ಬಿಡುಗಡೆಗೆ ಸಿದ್ಧವಾಗಿರುವ ‘KD’ ಸಿನಿಮಾಗೆ ಈಗ ಸೆನ್ಸಾರ್ ಪ್ರಮಾಣಪತ್ರ ಸಿಗುವುದು ಕಷ್ಟವಾಗಿದೆ.

‘KVN ಪ್ರೊಡಕ್ಷನ್ಸ್’ ನಿರ್ಮಾಣ ಮಾಡಿರುವ ‘ಜನ ನಾಯಗನ್’ ಸಿನಿಮಾಗೆ ಸೆನ್ಸಾರ್ ಸಮಸ್ಯೆ ಆಗಿರುವುದು ಗೊತ್ತೇ ಇದೆ. ಈಗ ಅದೇ ನಿರ್ಮಾಣ ಸಂಸ್ಥೆಯ ‘ಕೆಡಿ’ ಸಿನಿಮಾ ಕೂಡ ಇದೇ ರೀತಿಯ ಸಮಸ್ಯೆಗೆ ಸಿಲುಕಿದೆ. ಧ್ರುವ ಸರ್ಜಾ ನಟನೆಯ ಈ ಚಿತ್ರವನ್ನು ಜೋಗಿ ಪ್ರೇಮ್ ನಿರ್ದೇಶಿಸಿದ್ದಾರೆ. ಬಿಡುಗಡೆ ದಿನಾಂಕ ಸಮೀಪಿಸುತ್ತಿರುವ ವೇಳೆಯಲ್ಲೇ, ಹೊಸ ಸಂಕಷ್ಟ ಶುರುವಾಗಿದೆ.
ಕೆಲವು ಸಾಲುಗಳಲ್ಲಿ ತಿದ್ದುಪಡಿ ಮಾಡುವಂತೆ ಸೂಚನೆ
‘KD’ ಸಿನಿಮಾವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿ ಸದಸ್ಯರು ಈಗಾಗಲೇ ವೀಕ್ಷಿಸಿದ್ದಾರೆ. ಚಿತ್ರದಲ್ಲಿ ಹೆಚ್ಚು ರಕ್ತಪಾತ ಇರುವ ಕಾರಣದಿಂದ ‘ಎ’ ಪ್ರಮಾಣಪತ್ರ ನೀಡಲು ಮಂಡಳಿ ಸಿದ್ಧವಾಗಿತ್ತು. ಜೊತೆಗೆ, ಹಾಡಿನ ಕೆಲವು ಸಾಲುಗಳಲ್ಲಿ ತಿದ್ದುಪಡಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಚಿತ್ರತಂಡವೂ ಅದನ್ನು ಒಪ್ಪಿಕೊಂಡಿತ್ತು.
READ THIS : ಹಾರ್ದಿಕ್ ವಿಕೆಟ್ ಉರುಳಿದಾಗ ಕುಣಿದು ಕುಪ್ಪಳಿಸಿದ ಅಣ್ಣ ಕೃನಾಲ್ ಪಾಂಡ್ಯ..!
ಆದರೆ ಅಂತಿಮವಾಗಿ ಪ್ರಮಾಣಪತ್ರ ನೀಡದೇ, ಸಿನಿಮಾವನ್ನು ಮುಂಬೈನಲ್ಲಿರುವ ಕೇಂದ್ರ ಸೆನ್ಸಾರ್ ಮಂಡಳಿ ಹಾಗೂ ರಿವೈಸಿಂಗ್ ಕಮಿಟಿಗೆ ಕಳುಹಿಸಲಾಗಿದೆ. ಇದನ್ನು ನಿರ್ದೇಶಕ ಅಥವಾ ನಿರ್ಮಾಪಕರಿಗೆ ತಿಳಿಸದೇ ಮಾಡಿದ ಕ್ರಮ ಚಿತ್ರತಂಡದ ಅಸಮಾಧಾನಕ್ಕೆ ಕಾರಣವಾಗಿದೆ. ಸೆನ್ಸಾರ್ ಮಂಡಳಿಯಿಂದ ನಿಯಮ ಉಲ್ಲಂಘನೆ ಆಗಿದೆ ಎಂದು ಚಿತ್ರತಂಡ ಆರೋಪಿಸಿದೆ.

ಬಿಡುಗಡೆಗೆ ಹೊಡೆತ?
ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ, ಸಮಯಕ್ಕೆ ಪ್ರಮಾಣಪತ್ರ ಸಿಗದಿದ್ದರೆ ಬಿಡುಗಡೆ ದಿನಾಂಕ ಮುಂದೂಡಲ್ಪಡುವ ಸಾಧ್ಯತೆ ಇದೆ. ಇದೇ ರೀತಿಯ ಸಮಸ್ಯೆಯಿಂದ ‘ಜನ ನಾಯಗನ್’ ಚಿತ್ರವೂ ಹಿಂದೆ ತೊಂದರೆ ಅನುಭವಿಸಿತ್ತು.
ಹಾಡಿನಿಂದಲೇ ಆರಂಭವಾದ ವಿವಾದ
‘ಕೆಡಿ’ ಚಿತ್ರದ ‘ಸರ್ಸೆ ನಿನ್ನ ಸೆರಗ’ ಹಾಡು ಬಿಡುಗಡೆಯಾದ ಬಳಿಕವೇ ವಿವಾದ ಪ್ರಾರಂಭವಾಗಿತ್ತು. ಹಾಡಿನ ಸಾಹಿತ್ಯ ಅಶ್ಲೀಲವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಮಹಿಳಾ ಆಯೋಗದಿಂದ ನೋಟಿಸ್ ಕೂಡ ನೀಡಲಾಗಿತ್ತು. ಪರಿಣಾಮವಾಗಿ ಆ ಹಾಡನ್ನು ಡಿಲೀಟ್ ಮಾಡಲಾಯಿತು.
MUST WATCH : ತಣ್ಣಗಾಗ್ತಿಲ್ಲ ಒಳ ಮೀಸಲಾತಿ ಕಿಚ್ಚು – ಸಚಿವ V SOMANNA ಕಚೇರಿ ಬಳಿ ಆಕ್ರೋಶ..!





