SIRA : ಹತ್ತಿ ಬೆಳೆಗಾರರ ಸಂಕಷ್ಟ ನಿವಾರಣೆಗೆ ಕ್ರಮಕೈಗೊಳ್ಳುವಂತೆ ಮುಖಂಡ ಆರ್. ಉಗ್ರೇಶ್ ಅವರು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಶಿರಾ ತಾಲ್ಲೂಕಿನ ಹತ್ತಿ ಬೆಳೆಗಾರರ ಸಂಕಷ್ಟ ನಿವಾರಣೆಗೆ ಕ್ರಮಕೈಗೊಳ್ಳುವಂತೆ ಶಿರಾ ಜೆಡಿಎಸ್ ಮುಖಂಡ ಆರ್. ಉಗ್ರೇಶ್ ಅವರು ಕೇಂದ್ರ ಸಚಿವ (ಕೃಷಿ) ಎಚ್.ಡಿ. ಕುಮಾರಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.

ತುಮಕೂರು ಹತ್ತಿ ಬೆಳೆಗಾರರ ನಷ್ಟಕ್ಕೆ ಕೇಂದ್ರದ ಹಸ್ತಕ್ಷೇಪ
ಈ ಸಂದರ್ಭದಲ್ಲಿ ಉಗ್ರೇಶ್ ಅವರು ತುಮಕೂರು ಜಿಲ್ಲೆಯ ಹತ್ತಿ ಬೆಳೆಗಾರರು ಎದುರಿಸುತ್ತಿ ರುವ ತೀವ್ರ ನಷ್ಟದ ವಿಷಯವನ್ನು ಸವಿಸ್ತಾರವಾಗಿ ವಿವರಿಸಿ, ಹತ್ತಿ ಬೀಜಕ್ಕೆ ಸೂಕ್ತ ಬೆಲೆ ನಿಗದಿ ಮಾಡಲು ಹಾಗೂ ರೈತರಿಗೆ ನ್ಯಾಯ ದೊರೆಯುವಂತೆ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡ ಬೇಕೆಂದು ಒತ್ತಾಯಿಸಿದರು. ಇನ್ನು ಮನವಿಗೆ ತಕ್ಷಣ ಸ್ಪಂದಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಇದನ್ನು ಓದಿ : ದಿನಭವಿಷ್ಯ 24 ಅಕ್ಟೋಬರ್ 2025 ಇಂದು ಕಾರ್ತಿಕ ಶುಕ್ರವಾರ, ಈ ರಾಶಿಗೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ!

ಉಗ್ರೇಶ್ ಮನವಿಗೆ ಕೇಂದ್ರ ಸಚಿವರ ಸ್ಪಂದನೆ
ಹತ್ತಿ ಬೆಳೆಗಾರರ ಹಿತಕ್ಕಾಗಿ ಉಗ್ರೇಶ್ ನೀಡಿದ ಮನವಿ ಮತ್ತು ಅದಕ್ಕೆ ಕೇಂದ್ರ ಸಚಿವರ ಸ್ಪಂದನೆಗೆ ಶಿರಾ ಮತ್ತು ಸುತ್ತಮುತ್ತಲಿನ ರೈತ ವಲಯದಲ್ಲಿ ಸಂತೋಷ ವ್ಯಕ್ತವಾಗಿದೆ. ಆದರೆ, ಈ ಕ್ರಮ ಕಾಗದಪತ್ರಗಳಲ್ಲಿ ಮಾತ್ರ ಸೀಮಿತವಾಗುತ್ತದೆ ಅಥವಾ ನಿಜವಾದ ಫಲಕಾರಿತ್ವ ತರುವುದೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಾಗಿದೆ.

ಇದನ್ನು ನೋಡಿ : ಬಿರುಕು ಬಿಟ್ಟ ಮೈದಾಳ ಕೆರೆ- ಮುಳುಗುವ ಆತಂಕದಲ್ಲಿ ಸುತ್ತಮುತ್ತಲ ಗ್ರಾಮಸ್ಥರು




