ಚಿನ್ನಸ್ವಾಮಿಯಲ್ಲಿ ಚೆನ್ನೈ ತಂಡವನ್ನು ಚೆಂಡಾಡಿದ ಆರ್ಸಿಬಿ – 43 ರನ್ಗಳಿಂದ ಗೆದ್ದು ಬೀಗಿದ RCB.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ 43 ರನ್ಗಳ ಭರ್ಜರಿ ಜಯ ಸಾಧಿಸಿದೆ.
RCB ಭರ್ಜರಿ ಬ್ಯಾಟಿಂಗ್ ಪ್ರದರ್ಶನ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ RCB ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ 250 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭಿಕರಾದ ಫಿಲ್ ಸಾಲ್ಟ್ (46) ಮತ್ತು ವಿರಾಟ್ ಕೊಹ್ಲಿ (28) ಉತ್ತಮ ಆರಂಭ ಒದಗಿಸಿದರು. ಬಳಿಕ ದೇವದತ್ ಪಡಿಕ್ಕಲ್ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತಂಡದ ಸ್ಕೋರ್ಗೆ ಬಲ ತುಂಬಿದರು.

ಸಿಎಸ್ಕೆ ಪಾಲಿಗೆ ಡೆವಿಲ್ ಆದ ಡೇವಿಡ್!
ಪಂದ್ಯದ ತಿರುವು ಕೊನೆಯ 5 ಓವರ್ಗಳಲ್ಲಿ ಕಂಡುಬಂತು. ನಾಯಕ ರಜತ್ ಪಾಟೀದಾರ್ ಮತ್ತು ಟಿಮ್ ಡೇವಿಡ್ ಜೋಡಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 29 ಎಸೆತಗಳಲ್ಲಿ ಅಜೇಯ 99 ರನ್ ಕಲೆಹಾಕಿತು.
ಪಾಟೀದಾರ್ 48* ರನ್ ಗಳಿಸಿದರೆ, ಡೇವಿಡ್ 70* ರನ್ ಸಿಡಿಸಿ ಸಿಎಸ್ಕೆ ಬೌಲರ್ಗಳನ್ನು ಕಂಗಾಲು ಮಾಡಿದರು. ಈ ಪ್ರದರ್ಶನದ ನೆರವಿನಿಂದ ಆರ್ಸಿಬಿ 250 ರನ್ಗಳ ಗಡಿಯನ್ನು ತಲುಪಿತು.

READ THIS : ಬೆಂಗಳೂರು – ದೆಹಲಿ ಇಂಡಿಗೋ ಫ್ಲೈಟ್ನಲ್ಲಿ ಹುಸಿ ಬಾಂಬ್ ಬೆದರಿಕೆ!
ಧೋನಿ ಹುಡುಗರಿಗೆ ಮತ್ತೊಂದು ಮುಖಭಂಗ
ಇನ್ನು 251 ರನ್ಗಳ ಗುರಿ ಬೆನ್ನಟ್ಟಿದ ಸಿಎಸ್ಕೆ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಸಂಜು ಸ್ಯಾಮ್ಸನ್ (9) ಮತ್ತು ಋತುರಾಜ್ ಗಾಯಕ್ವಾಡ್ (7) ಬೇಗನೆ ಔಟಾದರು.
ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ 50 ರನ್ ಗಳಿಸಿ ಹೋರಾಟ ನಡೆಸಿದರೂ, ಇತರ ಆಟಗಾರರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ.
ಕೊನೆಯಲ್ಲಿ ಪ್ರಶಾಂತ್ ವೀರ್ (43) ಮತ್ತು ಜೇಮಿ ಓವರ್ಟನ್ (37) ಸ್ವಲ್ಪ ಹೋರಾಟ ತೋರಿಸಿದರೂ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಸಿಎಸ್ಕೆ 207 ರನ್ ಗಳಿಸಿ 43 ರನ್ಗಳ ಅಂತರದಲ್ಲಿ ಸೋಲು ಕಂಡಿತು.

RCB ಗೆಲ್ಲುತ್ತಿದ್ದಂತೆ ಅಗ್ರ ಸ್ಥಾನವನ್ನು ಖಾಲಿ ಮಾಡಿದ ಆರ್ಆರ್!
ಈ ಗೆಲುವಿನೊಂದಿಗೆ, ಆರ್ಸಿಬಿ ಈಗ ರಾಜಸ್ಥಾನ, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ನಂತೆ ನಾಲ್ಕು ಅಂಕಗಳನ್ನು ಹೊಂದಿದೆ.
ಆದಾಗ್ಯೂ, ಉತ್ತಮ ರನ್ ರೇಟ್ ಕಾರಣದಿಂದಾಗಿ, ಆರ್ಸಿಬಿ ರಾಜಸ್ಥಾನವನ್ನು ಅಗ್ರ ಸ್ಥಾನದಿಂದ ಕೆಳಗಿಳಿಸಿತು. ಆರ್ಸಿಬಿಯ ರನ್ ರೇಟ್ 2.507 ಆಗಿದ್ದು, ಮತ್ತೆ ಅಗ್ರ ಸ್ಥಾನಕ್ಕೆ ಮರಳಿದೆ.

MUST WATCH : 119ನೇ ಶ್ರೀಗಳ ಜನ್ಮ ದಿನೋತ್ಸವದ ಅಂಗವಾಗಿ 119 ಮಕ್ಕಳಿಗೆ ನಾಮಕರಣ ಶಾಸ್ತ್ರ | TUMAKURU




