Kanthara Chapter 1: ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುತ್ತಿರುವ ‘ಕಾಂತಾರ ಚಾಪ್ಟರ್-1’ (Kantara Chapter 1) ಇದೀಗ 700 ಕೋಟಿ ಕ್ಲಬ್ ಸೇರಿ ಬಾಕ್ಸಾಫೀಸ್ ನಲ್ಲಿ ಭರ್ಜರಿ ಸಂಚಲನ ಮೂಡಿಸಿದೆ. ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಸಿನಿಮಾ ಯಶಸ್ಸಿನ ಬೆನ್ನಲ್ಲೇ ಉತ್ತರ ಭಾರತದ ತೀರ್ಥಯಾತ್ರೆಗೆ ತೆರಳಿದ್ದಾರೆ.

ಇದನ್ನೂ ಓದಿ : Diwali Crackers : ಹಸಿರು ಪಟಾಕಿಗೆ ಮಾತ್ರ ಅನುಮತಿ – ನಿಷೇಧಿತ ಪಟಾಕಿ ಮಾರಾಟದ ಮೇಲೆ ಹದ್ದಿನ ಕಣ್ಣು!
ರಿಷಬ್ ಶೆಟ್ಟಿ ವಾರಣಾಸಿಯಲ್ಲಿ ನಡೆದ ಗಂಗಾ ಆರತಿಯಲ್ಲಿ ಭಾಗವಹಿಸಿ, ಪವಿತ್ರ ಗಂಗೆಯ ಕಿನಾರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವಿ ಚಾಮುಂಡೇಶ್ವರಿ ದೇವಿ ಆಶೀರ್ವಾದ ಪಡೆದಿದ್ದರು.
MUST WATCH: GUBBI | ಗುಬ್ಬಿಯಲ್ಲಿ1.40 ಲಕ್ಷದ ಅಭಿವೃದ್ಧಿ ಕಾಮಗಾರಿ – ಶಾಸಕ SR SRINIVAS ಗುದ್ದಲಿ ಪೂಜೆ | GUBBI NEWS |
‘ಕಾಂತಾರ ಚಾಪ್ಟರ್-1’ ಚಿತ್ರವು ತೆರೆಕಂಡ ದಿನದಿಂದ ಹಿಡಿದು ಇದೀಗ ಮೂರನೇ ವಾರದ ವರೆಗೆ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಚಿತ್ರ ತಯಾರಕ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರ, ಪ್ರತಿ ದಿನವೂ ಹೊಸ ಕಲೆಕ್ಷನ್ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಇನ್ನೂ ಕೆಲವೇ ದಿನಗಳಲ್ಲಿ ‘ಕಾಂತಾರ ಚಾಪ್ಟರ್-1’ ಸಿನಿಮಾ ₹1000 ಕೋಟಿ ಕ್ಲಬ್ ಸೇರಬಹುದೆಂಬ ನಿರೀಕ್ಷೆ ಹೆಚ್ಚಾಗುತ್ತಿದೆ.