Shreyas Iyer ಗೆ 24 ಲಕ್ಷ ರೂ. ದಂಡ.! ಪಂಜಾಬ್ ಕ್ಯಾಪ್ಟನ್ಗೆ ಕಾಡ್ತಿದೆ ಬ್ಯಾನ್ ಭೀತಿ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಆದ್ರೆ ಗುಜರಾತ್ ಟೈಟಾನ್ಸ್ ವಿರುದ್ಧ ಮಾಡಿದ ತಪ್ಪನ್ನೇ ಮತ್ತೆ ಮಾಡಿದ ಕಾರಣ ತಂಡದ ನಾಯಕ Shreyas Iyer ಗೆ 24 ಲಕ್ಷ ರೂ ದಂಡ ವಿಧಿಸಲಾಗಿದೆ.
ಮತ್ತೆ ತಪ್ಪು ಮರುಕಳಿಸಿದ್ರೆ ಒಂದು ಪಂದ್ಯದಿಂದ ಬ್ಯಾನ್
ಇನ್ಮುಂದೆ ಮತ್ತೇ ಈ ತಪ್ಪು ಮರುಕಳಿಸಿದ್ರೆ, 36 ಲಕ್ಷ ರೂ, ದಂಡದೊಂದಿಗೆ, ಒಂದು ಪಂದ್ಯದಿಂದ ಬ್ಯಾನ್ ಅಗಲಿದ್ದಾರೆ. ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ನೀತಿ ಸಂಹಿತೆ ಉಲ್ಲಂಘನೆ ಆಧಾರದ ಮೇಲೆ ಅಯ್ಯರ್ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ.
READ THSI : ಭಾರತೀಯ ರೈಲ್ವೆಯಲ್ಲಿ ಉದ್ಯೋಗಾವಕಾಶ – 6,565 ಹುದ್ದೆಗೆ ಅರ್ಜಿ ಆಹ್ವಾನ

IPL ಮಂಡಳಿ ಹೇಳಿದ್ದೇನು?
ಮತ್ತೊಂದು ಪಂದ್ಯದಲ್ಲಿ ಈ ರೀತಿ ಮಾಡಿದ್ರೆ, ಅದರ ಮುಂದಿನ ಒಂದು ಪಂದ್ಯದಿಂದ ಅಯ್ಯರ್ ಬ್ಯಾನ್ ಆಗಲಿದ್ದಾರೆ. ಇನ್ನೂ ಇಂಪ್ಯಾಕ್ಟ್ ಪ್ಲೇಯರ್ ಸೇರಿ ಪ್ಲೇಯಿಂಗ್-11 ಇತರ ಸದಸ್ಯರಿಗೆ ತಲಾ 6 ಲಕ್ಷ ರೂ. ದಂಡ ಅಥವಾ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ. ಇದರಲ್ಲಿ ಯಾವುದು ಅನುಕೂಲವೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಐಪಿಎಲ್ ಮಂಡಳಿ ತಿಳಿಸಿದೆ.

MUST WATCH : ಲೆಕ್ಚರರ್ ಜೊತೆ ಅಫೇರ್ ಇದೆ ಎಂದು ಅಪಪ್ರಚಾರ – ಡೆತ್ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಸೂಸೈ*




