Rashmika Mandanna: ನಟಿ ರಶ್ಮಿಕಾ ಮಂದಣ್ಣ ನಟಿಸಿರುವ ‘ಥಮ’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ರಶ್ಮಿಕಾ ಮಂದಣ್ಣ ಬಲು ಹಾಟ್ ಆಗಿ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದು, ಇದೀಗ ಸಿಬಿಎಫ್ಸಿಯು ರಶ್ಮಿಕಾರ ಕೆಲ ಹಾಟ್ ದೃಶ್ಯಗಳಿಗೆ ಕತ್ತರಿ ಹಾಕಿಸಿದೆ.

Rashmika Mandanna: ಬಾಲಿವುಡ್ನಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಹೊಸ ಚಿತ್ರ ‘ಥಮ’ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಮೊದಲ ಬಾರಿಗೆ ಬಲು ಗ್ಲಾಮರಸ್ಆಗಿ ಅಭಿನಯಿಸಿದ್ದು, ರಶ್ಮಿಕಾ ಈ ಚಿತ್ರದಲ್ಲಿ ದೆವ್ವವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಿನಿಮಾದಲ್ಲಿ ರಶ್ಮಿಕಾ ಹಾಗೂ ನಾಯಕ ಆಯುಷ್ಮಾನ್ ಖುರಾನಾ ಅವರ ನಡುವೆ ಇರುವ ಕೆಲ ಶೃಂಗಾರ ದೃಶ್ಯಗಳು ಹಾಗೂ ಐಟಂ ಹಾಡುಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಇದೇ ಹಿನ್ನೆಲೆಯಲ್ಲಿ ಸಿನಿಮಾ ಪ್ರಮಾಣೀಕರಣ ಮಂಡಳಿ (CBFC) ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದೆ. ಐದು ಸೆಕೆಂಡ್ನ ಕಿಸ್ಸಿಂಗ್ ದೃಶ್ಯ ಕತ್ತರಿಸಲಾಗಿದೆ. ಅಲ್ದೇ ಹೈ ಗ್ಲಾಮರಸ್ ಸೀನ್ಸ್ ಸೇರಿ ಕೆಲವು ದೃಶ್ಯಗಳಿಗೆ ಕಟ್ ನೀಡಲು ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Kanthara Chapter 1 : ಕಾಂತಾರ ಚಾಪ್ಟರ್-1 ಭರ್ಜರಿ ಯಶಸ್ಸು- ಕ್ಲಬ್ ಸೇರಿದ 700 ಕೋಟಿ

ತೆಲುಗು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದಿದ್ದ ರಶ್ಮಿಕಾ, ಈಗ ಬಾಲಿವುಡ್ ಬೇಡಿಕೆಗೆ ತಕ್ಕಂತೆ ಗ್ಲಾಮರ್ ತೋರಿಸುತ್ತಿದ್ದಾರೆ. ರಣ್ಬೀರ್ ಕಪೂರ್, ಸಲ್ಮಾನ್ ಖಾನ್, ಕಾರ್ತಿಕ್ ಆರ್ಯನ್ ಅವರಂತಹ ಸ್ಟಾರ್ಗಳ ಜೊತೆ ನಟಿಸುತ್ತಿರುವ ರಶ್ಮಿಕಾ, ಇದೀಗ ಹೊಸ ಅವತಾರದಲ್ಲಿ ಮೂಡಿಬರುತ್ತಿದ್ದಾರೆ. ‘ಥಮ’ ರಶ್ಮಿಕಾರ ಮೊದಲ ಹಾರರ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಆಯುಷ್ಮಾನ್ ಖುರಾನಾ ನಾಯಕ. ನವಾಜುದ್ಧೀನ್ ಸಿದ್ಧಿಖಿ ವಿಲನ್. ಸಿನಿಮಾ ಅನ್ನು ಮ್ಯಾಡ್ಲಾಕ್ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ನಿರ್ದೇಶನ ಮಾಡಿರುವುದು ಆದಿತ್ಯ ಸರ್ಪೋಟ್ಧಾರ್. ‘ಥಮ’ ಚಿತ್ರ ಇದೀಗ ಸಿಬಿಎಫ್ಸಿ ಪ್ರಮಾಣಪತ್ರ ಪಡೆದುಕೊಂಡಿದ್ದು, ಸಿನಿಮಾ ಅಕ್ಟೋಬರ್ 21 ರಂದು ಬಿಡುಗಡೆ ಆಗಲಿದೆ.
MUST WATCH: TB JAYACHANDRA | ನಕಲಿ ಅಂಗವಿಕಲ ಕಾರ್ಡ್ ಪ್ರಕರಣ – ಶಿರಾ ಆಸ್ಪತ್ರೆಗೆ ಜಯಚಂದ್ರ ದಿಢೀರ್ ವಿಸಿಟ್ | SIRA NEWS |




