BENGALURU : ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿಗೆ ಮೆಟ್ರೋ ಸಂಪರ್ಕ ನೀಡುವ ವಿಚಾರಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ತಾಂತ್ರಿಕ ಸಮಸ್ಯೆಯ ಕಾರಣ ತಮಿಳುನಾಡಿಗೆ ಸಂಪರ್ಕಿಸುವ ಮೆಟ್ರೋ ಸಂಪರ್ಕ ಯೋಜನೆಯನ್ನು ಬಿಎಂಆರ್ಸಿಎಲ್ ಕೈಬಿಟ್ಟಿದೆ.

BENGALURU: ಬೆಂಗಳೂರಿನಿಂದ ತಮಿಳುನಾಡಿನ ಹೊಸೂರನ್ನು ಸಂಪರ್ಕಿಸುವ ಉದ್ದೇಶದಿಂದ ನಮ್ಮ ಮೆಟ್ರೋ ಮಾರ್ಗ ಯೋಜನೆಗೆ ಮುಂದಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ನಮ್ಮ ಮೆಟ್ರೋ(Namma Metro) ಮಾರ್ಗ ಯೋಜನೆಗೆ ಬಿಎಂಆರ್ಸಿಎಲ್ (BMRCL) ಹಸಿರು ನಿಶಾನೆ ತೋರಿಸಲು ಸಾಧ್ಯವಾಗದೇ, ಈ ಯೋಜನೆ ಈಗ ಸ್ಥಗಿತಗೊಂಡಿದ್ದು, ರಾಜ್ಯ ಸರ್ಕಾರಕ್ಕೂ ಅಧಿಕೃತ ವರದಿ ಸಲ್ಲಿಸಲಾಗಿದೆ.
ಇನ್ನು ಈ ಯೋಜನೆಗೆ ಪ್ರಾರಂಭಿಕ ಹಂತದಲ್ಲೇ ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇತ್ತೀಚೆಗೆ, ಬಿಎಂಆರ್ಸಿಎಲ್ ತಾಂತ್ರಿಕ ವಿಶ್ಲೇಷಣೆ ನಡೆಸಿದ ನಂತರ ಯೋಜನೆಯನ್ನು ಕೈಬಿಡಲು ನಿರ್ಧರಿಸಿದೆ. ಬಿಎಂಆರ್ಸಿಎಲ್ ವರದಿ ಪ್ರಕಾರ, 23 ಕಿಲೋಮೀಟರ್ ಉದ್ದದ ಹೊಸೂರು–ಬೊಮ್ಮಸಂದ್ರ ಕಾರಿಡಾರ್ನಲ್ಲಿ ವಿದ್ಯುತ್ ಶಕ್ತಿ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಆದರೆ ಈ ಮಾರ್ಗವನ್ನು ನೇರವಾಗಿ ನಮ್ಮ ಮೆಟ್ರೋ ವ್ಯವಸ್ಥೆಗೆ (Namma Metro Network) ಸಂಯೋಜಿಸುವುದು ತಾಂತ್ರಿಕವಾಗಿ ಅಸಾಧ್ಯವಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ : Recruitment 2025: ಶೀಘ್ರವೇ 4600 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ..!
ಬೆಂಗಳೂರು ಮೆಟ್ರೋವನ್ನು 470 ಕಿ.ಮೀ.ಗೆ ವಿಸ್ತರಿಸಲು ಯೋಜನೆ ಹಾಕಿಕೊಳ್ಳುವಂತೆ ಕೇಂದ್ರ ಸರ್ಕಾರ ಬಿಎಂಆರ್ಸಿಎಲ್ಗೆ ಮನವಿ ಮಾಡಿತ್ತು. ಹಾಗಾಗಿ ಬಿಎಂಆರ್ಸಿಎಲ್ ಈ ಯೋಜನೆ ಬಗ್ಗೆ ಅಧ್ಯಯವನ್ನು ನಡೆಸಿತ್ತು. ಬೆಂಗಳೂರು–ಹೊಸೂರು ಮಾರ್ಗವು ಈಗಿರುವ ಆರ್.ವಿ. ರೋಡ್–ಬೊಮ್ಮಸಂದ್ರ ಮೆಟ್ರೋ (ಯೆಲ್ಲೋ ಲೈನ್) ಮಾರ್ಗದ ವಿಸ್ತರಣೆ ಆಗಬೇಕಿತ್ತು. ಆದರೆ ಚೆನ್ನೈ ಮೆಟ್ರೋ ಮತ್ತು ಬೆಂಗಳೂರು ಮೆಟ್ರೋಗಳ ತಾಂತ್ರಿಕ ವಿನ್ಯಾಸ ವ್ಯವಸ್ಥೆಗಳಲ್ಲಿರುವ ವ್ಯತ್ಯಾಸದಿಂದಾಗಿ ಎರಡು ರಾಜ್ಯಗಳ ನಡುವಿನ ಸಂಯೋಜನೆ ಸಾಧ್ಯವಾಗುವುದಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
MUST WATCH: TUMAKURU | AMBULANCE ಸಿಗದೆ ಯುವಕ ಸಾವು – ಒಂದೇ ಸುದ್ದಿಗೆ ಕೋಳಾಲಕ್ಕೆ ಬಂದೇ ಬಿಡ್ತು AMBULANCE




