Virat Kohli : ಭಾರತದ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ಅವರು IPL ಹಾಗೂ RCB ಫ್ರಾಂಚೈಸಿಯಿಂದ ನಿಧಾನವಾಗಿ ಹಿಂದೆ ಸರಿಯುವ ಸೂಚನೆಗಳನ್ನು ನೀಡುತ್ತಿದ್ದಾರೆ.

ಭಾರತದ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯಿಂದ ನಿಧಾನವಾಗಿ ಹಿಂದೆ ಸರಿಯುವ ಸೂಚನೆಗಳನ್ನು ನೀಡುತ್ತಿದ್ದಾರೆ. ಕೆಲವು ವರದಿಗಳ ಪ್ರಕಾರ, ಕೊಹ್ಲಿ ಅವರು ಆರ್ಸಿಬಿಯೊಂದಿಗಿನ ಪ್ರಮುಖ ಬ್ರಾಂಡ್ ಒಪ್ಪಂದ ವನ್ನು ನವೀಕರಿಸಲು ನಿರಾಕರಿಸಿದ್ದಾರೆ. ಇದರೊಂದಿಗೆ ಅವರು ಆರ್ಸಿಬಿಯಿಂದ ವಿದಾಯ ಹೇಳುತ್ತಿರುವೆನೆಂಬ ಅನುಮಾನಗಳು ತಲೆ ಎತ್ತಿವೆ.
ಐಪಿಎಲ್ಗೂ ವಿದಾಯ? ಧೋನಿಯ ಹಾದಿ ಹಿಡಿಯುವ ಸಾಧ್ಯತೆ
ಟೆಸ್ಟ್ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಿಂದ ಈಗಾಗಲೇ ನಿವೃತ್ತಿ ಘೋಷಿಸಿರುವ ಕೊಹ್ಲಿ, ಈಗ ಏಕದಿನ ವಿಶ್ವಕಪ್ 2027ರಲ್ಲಿ ಆಡುವ ಕುರಿತು ಯಾವುದೇ ಸ್ಪಷ್ಟತೆ ನೀಡಿಲ್ಲ. ಇದರ ಜೊತೆಗೆ ಐಪಿಎಲ್ನಲ್ಲಿಯೂ ಮುಂದುವರಿಯುವ ಸಾಧ್ಯತೆ ಕಡಿಮೆಯಾಗುವ ನಿರೀಕ್ಷೆಯಿದೆ. ಎಂ.ಎಸ್.ಧೋನಿ ಹಾದಿಯಲ್ಲಿ ಇವರು ಕೂಡ ನಿವೃತ್ತಿಯತ್ತ ನಡೆಯುತ್ತಿದ್ದಾರೆ ಎನ್ನಲಾಗಿದೆ.
ಆರ್ಸಿಬಿಯಲ್ಲಿ ನಾಯಕತ್ವ ಬದಲಾವಣೆ
ಐಪಿಎಲ್ 2025ಕ್ಕೂ ಮುನ್ನ ಆರ್ಸಿಬಿ ತನ್ನ ನಾಯಕತ್ವದಲ್ಲಿ ಬದಲಾವಣೆ ತಂದು, ಫಾಫ್ ಡು ಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿತು. ಮುಂದಿನ ನಾಯಕತ್ವದ ಕುರಿತು ಕೊಹ್ಲಿಯನ್ನು ಸಂಪರ್ಕಿಸಿದಾಗ, ಅವರು ಈ ಹೊಣೆ ಹೊತ್ತಿಕೊಳ್ಳಲು ನಿರಾಕರಿಸಿದರು. ಬದಲಿಗೆ ಅವರು ರಜತ್ ಪಾಟೀದಾರ್ ಹೆಸರನ್ನು ಶಿಫಾರಸು ಮಾಡಿದ್ದು, ಆರ್ಸಿಬಿ ಕೂಡ ಅದನ್ನು ಅಂಗೀಕರಿಸಿದೆ. ಪಾಟೀದಾರ್ ಈಗ ಹೊಸ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

Virat Kohli : 267 ಪಂದ್ಯಗಳಲ್ಲಿ 8661 ರನ್ಗಳು
18 ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ ಕೊಹ್ಲಿ 267 ಪಂದ್ಯಗಳಲ್ಲಿ 8661 ರನ್ಗಳನ್ನು ಕಲೆಹಾಕಿದ್ದಾರೆ. ಅವರು 143 ಪಂದ್ಯಗಳಲ್ಲಿ ಆರ್ಸಿಬಿಗೆ ನಾಯಕತ್ವ ವಹಿಸಿದ್ದಾರೆ. ತಂಡದ ನಿರಂತರ ಸ್ಫೂರ್ತಿದಾಯಕ ಶಕ್ತಿ ಆಗಿದ್ದ ಕೊಹ್ಲಿಯು, ಆಟದಲ್ಲಿನ ಶಿಸ್ತಿನಿಂದ ಹಾಗೂ ಸ್ಥಿರತೆಗಳಿಂದ ಆರ್ಸಿಬಿಗೆ ಅನೇಕ ಸ್ಪಾಂಸರ್ ಡೀಲ್ಗಳನ್ನು ತಂದುಕೊಟ್ಟಿದ್ದಾರೆ.
ಈ ಬೆಳವಣಿಗೆಗಳ ಪೈಪೋಟಿಯಲ್ಲಿ, ಕೊಹ್ಲಿಯ ಮುಂದಿನ ನಡೆಯೆನೆಂಬದು ಅಪಾರ ಕುತೂಹಲಕ್ಕೆ ಕಾರಣ ವಾಗಿದೆ.

ಇದನ್ನು ನೋಡಿ : ಕೊಹ್ಲಿ ಫ್ಯಾನ್ಸ್ ಓದಲೇಬೇಕಾದ ಸ್ಟೋರಿ..!




