BBK 12 : ಬಿಗ್ ಬಾಸ್ ಕನ್ನಡ ಸೀಸನ್ 12 ನಾಲ್ಕನೇ ವಾರದಲ್ಲಿ ಟಾಪ್ಗೇರಿದೆ.

BBK 12 : ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ನಾಲ್ಕನೇ ವಾರದಲ್ಲಿ ಟಾಪ್ಗೇರಿದೆ. ಮುಖ್ಯವಾಗಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿಕೊಟ್ಟ ಬಳಿಕ ಫಿಸಿಕಲ್ ಟಾಸ್ಕ್ಗಳೆಲ್ಲ ಶುರುವಾಗಿದ್ದು, ಶೋ ರಂಗೇರಿದೆ. ಇದರ ಮಧ್ಯೆ ಬಿಗ್ ಬಾಸ್ ಮನೆ ಮೊದಲ ಕ್ಯಾಪ್ಟನ್ ಅನ್ನು ಎದುರು ನೋಡುತ್ತಿದೆ.
ಮೊದಲ ಮೂರು ವಾರ ದೊಡ್ಮನೆಗೆ ಯಾರೂ ಕ್ಯಾಪ್ಟನ್ ಇರಲಿಲ್ಲ. ಉಸ್ತುವಾರಿ ಹಾಗೂ ಬಿಗ್ ಬಾಸ್ ಅವರೇ ಎಲ್ಲ ಟಾಸ್ಕ್ ನೋಡಿ ಕೊಳ್ಳುತ್ತಿದ್ದರು. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಕ್ಯಾಪ್ಟನ್ ರಘು ಆಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ರಘು, ರಿಷಾ ಹಾಗೂ ಸೂರಜ್ ಪೈಕಿ ಇದೀಗ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ನಡೆದ ತೀವ್ರ ಸ್ಪರ್ಧೆಯಲ್ಲಿ ರಘು ಜಯ ಸಾಧಿಸಿದ್ದಾರೆ.
ಬಿಗ್ ಬಾಸ್ ನೀಡಿದ ಕಠಿಣ ಮತ್ತು ಟಫ್ ಟಾಸ್ಕ್ನಲ್ಲಿ ತಮ್ಮ ಧೈರ್ಯ, ತಾಳ್ಮೆ ಮತ್ತು ತಂತ್ರದ ಮೂಲಕ ರಘು ತಮ್ಮ ಪ್ರತಿಸ್ಪರ್ಧಿ ರಿಷಾವನ್ನು ಹಿಂದಿಕ್ಕಿ ಕ್ಯಾಪ್ಟನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನು ನೋಡಿ : ಟಾಸ್ಕ್ ಗೆದ್ದು ಬಿಗ್ ಬಾಸ್ 12ರ ಮೊದಲ ಕ್ಯಾಪ್ಟನ್ ಆದ ರಘು; ಸಿಕ್ತು ವಿಶೇಷ ಅಧಿಕಾರ

ರಘು ಕ್ಯಾಪ್ಟನ್ ಆಗುತ್ತಿದ್ದಂತೆಯೇ ಮನೆ ಸದಸ್ಯರೆಲ್ಲರೂ ಅವರಿಗೆ ಅಭಿನಂದನೆ ಸಲ್ಲಿಸಿದರು. ಕೆಲವರು ಅವರ ನೇತೃತ್ವದಲ್ಲಿ ಮನೆ ಇನ್ನಷ್ಟು ಸಜೀವವಾಗಲಿದೆ ಎಂದು ಅಭಿಪ್ರಾಯಪಟ್ಟರು.
ರಘು ಅವರ ನಾಯಕತ್ವದಲ್ಲಿ ಬಿಗ್ ಬಾಸ್ ಮನೆಯಲ್ಲಿ ಮುಂದಿನ ದಿನಗಳು ಹೇಗಿರಬಹುದು ಎಂಬ ಕುತೂಹಲ ಈಗ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಇದನ್ನು ಓದಿ : ಹತ್ತಿ ಬೆಳಗಾರರ ನಷ್ಟಕ್ಕೆ ಬೆಂಬಲ ಬೆಲೆ ನೀಡುವಂತೆ HDK ಗೆ ಮನವಿ




