಲ್ಯ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಆದರೆ ಇತರ ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಭಾರತದ ಬೌಲರ್ಗಳು ಈ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಆಸ್ಟ್ರೇಲಿಯಾವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದರು.

ಇದನ್ನು ನೋಡಿ : ಕ್ಯಾಚ್ ಮೂಲಕ ದಾಖಲೆ ಬರೆದ ರೋಹಿತ್ ಶರ್ಮ




