ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ INDIGO ವಿಮಾನದಲ್ಲಿ ಹುಸಿ ಬಾಂಬ್ ಬೆದರಿಕೆ ಆತಂಕ ಸೃಷ್ಟಿಸಿತು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣವೊಂದು ಆತಂಕ ಸೃಷ್ಟಿಸಿತು. ದೆಹಲಿಗೆ ತೆರಳಲು ಸಿದ್ಧವಾಗಿದ್ದ INDIGO ವಿಮಾನದ ಶೌಚಾಲಯದಲ್ಲಿ “ಬಾಂಬ್ ಇದೆ” ಎಂದು ಟಿಷ್ಯೂ ಪೇಪರ್ ಮೇಲೆ ಬರೆಯಲ್ಪಟ್ಟ ಸಂದೇಶ ಪತ್ತೆಯಾದ ಹಿನ್ನೆಲೆ ತಕ್ಷಣ ಭದ್ರತಾ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಯಿತು.
ಯಾವುದೇ ಸ್ಟೋಟಕ ವಸ್ತು ಪತ್ತೆಯಾಗಿಲ್ಲ
ವಿಮಾನದಲ್ಲಿದ್ದ 183 ಪ್ರಯಾಣಿಕರನ್ನು ತುರ್ತುವಾಗಿ ಕೆಳಗಿಳಿಸಲಾಗಿದ್ದು, ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲಾಯಿತು. ಭದ್ರತಾ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳ ನಡೆಸಿದ ಪರಿಶೀಲನೆಯಲ್ಲಿ ಯಾವುದೇ ಸ್ಫೋಟಕ ವಸ್ತು ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಲಿಲ್ಲ. ಇದರಿಂದಾಗಿ ಅಧಿಕಾರಿಗಳು ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿಸಿದ್ದಾರೆ.

READ THIS : Tumakuru : ಕಾರು ಬೈಕ್ ನಡುವೆ ಡಿಕ್ಕಿ – ಬೈಕ್ ಸವಾರನಿಗೆ ಗಂಭೀರ ಗಾಯ
ಹುಸಿ ಬಾಂಬ್ ಬೆದರಿಕೆಯಿಂದ ಆತಂಕ
ಪರಿಶೀಲನೆ ಪೂರ್ಣಗೊಂಡ ಬಳಿಕ ವಿಮಾನವನ್ನು ಸುರಕ್ಷಿತವಾಗಿ ದೆಹಲಿಯತ್ತ ಹೊರಡಿಸಲಾಯಿತು. ಈ ಘಟನೆ ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದರೂ, ಭದ್ರತಾ ಕ್ರಮಗಳಿಂದ ಪರಿಸ್ಥಿತಿ ನಿಯಂತ್ರಣದಲ್ಲಿತ್ತು.
ಕಿಡಿಗೇಡಿಗಳನ್ನು ಪತ್ತೆಹಚ್ಚಲು ತನಿಖೆ
ಅಧಿಕಾರಿಗಳು ತಿಳಿಸಿದಂತೆ, ವಿಮಾನದ ಶೌಚಾಲಯದಲ್ಲಿ ಬಾಂಬ್ ಇದೆ ಎಂದು ಟಿಷ್ಯೂ ಪೇಪರ್ನಲ್ಲಿ ಬೆದರಿಕೆಯ ಸಂದೇಶ ಬರೆದಿರುವುದು ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಒಬ್ಬರಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಸಂಬಂಧಪಟ್ಟ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

MUST WATCH : ಶಿರಾದ ಬಳಿ ಬಸ್ಗಳ ನಡುವೆ ಅಪ*ತ ಗಾಯಾಳುಗಳ ಬಗ್ಗೆ DS ಏನಂದ್ರು ?




