ಡಾ. B.R Ambedkar ಜಯಂತಿಯನ್ನು ಯಾಕೆ ಆಚರಿಸಲಾಗುತ್ತೆ..? ಪ್ರಾಮುಖ್ಯತೆ ಏನು?

ಸಮಾನತೆಯ ಶಿಲ್ಪಿ, ಭಾರತದ ಸಂವಿಧಾನದ ಮಹಾನ್ ರೂಪಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಇಂದು ದೇಶಾದ್ಯಂತ ಗೌರವದಿಂದ ಆಚರಿಸಲಾಗುತ್ತಿದೆ. ಏಪ್ರಿಲ್ 14 ಭಾರತೀಯರ ಪಾಲಿಗೆ ಅತ್ಯಂತ ಗೌರವದ ದಿನವಾಗಿದೆ. ಭಾರತದ ಸಂವಿಧಾನದ ಪ್ರಮುಖ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ ಇದೇ ದಿನವಾಗಿದೆ. ಪ್ರತಿವರ್ಷ ಈ ದಿನವನ್ನು ಅಂಬೇಡ್ಕರ್ ಜಯಂತಿಯಾಗಿ ಆಚರಿಸಿ, ಅವರು ದೇಶಕ್ಕೆ ನೀಡಿದ ಅಪಾರ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ. ಇನ್ನು ಈ ವಿಶೇಷ ದಿನದ ಮಹತ್ವದ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
ಅಂಬೇಡ್ಕರ್ ಜನನ
1891ರ ಏಪ್ರಿಲ್ 14ರಂದು ಮಧ್ಯಪ್ರದೇಶದ ಮಾಹೋದಲ್ಲಿ ಜನಿಸಿದ Ambedkar ಅವರು ಬಾಲ್ಯದಲ್ಲೇ ಸಾಮಾಜಿಕ ಅಸಮಾನತೆ ಮತ್ತು ಅಸ್ಪೃಶ್ಯತೆಯ ಕಠಿಣ ಅನುಭವಗಳನ್ನು ಎದುರಿಸಿದರು. ಆದರೆ ಈ ಸವಾಲುಗಳು ಅವರಲ್ಲಿ ಶಿಕ್ಷಣದ ಮೂಲಕ ಸಮಾಜ ಪರಿವರ್ತನೆ ಸಾಧಿಸಬೇಕೆಂಬ ದೃಢಸಂಕಲ್ಪವನ್ನು ಬೆಳೆಸಿದವು.

ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್
ಮುಂಬೈ ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ, ಅವರು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಹಾಗೂ ಇಂಗ್ಲೆಂಡ್ನ ಲಂಡನ್ ಸ್ಕೂಲ್ ಆಫ್ ಇಕಾನಾಮಿಕ್ಸ್ನಲ್ಲಿ ಉನ್ನತ ಶಿಕ್ಷಣ ಪಡೆದು ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು. ಜ್ಞಾನ ಮತ್ತು ಅಧ್ಯಯನದ ಮೂಲಕ ಸಮಾಜಕ್ಕೆ ಹೊಸ ದಿಕ್ಕು ತೋರಿದ ಮಹಾನ್ ಚಿಂತಕರಾಗಿದ್ದರು.
READ THIS : ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾಗೂ ಸೆನ್ಸಾರ್ ಸಮಸ್ಯೆ
ರಾಜಕೀಯ ಕ್ಷೇತ್ರಗಳಲ್ಲಿ ಮೀಸಲಾತಿ
ಭಾರತದ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ಅವರು, ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯ ಎಂಬ ಮೂಲಭೂತ ತತ್ವಗಳನ್ನು ಅಳವಡಿಸಿ, ಎಲ್ಲ ವರ್ಗಗಳಿಗೂ ಸಮಾನ ಹಕ್ಕುಗಳನ್ನು ಖಚಿತಪಡಿಸಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮೀಸಲಾತಿ ವ್ಯವಸ್ಥೆ ರೂಪಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.

ಸಾಮಾಜಿಕ ಹೋರಾಟದ ಜೊತೆಗೆ, ಕಾರ್ಮಿಕರ ಹಕ್ಕುಗಳು, ಮಹಿಳಾ ಸಮಾನತೆ, ಎಂಟು ಗಂಟೆಗಳ ಕೆಲಸದ ನಿಯಮ ಹಾಗೂ ವೇತನ-ಕಲ್ಯಾಣ ಯೋಜನೆಗಳಲ್ಲಿ ಕೂಡ ಅವರು ಮಹತ್ತರ ಕೊಡುಗೆ ನೀಡಿದ್ದಾರೆ. ಅವರ ಚಿಂತನೆಗಳು ರಾಜಕೀಯಕ್ಕೆ ಮಾತ್ರ ಸೀಮಿತವಾಗದೆ, ಸಮಗ್ರ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯತ್ತ ಕೇಂದ್ರೀಕೃತವಾಗಿದ್ದವು.
ಬೌದ್ಧ ಧರ್ಮ ಸ್ವೀಕಾರ
1956ರಲ್ಲಿ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿ ಲಕ್ಷಾಂತರ ಅನುಯಾಯಿಗಳಿಗೆ ಹೊಸ ಜೀವನದ ದಾರಿ ತೋರಿಸಿದರು. ಅವರ ಈ ಹೆಜ್ಜೆ ಸಮಾಜದ ಅಸಮಾನತೆಯ ವಿರುದ್ಧದ ಶಾಂತಿಪೂರ್ಣ ಕ್ರಾಂತಿಯಂತೆ ಪರಿಣಮಿಸಿತು.
ಇತಿಹಾಸ
1928ರಲ್ಲಿ ಪುಣೆಯಲ್ಲಿ ಮೊದಲ ಬಾರಿಗೆ ಅಂಬೇಡ್ಕರ್ ಅವರ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಲಾಯಿತು. ಅಂದಿನಿಂದಲೇಈ ದಿನವನ್ನು ಅಂಬೇಡ್ಕರ್ ಜಯಂತಿ ಅಥವಾ ಭೀಮ್ಜಯಂತಿ ಎಂದು ಆಚರಿಸಲಾಗುತ್ತದೆ.
MUST WATCH : ಒಳ ಮೀಸಲಾತಿ ಜಾರಿ ಮಾಡ್ತಿಲ್ಲ ಅಂತ ಸರ್ಕಾರಿ ಅಂಬೇಡ್ಕರ್ ಜಯಂತಿ ಬಹಿಷ್ಕಾರ





