Women ODI World Cup 2025: ಮಹಿಳಾ ವಿಶ್ವಕಪ್ 2025 ರಲ್ಲಿ ಟೀಂ ಇಂಡಿಯಾ, ಸತತ ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸುವ ಮೂಲಕ ದೊಡ್ಡ ಹಿನ್ನಡೆ ಅನುಭವಿಸಿದೆ. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ದ ಸೋತಿದ್ದ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ದವೂ 5 ರನ್ ಗಳ ಸೋಲನ್ನ ಅನುಭವಿಸಿದೆ.

ಭಾನುವಾರ ಇಂದೋರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಟೀಂ ಇಂಡಿಯಾ ಸುಲಭವಾಗಿ ಗೆಲ್ಲಬಹುದಿತ್ತು, ಆದರೆ ಸ್ಮೃತಿ ಮಂಧಾನ ಔಟಾದ ನಂತರ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದ್ದು, ಟೀಂ ಇಂಡಿಯಾ ಸೋತಿದ್ದು, ಇಂಗ್ಲೆಂಡ್ ತಂಡವು ಗೆಲುವು ಸಾಧಿಸಿದೆ.ಸ್ಮೃತಿ ಮಂಧಾನ ಹಾಗೂ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು 125 ರನ್ಗಳ ಜೊತೆಯಾಟವಾಡಿದರೆ, ನಂತರ ದೀಪ್ತಿ ಶರ್ಮಾ ಅವರೊಂದಿಗೆ ಮಂಧಾನ 67 ರನ್ಗಳ ಜೊತೆಯಾಟವಾಡಿದ್ದರು. ಆದರೆ ಮಂಧಾನ 88 ರನ್ಗಳಿಗೆ ಔಟಾದ ನಂತರ ಇಂಗ್ಲೆಂಡ್ ಕಡೆಗೆ ತಿರುಗಿತು.
ಇದನ್ನೂ ಓದಿ : Kantara Chapter 1: 765 ಕೋಟಿ ಕಲೆಕ್ಷನ್ ಮಾಡಿದ ಕಾಂತಾರ ಚಾಪ್ಟರ್ 1..!
ಪಂದ್ಯದ ನಂತರ ಮಂಧಾನ, ತಮ್ಮ ಕಳಪೆ ಶಾಟ್ ಆಯ್ಕೆಯೇ ಸೋಲಿಗೆ ಕಾರಣವೆಂದು ಒಪ್ಪಿಕೊಂಡರು. ನಾಯಕಿ ಹರ್ಮನ್ಪ್ರೀತ್ ಕೌರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಂಡದ ವೈಫಲ್ಯಕ್ಕೆ ಮಂಧಾನಾ ಜವಾಬ್ದಾರಿ ವಹಿಸಿಕೊಂಡರು.
MUST WATCH: ಒಂದೇ ಒಂದು ಮಳೆಗೆ MINI SWIMMING POOL ಆಯ್ತು MARKET – ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ವ್ಯಾಪಾರಸ್ಥರು