WORLD CUP 2025: ನವಿ ಮುಂಬೈನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಸ್ಮೃತಿ ಮಂಧಾನ ತಮ್ಮ 14ನೇ ಏಕದಿನ ಶತಕ (88 ಎಸೆತ) ಸಿಡಿಸಿ ಮಿಂಚಿದರು. ನ್ಯೂಜಿಲೆಂಡ್ ವಿರುದ್ಧದ ಈ ನಿರ್ಣಾಯಕ ಪಂದ್ಯದಲ್ಲಿ, ಇದು ಸ್ಮೃತಿಯ ಮೊದಲ ವಿಶ್ವಕಪ್ ಶತಕವಾಗಿದೆ.

WORLD CUP 2025: ನವಿಮುಂಬೈನಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ನ “ಮಾಡು ಇಲ್ಲವೇ ಮಡಿ” ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಶತಕ ಸಿಡಿಸಿ ಮಿಂಚಿದ್ದಾರೆ.
ಇನ್ನು ಮಂಧಾನ ಕೇವಲ 88 ಎಸೆತಗಳಲ್ಲಿ ತನ್ನ ಏಕದಿನ ವೃತ್ತಿಜೀವನದ 14ನೇ ಶತಕವನ್ನು ಪೂರೈಸಿದರು. ಈ ಶತಕವು ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ನಲ್ಲಿನ ಅವರ ಮೊದಲ ಶತಕವಾಗಿದ್ದು, ಅದಕ್ಕೂ ಮೊದಲು ಸತತ ಎರಡು ಪಂದ್ಯಗಳಲ್ಲಿ ಅರ್ಧಶತಕ ಪೂರೈಸಿದ ಅವರು ಈ ಬಾರಿ ಶತಕ ಬಾರಿಸಿದ್ದಾರೆ.
ಇದನ್ನೂ ಓದಿ : Bengaluru : ಹೊಸೂರು ಮೆಟ್ರೋ ಯೋಜನೆಗೆ ಬಿಎಂಆರ್ಸಿಎಲ್ ಕೊಕ್..!
ಇದೇ ವೇಳೆ ಮತ್ತೊಬ್ಬ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ಅವರೊಂದಿಗೆ ಮೊದಲ ವಿಕೆಟ್ಗೆ ದ್ವಿಶತಕ ಜೊತೆಯಾಟ ಆಡುವ ಮೂಲಕ ಭಾರತಕ್ಕೆ ಉತ್ತಮ ಆಟವಾಡಿ ಭಾರತಕ್ಕೆ ಭರ್ಜರಿ ಆರಂಭ ನೀಡಿದ್ದಾರೆ.
MUST WATCH: ಸಿಎಂ ಕುರ್ಚಿಯ ಮೇಲೆ DCM DKS ಕಣ್ಣು- ನವೆಂಬರ್ ಕ್ರಾಂತಿ ಮುನ್ಸೂಚನೆನಾ..?




