Tumakuru : ನಮ್ಮ ತುಮಕೂರು ಸ್ಮಾರ್ಟ್ ಸಿಟಿ, ಶೈಕ್ಷಣಿಕ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗ್ತಿದೆ. ಆದ್ರೆ ನಗರ ದ ಸೌಂದರ್ಯವನ್ನು ಕಸದ ಸಮಸ್ಯೆ ಹಾಳು ಮಾಡುತ್ತಿದೆ.

ನಮ್ಮ ತುಮಕೂರು ಸ್ಮಾರ್ಟ್ ಸಿಟಿ, ಶೈಕ್ಷಣಿಕ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗ್ತಿದೆ. ಆದ್ರೆ ನಗರದ ಸೌಂದರ್ಯ ವನ್ನು ಕಸದ ಸಮಸ್ಯೆ ಹಾಳು ಮಾಡುತ್ತಿದೆ. ನಗರದ ಮೂಲೆ ಮೂಲೆಯಲ್ಲಿಯೂ ಕಸದ ಸಮಸ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಪ್ರಜಾಶಕ್ತಿ ಟಿವಿ ಸಾಲು ಸಾಲು ವರದಿ ಮಾಡಿದ್ರೂ ಕೂಡ ನಗರದ ಚಿತ್ರಣ ಮಾತ್ರ ಬದಲಾಗುತ್ತಿಲ್ಲ.
Tumakuru ಕಲ್ಪತರು ಬಡಾವಣೆಯಲ್ಲಿ ಕಸದ ಸಮಸ್ಯೆ
ನಗರದ ವಾರ್ಡ್ ನಂಬರ್ 11 ಕಲ್ಪತರು ಬಡಾವಣೆಯ ಅಂಬೇಡ್ಕರ್ ರಸ್ತೆಯಲ್ಲಿ, ಕಸದ ಸಮಸ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ಈ ಕಸದಿಂದ ನಾಯಿ ಹಂದಿಗಳ ಕಾಟ ಕೂಡ ಹೆಚ್ಚಾಗಿದ್ದು, ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಕೆಲವು ನಿವಾಸಿಗಳು ಕಸವನ್ನ ಕಸದ ಗಾಡಿಗೆ ಹಾಕದೇ ರಸ್ತೆಯಲ್ಲಿ ಎಲ್ಲೆಂದರಲ್ಲಿ ಸುರಿದುಹೋಗ್ತಿದ್ದು, ಸುತ್ತಮುತ್ತಲೂ ಗಬ್ಬೆದ್ದು ನಾರುತ್ತಿದೆ. ಅಲ್ದೇ ಕಸದ ಸಮಸ್ಯೆಯಿಂದಾಗಿ ಹಂದಿ, ನಾಯಿಗಳ ಕಾಟ ಹೆಚ್ಚಾಗಿದೆ. ಆದರೆ, ಪಾಲಿಕೆ ಸಿಬ್ಬಂದಿ ಮಾತ್ರ ಅವರ ಮನಸ್ಸಿಗೆ ಬಂದಾಗ ಬಂದು ಕಸ ತೆಗೀತಾರೆ, ಇಲ್ಲ ಕಸಕ್ಕೆ ಬೆಂಕಿ ಹಾಕಿ ಹೋಗ್ತಾರೆ ಅಂತ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ರು.
ನಾಯಿಗಳ ಕಾಟಕ್ಕೆ ವಿದ್ಯಾರ್ಥಿಗಳ ಬೇಸರ
ಇನ್ನು ಪಕ್ಕದಲ್ಲಿಯೇ ಬಿಸಿಎಂ ಹಾಸ್ಟೆಲ್ ಇದ್ದು, ದಿನನಿತ್ಯ ಇದೇ ರಸ್ತೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಬೇಕಾದ ಸ್ಥಿತಿ ಇದೆ. ಈ ರಸ್ತೆಯಲ್ಲಿ ಕಸದ ರಾಶಿ ರಾಶಿ ಬಿದ್ದಿದ್ದು, ನಾಯಿಗಳ ಕಾಟ ಕೂಡ ಹೆಚ್ಚಾ ಗಿದ್ದು, ನಾಯಿಗಳ ಕಾಟದಿಂದ ವಿದ್ಯಾರ್ಥಿಗಳು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ.
ಇದನ್ನು ಓದಿ : Virat Kohli : RCB ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್





