BBK 12 : ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ನಾಲ್ಕು ವಾರ ಆಗಿದೆ. ಈ ನಾಲ್ಕು ವಾರಗಳಲ್ಲಿ ದೊಡ್ಮನೆಯೊಳಗಿನ ಸ್ಪರ್ಧಿಗಳು ಜನರಿಗೆ ಕನೆಕ್ಟ್ ಆಗಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ಅವಧಿಯಲ್ಲಿ ಹಲವು ಸ್ಪರ್ಧಿಗಳು ಜನರ ಮನಗೆದ್ದರೆ, ಕೆಲವರು ವೀಕ್ಷಕರ ಕೋಪಕ್ಕೆ ಗುರಿಯಾಗಿದ್ದಾರೆ. ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ ಅವರ ನಡೆ ಈಗ ವೀಕ್ಷಕರ ಕೋಪದ ಕೇಂದ್ರವಾಗಿದ್ದಾರೆ.
ಕಿಚ್ಚ ಸುದೀಪ್ ಮೈಚಳಿ ಬಿಡಿಸಿದರೂ ತಪ್ಪು ಸರಿಪಡಿಸದ ಅಶ್ವಿನಿ
ಕಳೆದ ವೀಕೆಂಡ್ ಎಪಿಸೋಡ್ನಲ್ಲಿ ರಕ್ಷಿತಾ ಶೆಟ್ಟಿ ವಿಚಾರವಾಗಿ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಅವರನ್ನು ಗಂಭೀರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಆದರೆ, ಆ ತಪ್ಪನ್ನು ಅಶ್ವಿನಿ ಸರಿಪಡಿಸದೆ, ಇದೇ ರೀತಿಯ ವರ್ತನೆ ಈ ವಾರವೂ ಮುಂದುವರೆಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇತರರ ತಪ್ಪು ತೋರಿಸುವ ಅಶ್ವಿನಿ – ತಾನು ಮಾಡಿದ ತಪ್ಪನ್ನು ಒಪ್ಪದ ಮನೋಭಾವ
ಬೇರೆಯವರ ತಪ್ಪುಗಳನ್ನು ಎತ್ತಿ ತೋರಿಸುತ್ತಾ ಬಂದ ಅಶ್ವಿನಿ ಗೌಡ, ತಾನೇ ತಪ್ಪು ಮಾಡಿದಾಗ ಅದನ್ನು ಒಪ್ಪಲು ಸಿದ್ಧರಾಗಿಲ್ಲವೆಂಬ ವೀಕ್ಷಕರ ಅಭಿಪ್ರಾಯ.
ತಮಗೆ ಯಾರೂ ಏಕವಚನದಲ್ಲಿ ಮಾತನಾಡಬಾರದೆಂದು ಹೇಳುವ ಅಶ್ವಿನಿ, ಗಿಲ್ಲಿ, ಕಾವ್ಯ ಮತ್ತು ರಕ್ಷಿತಾ ಅವರಿಗೆ ಏಕವಚನದಲ್ಲೇ ಮಾತನಾಡುತ್ತಾರೆ ಎನ್ನುವುದು ಮನೆದೊಳಗಿನವರ ಅಸಮಾಧಾನ.
ಇದನ್ನು ಓದಿ : ಕಲಾಂಕಾರಿ ಎಥ್ನಿಕ್ವೇರ್ನಲ್ಲಿ ಕಂಗೊಳಿಸಿದ ರುಕ್ಮಿಣಿ ವಸಂತ್

ನಿಯಮ ಉಲ್ಲಂಘನೆ – ಆ್ಯಪಲ್ ಮತ್ತು ಕಜ್ಜಾಯ ವಿವಾದ
ಈ ವಾರ ‘ಕಳಪೆ’ ಬಂದಿದ್ದರೂ ಅಶ್ವಿನಿ ಗೌಡ ಅವರು ನಿಯಮ ಪಾಲನೆ ಮಾಡದೆ ಆ್ಯಪಲ್ ತಿಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಅವರು ಕಜ್ಜಾಯ ತಿಂದಿರುವ ವಿಚಾರವೂ ವೀಕ್ಷಕರ ಗಮನ ಸೆಳೆದಿದೆ. ಇವುಗಳು ಅವರು ಉದ್ದೇಶಪೂರ್ವಕವಾಗಿ ಮಾಡಿದ ಕ್ರಮಗಳೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಟೂತ್ಬ್ರಶ್ ವಿವಾದ – ವೀಕ್ಷಕರಲ್ಲಿ ಅನುಮಾನ
ಅತಿ ಹೆಚ್ಚು ಚರ್ಚೆಗೆ ಕಾರಣವಾದ ಮತ್ತೊಂದು ಘಟನೆ ಎಂದರೆ ಟೂತ್ಬ್ರಶ್ ವಿವಾದ. ಅಶ್ವಿನಿ ಗೌಡ ಅವರು ಬಾತ್ರೂಮ್ಗೆ ಎಲ್ಲರ ಟೂತ್ಬ್ರಶ್ಗಳನ್ನು ತೆಗೆದುಕೊಂಡು ಹೋಗಿರುವ ದೃಶ್ಯ ವೀಕ್ಷಕರ ಗಮನ ಸೆಳೆದಿದೆ.
ಜನರು ಕೇಳುತ್ತಿರುವ ಪ್ರಶ್ನೆಗಳು:
- ಎಲ್ಲರ ಟೂತ್ಬ್ರಶ್ಗಳನ್ನು ಅವರು ಏಕೆ ತೆಗೆದುಕೊಂಡು ಹೋದರು?
- ಬಾತ್ರೂಮ್ ಕ್ಲೀನ್ ಮಾಡಲು ಎಲ್ಲರ ಬ್ರಶ್ ಬಳಿಸಿದ್ರಾ?
- ಅಥವಾ ಬ್ರಶ್ಗಳನ್ನು ಮುಚ್ಚಿಟ್ಟುಕೊಳ್ಳಲು ತೆಗೆದುಕೊಂಡ್ರಾ?
ಈ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟನೆಗಾಗಿ ವೀಕ್ಷಕರು ಕಿಚ್ಚ ಸುದೀಪ್ ಅವರ ವಾರಾಂತ್ಯದ ಎಪಿಸೋಡ್ಗಾಗಿ ಕಾಯುತ್ತಿದ್ದಾರೆ.

ಕಿಚ್ಚ ಸುದೀಪ್ ಎಪಿಸೋಡ್ನಲ್ಲಿ ಸ್ಪಷ್ಟನೆ
ಈ ವಾರದ “ವಾರದ ಕಥೆ ಕಿಚ್ಚನ ಜೊತೆ” ಎಪಿಸೋಡ್ನಲ್ಲಿ ಈ ವಿವಾದಕ್ಕೆ ಅಂತಿಮ ಉತ್ತರ ಸಿಗುವ ನಿರೀಕ್ಷೆಯಿದೆ. ವೀಕ್ಷಕರು ಈಗ ಅಶ್ವಿನಿ ಗೌಡ ಅವರ ನಡೆಗೆ ಬಿಗ್ ಬಾಸ್ ಹಾಗೂ ಕಿಚ್ಚ ಸುದೀಪ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನು ನೋಡಿ : ಸ್ಪರ್ಧಿಗಳ ಟೂತ್ ಬ್ರಶ್ನಲ್ಲಿ ಟಾಯ್ಲೆಟ್ ಕ್ಲೀನ್?: ಅಶ್ವಿನಿ ಗೌಡ ಮೇಲೆ ಮತ್ತೊಂದು ಆರೋಪ




