BBK 12 : ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ರಣರಂಗದ ವಾತಾವರಣ ತಾಳಿಕೊಂಡಿದೆ.

BBK 12 : ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ರಣರಂಗದ ವಾತಾವರಣ ತಾಳಿಕೊಂಡಿದೆ. ಹೊಸ ಪ್ರೋಮೋ ಹೊರಬಿದ್ದಂತೆ ಪ್ರೇಕ್ಷಕರ ಕುತೂಹಲ ತಾರಕಕ್ಕೇರಿದೆ. ಈ ಬಾರಿ ಮನೆಯ ಕೆಲಸದ ಹಂಚಿಕೆಯನ್ನು ಕುರಿತ ವಿಚಾರವೇ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಮನೆಯಲ್ಲೇ ಸದಾ ಚರ್ಚೆಯ ಕೇಂದ್ರವಾಗಿರುವ ಅಶ್ವಿನಿ ಗೌಡ ಮತ್ತು ಕಾವ್ಯ ಮತ್ತೊಮ್ಮೆ ಮುಖಾಮುಖಿಯಾಗಿ ತೀವ್ರ ವಾಗ್ವಾದ ನಡೆಸಿದ್ದಾರೆ. ಕೆಲಸ ಹಂಚಿಕೊಳ್ಳುವ ಸಂದರ್ಭದಲ್ಲಿ ಕಾವ್ಯ “ಗಿಲ್ಲಿ ಜೊತೆಗೆ ಕೆಲಸ ಮಾಡ್ತೀನಿ” ಎಂದಾಗ, ಅಶ್ವಿನಿ “ಅಡಿಗೆ ಮಾಡ್ತಾ, ಗಿಲ್ಲಿ ಜೊತೆಗೆ ವಾಶ್ರೂಮ್ ಕ್ಲೀನ್ ಮಾಡ್ತೀನಿ ಅಂದ್ರೆ ಹೇಗೆ?” ಎಂದು ಪ್ರಶ್ನಿಸಿದಿದ್ದಾರೆ. ಇದರಿಂದ ಕಾವ್ಯ ಅಸಮಾಧಾನಗೊಂಡು “ಬೇರೆಯವರ ವಿಚಾರಕ್ಕೆ ನೀವು ಬರಬೇಡಿ” ಎಂದು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ನೋಡಿ : ಬಿಗ್ಬಾಸ್ ಮನೆಯಲ್ಲಿ ಗಲಾಟೆ; ಕೈ ಕೈ ಮಿಲಾಯಿಸಿದ್ರಾ ಅಶ್ವಿನಿ ಗೌಡ, ಕಾವ್ಯ.. ಏನಾಯಿತು?

ಈ ಹೇಳಿಕೆಗಳಿಂದ ಇಬ್ಬರ ನಡುವೆ ಬಿಕ್ಕಟ್ಟು ತೀವ್ರಗೊಂಡು, ಮಾತಿನ ಗಲಾಟೆ ಕೈ ತೋರಿಸುವ ಮಟ್ಟಕ್ಕೆ ತಲುಪಿದಂತೆಯೇ ಪ್ರೋಮೋದಲ್ಲಿ ಕಾಣಿಸಿಕೊಂಡಿದೆ. ಆದರೆ ಇಬ್ಬರೂ ಕೈ ಮಿಲಾಯಿಸದೆ ಅಸಮಾಧಾನದ ಸ್ಥಿತಿಯಲ್ಲೇ ಎಪಿಸೋಡ್ ಮುಕ್ತಾಯವಾಗುತ್ತದೆ.
ಅಶ್ವಿನಿ vs ಕಾವ್ಯ ಈ ಇಬ್ಬರ ಈ ಹೀಟ್ ಆಫ್ ದ ಮೂಮೆಂಟ್ ಕೈಕೈ ಮಿಲಾಯಿಸೋ ಹಂತಕ್ಕೆ ಹೋಗಿದ್ದು ಮುಂದೆ ಏನಾಗಿದೆ ಎಂದು ತಿಳಿಯಲು ಎಪಿಸೋಡ್ ನೋಡಲೇಬೇಕು.

ಇದನ್ನು ಓದಿ : ಹಾಸನಾಂಬ ಉತ್ಸವದಲ್ಲಿ ಕೆಂಡ ಹಾಯ್ದು ಗಮನ ಸೆಳೆದ DC




