Ram Charan : ಮಗುವೇ ಬೇಡ ಎಂದಿದ್ದ ರಾಮ್ ಚರಣ್ ದಂಪತಿ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ತೆಲುಗು ಸಿನಿಮಾ ನಟ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕೊನಿಡೆಲಾ ಅವರ ಮನೆಗೆ ಮತ್ತೆ ಸಿಹಿ ಸುದ್ದಿಯು ಬಂದಿದೆ. ವಿವಾಹವಾಗಿ 13 ವರ್ಷಗಳಾದ ಈ ಖ್ಯಾತ ದಂಪತಿ, ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಉದ್ಯಮಿಯ ಪುತ್ರಿಯಾಗಿರುವ ಉಪಾಸನಾ ಸ್ವತಃ ಯಶಸ್ವಿ ಉದ್ಯಮಿಯಾಗಿದ್ದು, ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2023ರಲ್ಲಿ ದಂಪತಿ ತಮ್ಮ ಮೊದಲ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಪುಟ್ಟ ಕಂದಮ್ಮಗೆ “ಕ್ಲಿನ್ ಕಾರಾ” ಎಂದು ಹೆಸರಿಟ್ಟಿದ್ದರು.

ಹಿಂದೊಮ್ಮೆ ಉಪಾಸನಾ ಅವರು ಮಗುವನ್ನು ಪಡೆಯುವ ಆಸೆ ಇಲ್ಲವೆಂದು ಹೇಳಿಕೊಂಡು ಸುದ್ದಿಯಾಗಿದ್ದರು. ಸದ್ಗುರು ಅವರ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ಉಪಾಸನಾ, “ನನಗೆ ಮಕ್ಕಳ ಅಗತ್ಯವಿಲ್ಲ, ಆದರೆ ನನ್ನ ತಾಯಿ ಮತ್ತು ಅತ್ತೆ ಬಲವಂತ ಮಾಡುತ್ತಿದ್ದಾರೆ” ಎಂದು ಹೇಳಿದ್ದರು. ಆದಾಗ್ಯೂ, ಕುಟುಂಬದ ಒತ್ತಾಯಕ್ಕೆ ಮಣಿದು, 2023ರಲ್ಲಿ ತಾಯಿ ಆದರು.

ಈಗ, ಮೊದಲ ಮಗುವಿನ ಎರಡನೇ ವರ್ಷದಲ್ಲೇ ಉಪಾಸನಾ ಮತ್ತೊಮ್ಮೆ ತಾಯಿ ಆಗುವ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಉಪಾಸನಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡು, “ಈ ದೀಪಾವಳಿ ನಮ್ಮ ಮನೆಯಲ್ಲಿ ಡಬಲ್ ಧಮಾಕಾ – ಡಬಲ್ ಖುಷಿ, ಡಬಲ್ ಆಶೀರ್ವಾದ!” ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ : ಗಿಲ್ಲಿ ವಿಷಯಕ್ಕೆ ಕಾವ್ಯಾ, ಅಶ್ವಿನಿ ನಡುವೆ ಜಗಳ

ಇನ್ನು ರಾಮ್ ಚರಣ್ ಅವರ ನಿವಾಸದಲ್ಲಿ ಉಪಾಸನಾ ಅವರ ಸೀಮಂತ ಸಮಾರಂಭವನ್ನು ಅದ್ದೂರಿಯಾಗಿ ನೆರವೇರಿಸಲಾಗಿದೆ. ಚಿರಂಜೀವಿ, ಸುಶೀಲಾ, ಶಿರೀಷಾ ಸೇರಿದಂತೆ ರಾಮ್ ಚರಣ್ ಮತ್ತು ಉಪಾಸನಾ ಅವರ ಕುಟುಂಬದ ಸದಸ್ಯರು ಹಾಗೂ ಆಪ್ತರು ಈ ಸಂದರ್ಭಕ್ಕೆ ಹಾಜರಿದ್ದರು. ಇನ್ನು ಸೀಮಂತದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಇದನ್ನು ನೋಡಿ : ಮಗುವೇ ಬೇಡ ಎಂದಿದ್ದ ರಾಮ್ ಚರಣ್ ದಂಪತಿ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿ




