Vijay Deverakonda : ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಅವಾರ್ಡ್ ವಿಜೇತೆ ಕೀರ್ತಿ ಸುರೇಶ್ ಅವರು ಮೊದಲ ಬಾರಿಗೆ ಒಟ್ಟಾಗಿ ಅಭಿನಯಿಸುತ್ತಿರುವ ಹೊಸ ಚಿತ್ರವೊಂದು ಸೆಟ್ಟೇರಿದೆ.

ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಅವಾರ್ಡ್ ವಿಜೇತೆ ಕೀರ್ತಿ ಸುರೇಶ್ ಅವರು ಮೊದಲ ಬಾರಿಗೆ ಒಟ್ಟಾಗಿ ಅಭಿನಯಿಸುತ್ತಿರುವ ಹೊಸ ಚಿತ್ರವೊಂದು ಸೆಟ್ಟೇರಿದ್ದು, ಇದರ ಮುಹೂರ್ತದ ದೃಶ್ಯಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹನು ರಾಘವಪುಡಿ ಅವರ ನಿರ್ದೇಶನ
ಚಿತ್ರದ ಮೊದಲ ಶಾಟ್ಗೆ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಕ್ಲಾಪ್ ಕೊಟ್ಟದ್ದು, ನಿರ್ಮಾಪಕ ನಿರಂಜನ್ ರೆಡ್ಡಿ ಕ್ಯಾಮೆರಾ ಆನ್ ಮಾಡಿದರು. ನಿರ್ದೇಶಕ ಹನು ರಾಘವಪುಡಿ ಮೊದಲ ದೃಶ್ಯವನ್ನು ನಿರ್ದೇಶಿಸಿದರು. ಈ ಹೊಸ ಸಿನಿಮಾವನ್ನು ರವಿಕಿರಣ್ ಕೋಲಾ ನಿರ್ದೇಶಿಸುತ್ತಿದ್ದಾರೆ.
ಇದನ್ನು ನೋಡಿ : ಬೇರೆ ಲುಕ್ನಲ್ಲಿ ಬಂದ ವಿಜಯ್ ದೇವರಕೊಂಡ; ಹೊಸ ಚಿತ್ರಕ್ಕೆ ಮುಹೂರ್ತ

ದಿಲ್ ರಾಜು, ಶಿರೀಶ್ ನಿರ್ಮಾಣದಲ್ಲಿ “SVC 59”
ಈ ಪ್ರಾಜೆಕ್ಟ್ ಅನ್ನು ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹಿರಿಯ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಶ್ ನಿರ್ಮಿಸುತ್ತಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರಕ್ಕೆ “SVC 59” ಎಂಬ ಶೀರ್ಷಿಕೆ ಇಡಲಾಗಿದೆ.

ಗ್ರಾಮೀಣ ಹಿನ್ನೆಲೆ, ಆ್ಯಕ್ಷನ್ ಡ್ರಾಮಾ
ಈ ಸಿನಿಮಾ ಒಂದು ಗ್ರಾಮೀಣ ಹಿನ್ನೆಲೆಯ ಕಥೆಯನ್ನು ಹೊಂದಿದ್ದು, ತೀವ್ರ ಆ್ಯಕ್ಷನ್ ಹಾಗೂ ಎಮೋಷನಲ್ ಡ್ರಾಮಾ ಜೊತೆಯಾಗಿ ಮೂಡಲಿದೆ. ಅಕ್ಟೋಬರ್ 16ರಿಂದ ಶೂಟಿಂಗ್ ಪ್ರಾರಂಭವಾಗಲಿದೆ.
ಇದನ್ನು ಓದಿ : ಕಲ್ಪತರು ಬಡಾವಣೆ ಜನರಿಗೆ ಸಿಕ್ತಿಲ್ಲ ಕಸದ ಸಮಸ್ಯೆಯಿಂದ ಮುಕ್ತಿ

ವಿಜಯ್ ದೇವರಕೊಂಡ ಲುಕ್ಗೆ ಹೈಪ್
ವಿಜಯ್ ದೇವರಕೊಂಡ ಹೊಸ ಲುಕ್ ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದು, ಇದರಿಂದಾಗಿ ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಮೂಡಿದೆ.





