Diwali Crackers : ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ ರಾಜ್ಯ ಸರ್ಕಾರದಿಂದ ಕಂಡೀಷನ್. ಈ ಬಾರಿ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಿದ್ದು, ನಿಷೇಧಿತ ಪಟಾಕಿಗಳ ಮಾರಾಟ ಹಾಗೂ ಬಳಕೆಯ ವಿರುದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪೊಲೀಸ್ ಇಲಾಖೆ ತೀವ್ರ ನಿಗಾವಹಿಸಿದೆ.

Diwali Crackers: ಬೆಳಕಿನ ಹಬ್ಬ ದೀಪಾವಳಿ ಇನ್ನೇನು ಒಂದು ದಿನ ಬಾಕಿಯಿದ್ದು, ಹಬ್ಬದ ಸಂಭ್ರಮ ಹೆಚ್ಚುತ್ತಿರುವಂತೆಯೇ ರಾಜ್ಯ ಸರ್ಕಾರ ಪರಿಸರ ಸ್ನೇಹಿ ಹಬ್ಬದ ಕರೆ ನೀಡಿದ್ದು, ಈ ಬಾರಿ ಹಸಿರು ಪಟಾಕಿಗಳಿಗೆ (Green Firecrackers) ಮಾತ್ರ ಅವಕಾಶ ಕಲ್ಪಿಸಿದೆ. ನಿಷೇಧಿತ ಪಟಾಕಿಗಳ ಮಾರಾಟ ಹಾಗೂ ಬಳಕೆಯ ವಿರುದ್ಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಹಾಗೂ ಪೊಲೀಸ್ ಇಲಾಖೆ ತೀವ್ರ ನಿಗಾವಹಿಸಿದೆ.

ಹೌದು.. ಇಂದು, ನಾಳೆ ಹಾಗೂ ಹಬ್ಬವಿರುವವರೆಗೂ ಮಳಿಗೆಗಳ ಮೇಲೆ ನಿರಂತರ ಗಮನ ವಹಿಸಲು ಯೋಜನೆ ರೂಪಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ 14 ಪ್ರಾದೇಶಿಕ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ದಾಳಿ ನಡೆಸಲಿದ್ದು, ನಿಷೇಧಿತ ಪಟಾಕಿಗಳ ಮಾರಾಟದ ದೃಢೀಕರಣವಾದರೆ ಅಂಗಡಿಮಾಲಿಕರ ವಿರುದ್ಧ ದಂಡ ಹಾಗೂ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎನ್ನುತ್ತಿದ್ದಾರೆ.
ಇದನ್ನೂ ಓದಿ : Weather Report : ಭಾರೀ ಮಳೆಯ ಮುನ್ಸೂಚನೆ-ರಾಜ್ಯದಲ್ಲಿ ನಾಳೆ ಯೆಲ್ಲೋ ಅಲರ್ಟ್..!
ಇನ್ನು ಹಸಿರು ಪಟಾಕಿ ಪರಿಗಣನೆಗೆ 10 ಮೀಟರ್ ಅಂತರದಿಂದ ಶಬ್ದ ಮಟ್ಟವನ್ನು ಮಾಪಿಸುವ ಮಾಪಕ ಉಪಕರಣಗಳ (Sound Meters) ಮೂಲಕ ಪರಿಶೀಲನೆ ನಡೆಸಲಾಗುತ್ತಿದ್ದು, ಶಬ್ದ ಮಟ್ಟ 125 ಡೆಸಿಬಲ್ಗೆ ಮೀರಿದರೆ, ಆ ಪಟಾಕಿ ನಿಷೇಧಿತವೆಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ, 1991ರ ಪಬ್ಲಿಕ್ ಲಿಯಾಬಿಲಿಟಿ ಆಕ್ಟ್ ಅಡಿಯಲ್ಲಿ ಪಟಾಕಿ ಮಳಿಗೆಗಳಿಗೆ ಇನ್ಶುರೆನ್ಸ್ ಮಾಡಿಸಿಕೊಳ್ಳುವ ಸಲಹೆಯನ್ನು ಅಧಿಕಾರಿಗಳು ನೀಡಿದ್ದಾರೆ.
MUST WATCH : ತುಮಕೂರಲ್ಲಿ KABADDI ಪಂದ್ಯಾವಳಿ ಡಾ.ಜಿ.ಪರಮೇಶ್ವರ್ ರಿಂದ ಚಾಲನೆ | TUMAKURU KABADDI |




