Bengaluru : ಉಸಿರುಗಟ್ಟಿಸಿ 7 ವರ್ಷದ ಬಾಲಕಿಯನ್ನು ಮಲತಂದೆ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Bengaluru : ಬೆಂಗಳೂರು ನಗರದ ಕುಂಬಳಗೋಡು ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿರುವ ಈ ಘಟನೆ ರಾಜ್ಯದಾದ್ಯಂತ ಆತಂಕ ಉಂಟುಮಾಡಿದೆ. ಪಾಪಿ ಮಲತಂದೆ ದರ್ಶನ್ ತನ್ನ 7 ವರ್ಷದ ಮಗಳು ಸಿರಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಕುಟುಂಬದ ಹಿನ್ನೆಲೆ
ಮೊದಲ ಗಂಡ ಸಾವನ್ನಪ್ಪಿದ ಬಳಿಕ ಸಿರಿಯ ತಾಯಿ ಶಿಲ್ಪಾ, ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ದರ್ಶನ್ ಎಂಬಾತನೊಂದಿಗೆ 4 ತಿಂಗಳ ಹಿಂದೆ ಮದುವೆಯಾಗಿದ್ದರು. ಆದರೆ ದಾಂಪತ್ಯ ಜೀವನದಲ್ಲಿ ನಿರಂತರ ಜಗಳಗಳು ನಡೆಯುತ್ತಿದ್ದವು.
ಕೊಲೆಯ ಘಟನೆ ಹೇಗೆ ನಡೆಯಿತು
ಘಟನೆಯ ದಿನ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ದರ್ಶನ್ ಮನೆಗೆ ಬಂದು ಶಿಲ್ಪಾಳ ಜೊತೆ ಜಗಳವಾಡಿದ್ದಾನೆ. ನಂತರ, ಸಿರಿ ಶಾಲೆಯಿಂದ ಬಂದ ಬಳಿಕ, ಆಕೆಯ ಮೇಲೆ ಕ್ರೂರಿಯಾಗಿ ದಾಳಿ ಮಾಡಿ ಉಸಿರುಗಟ್ಟಿಸಿ ಕೊಲೆ ಮಾಡಿದಾನೆ ಎನ್ನಲಾಗಿದೆ.
ಇದನ್ನು ಓದಿ : BBK 12 : ಸ್ಪರ್ಧಿಗಳ ಟೂತ್ ಬ್ರಶ್ನಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿದ್ರಾ ಅಶ್ವಿನಿ..?

ಶಿಲ್ಪಾಳ ಸ್ಥಿತಿ
ಇನ್ನು ಸಂಜೆ ಕೆಲಸದಿಂದ ಮನೆಗೆ ಬಂದ ಶಿಲ್ಪಾಳನ್ನು ದರ್ಶನ್ ಕೋಣೆಯಲ್ಲಿ ಕೂಡಿ ಹಾಕಿದ್ದಾನೆ. ಆಕೆ ಹೊರಗೆ ಬರಲಾರದಂತೆಯೇ ತಡೆದು ಓಡಿಹೋಗಿದ್ದಾನೆ.
ಪೊಲೀಸರ ಕ್ರಮ
ಘಟನೆ ಸ್ಥಳಕ್ಕೆ ಕುಂಬಳಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ಅವರು ಪ್ರತಿಕ್ರಿಯೆ ನೀಡಿದ್ದು, “ಆತ ಸಿಕ್ಕ ಮೇಲೆ ಇನ್ನಷ್ಟು ಮಾಹಿತಿ ಸಿಗಲಿದೆ. ಪ್ರಾಥಮಿಕ ತನಿಖೆಯಲ್ಲಿ ಪತಿ-ಪತ್ನಿಯ ಜಗಳವೇ ಹತ್ಯೆಗೆ ಕಾರಣವೆಂದು ತೋರುತ್ತಿದೆ” ಎಂದಿದ್ದಾರೆ.
ಆರೋಪಿ ಪರಾರಿ
ಪ್ರಸ್ತುತ ಆರೋಪಿ ದರ್ಶನ್ ತಲೆಮರೆಸಿಕೊಂಡಿದ್ದು, ಪೊಲೀಸರು ಬಂಧನಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ. ಇನ್ನ ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದ್ದು, ಮಗು ಸಿರಿಯ ಸಾವಿಗೆ ನ್ಯಾಯ ದೊರಕಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

ಇದನ್ನು ನೋಡಿ : ಅಯ್ಯೋ ದುರ್ವಿಧಿಯೇ.. ಹೆಂಡತಿ ಜೊತೆ ಗಲಾಟೆ, ಮಲತಂದೆಯಿಂದಲೇ ಮಗಳ ಹತ್ಯೆ




