Indian Railways Jobs 2026 : ಭಾರತೀಯ ರೈಲ್ವೆಯಲ್ಲಿ ಬೃಹತ್ ಉದ್ಯೋಗಾವಕಾಶ.

Indian Railways Jobs 2026 : ಭಾರತೀಯ ರೈಲ್ವೆ 2026 ರಲ್ಲಿ ನಿರುದ್ಯೋಗಿ ಯುವಕರಿಗೆ ಬೃಹತ್ ಉದ್ಯೋಗಾವಕಾಶವನ್ನು ನೀಡಲು ಸಜ್ಜಾಗಿದೆ. ರೈಲ್ವೆ ಸಚಿವಾಲಯವು ಒಟ್ಟು 6,565 ತಂತ್ರಜ್ಞ(Technician) ಹುದ್ದೆಗಳ ಭರ್ತಿಗೆ ಅಧಿಕೃತ ಅನುಮೋದನೆ ನೀಡಿದ್ದು, ಈ ನೇಮಕಾತಿ ಪ್ರಕ್ರಿಯೆಯನ್ನು ರೈಲ್ವೆ ನೇಮಕಾತಿ ಮಂಡಳಿ (RRB) ಶೀಘ್ರದಲ್ಲೇ ಆರಂಭಿಸಲಿದ್ದು, ಮುಂದಿನ ಒಂದು ವಾರದೊಳಗೆ ಅಂತಿಮ ಅಧಿಸೂಚನೆ ಹೊರಬೀಳುವ ನಿರೀಕ್ಷೆಯಿದೆ.
39 ವಿಭಾಗಗಳಲ್ಲಿ ನೇಮಕಾತಿ
ಈ ಹುದ್ದೆಗಳ ನಿಯೋಜನೆ 39 ವಿಭಿನ್ನ ವಿಭಾಗಗಳಲ್ಲಿ ನಡೆಯಲಿದೆ. ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ತಾಂತ್ರಿಕ ಕೊರತೆಯನ್ನು ನಿವಾರಣೆಗೊಳಿಸಲು ವಿಶೇಷವಾಗಿ ಮೆಕ್ಯಾನಿಕಲ್ ಮತ್ತು ಎಂಜಿನಿಯರಿಂಗ್ ವಿಭಾಗಗಳಲ್ಲಿ ಹೆಚ್ಚಿನ ತಂತ್ರಜ್ಞರ ಅಗತ್ಯವಿದೆ. ಎಲ್ಲಾ ಹುದ್ದೆಗಳು ಅರ್ಹತೆ ಮತ್ತು ವೈದ್ಯಕೀಯ ಮಾನದಂಡಗಳ ಆಧಾರದ ಮೇಲೆ ವಲಯವಾರು ನಿಯೋಜಿಸಲಾಗುತ್ತದೆ.
READ THIS : ತುಮಕೂರಿನಲ್ಲಿ ಮಹಿಳಾ PSI ಮಿಸ್ಸಿಂಗ್.!

ಪ್ರಮುಖ ವಲಯಗಳ ಹುದ್ದೆಗಳ ಹಂಚಿಕೆ
- ಕೇಂದ್ರ ರೈಲ್ವೆ: 870 ಹುದ್ದೆಗಳು
- ದಕ್ಷಿಣ ರೈಲ್ವೆ: 785 ಹುದ್ದೆಗಳು
- ಈಶಾನ್ಯ ಗಡಿನಾಡು ರೈಲ್ವೆ: 701 ಹುದ್ದೆಗಳು
- ಆಗ್ನೇಯ ರೈಲ್ವೆ: 576 ಹುದ್ದೆಗಳು
- ಪಶ್ಚಿಮ ರೈಲ್ವೆ: 544 ಹುದ್ದೆಗಳು
ಕರ್ನಾಟಕ ವಲಯ : ನೈಋತ್ಯ ರೈಲ್ವೆ (SWR) ವ್ಯಾಪ್ತಿಯಲ್ಲಿ 240 ತಂತ್ರಜ್ಞ ಹುದ್ದೆಗಳು ಲಭ್ಯ.
ಉತ್ಪಾದನಾ ಘಟಕಗಳು : ಇಂಟಿಗ್ರಲ್ ಕೋಚ್ ಫ್ಯಾಕ್ಟರಿ – 236, ಉತ್ತರ ಮಧ್ಯ ರೈಲ್ವೆ – 268 ಹುದ್ದೆಗಳು.
ಲೋಕೋ ಪೈಲಟ್ ಹುದ್ದೆಗಳು
ತಂತ್ರಜ್ಞ ಹುದ್ದೆಗಳ ಜೊತೆಗೆ, ರೈಲ್ವೆ ಇಲಾಖೆಯು 11,127 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳ ನೇಮಕಾತಿಗೂ ಆದ್ಯತೆ ನೀಡಿದೆ. ಅಭ್ಯರ್ಥಿಗಳು ಮೇ 15, 2026 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಯುವಕರಿಗೆ ಹೊಸ ಅವಕಾಶ
ಈ ಬೃಹತ್ ನೇಮಕಾತಿ ಕೇವಲ ಉದ್ಯೋಗ ಸೃಷ್ಟಿ ಮಾತ್ರವಲ್ಲ, ರೈಲ್ವೆ ಕಾರ್ಯಾಚರಣೆಯನ್ನು ಸುಗಮಗೊಳಿಸಲು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಸಹ ನೆರವಾಗಲಿದೆ.

MUST WATCH : ತವರಲ್ಲೇ ಹೀನಾಯ ಸೋಲು ಕಂಡ CSK – ಚೆನ್ನೈ ತಂಡವನ್ನ ಬಗ್ಗು ಬಡಿದ ಪಂಜಾಬ್.!




