Kantara Chapter 1: ಕಾಂತಾರ ಚಾಪ್ಟರ್-1 (Kantara: Chapter 1) ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಕೇವಲ ಪ್ರಾದೇಶಿಕವಾಗಿ ಅಲ್ಲದೇ ಪ್ರಪಂಚದಾದ್ಯಂತ ಏಕಕಾಲಕ್ಕೆ ತೆರೆಕಂಡ ಕಾಂತಾರ ಚಾಪ್ಟರ್-1 ಸಿನಿಮಾಗೆ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ.

Kantara Chapter 1: ಕಾಂತಾರ ಚಾಪ್ಟರ್-1 ಅಕ್ಟೋಬರ್ 2, 2025 ರಂದು ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರ ಭಾರೀ ಮೆಚ್ಚುಗೆ ಪಡೆದಿದೆ. ಚಿತ್ರತಂಡ ಮತ್ತು ನಿರ್ದೇಶಕ ರಿಷಬ್ ಶೆಟ್ಟಿಯ ಈ ಪ್ರಯೋಗಕ್ಕೆ ಪ್ರೇಕ್ಷಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Rashmika Mandanna : ರಶ್ಮಿಕಾ ಅಭಿನಯದ ‘ಥಮ’ ಸಿನಿಮಾದ ಹಾಟ್ ಸೀನ್ ಗಳಿಗೆ CBFCಯಿಂದ ಕತ್ತರಿ!
ಮೊದಲ ವಾರದಲ್ಲೇ ಸಿನಿಮಾ ಭಾರತದ ಒಳಗೆ ₹300 ಕೋಟಿ “ನೆಟ್” ಗಳಿಕೆ ದಾಖಲಿಸಿದ್ದು, ಮೂರನೇ ವಾರಕ್ಕೂ ಕಾಲಿಟ್ಟರೂ ಕಾಂತಾರ ಚಾಪ್ಟರ್-1 ಸಿನಿಮಾದ ಗಳಿಕೆಯಲ್ಲಿ ಇಳಿಕೆ ಕಾಣಿಸಿಕೊಂಡಿಲ್ಲ. ಹಬ್ಬದ ರಜಾ ದಿನಗಳ ಹಿನ್ನಲೆ ಚಿತ್ರಮಂದಿರಗಳಲ್ಲಿ ಜನಸಂದಣಿ ಮುಂದುವರಿದಿದೆ. ಬಿಡುಗಡೆ ಆದ 18 ದಿನಗಳಲ್ಲೇ ಚಿತ್ರವು ವಿಶ್ವದಾದ್ಯಂತ ಸುಮಾರು ₹765 ಕೋಟಿ ಗಳಿಕೆ ಮಾಡಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲು ಆಗಿದೆ.

ಇನ್ನು ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಮತ್ತು ಚಿತ್ರತಂಡ ತೀರ್ಥಯಾತ್ರೆ ಕೈಗೊಂಡಿದೆ. ಉತ್ತರ ಧ್ರುವದಿಂದ ದಕ್ಷಿಣ ಧ್ರುವದವರೆಗೆ ವಿವಿಧ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಯಶಸ್ಸಿಗೆ ಕಾರಣವಾದ ದೇವರ ಹರಕೆ ತೀರಿಸುತ್ತಿದ್ದಾರೆ. ಜೊತೆಗೆ ಜನರಿಗೆ ಈ ಮೂಲಕ ಧನ್ಯವಾದಗಳನ್ನ ತಿಳಿಸಿದೆ ಚಿತ್ರತಂಡ.
MUST WATCH: ಹುಳಿಯಾರಿನಲ್ಲಿ RSS ಶತಾಬ್ಧಿ ಪಥಸಂಚಲನ ಗಣವೇಷಧಾರಿಯಾಗಿ ಮಿಂಚಿದ ಸ್ವಯಂ ಸೇವಕರು




