Tumakuru : ಮಹಿಳಾ ಪಿಎಸ್ಐ ಮಿಸ್ಸಿಂಗ್.! – ಮೀಟಿಂಗ್ನಿಂದ ಹೊರಬಂದ ಬಳಿಕ ನಾಪತ್ತೆ.

Tumakuru ನಗರದ ಪೊಲೀಸರಲ್ಲೇ ಸಂಚಲನ ಮೂಡಿಸಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಹಿಳಾ PSI ಒಬ್ಬರು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದಾರೆ. ಈ ಕುರಿತು ಅವರ ಪುತ್ರಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದಾರೆ.
ಮಹಿಳಾ PSI ನಾಪತ್ತೆ!
ತುಮಕೂರಿನ ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ-2 ಆಗಿ ಕೆಲಸ ಮಾಡುತ್ತಿದ್ದ ಮಂಗಳಮ್ಮ ಅವರು, ನಿನ್ನೆ ಬೆಳಗ್ಗೆ ಮೀಟಿಂಗ್ನಲ್ಲಿ ಭಾಗವಹಿಸಿದ್ದರು. ಬಳಿಕ ಮೀಟಿಂಗ್ ನಡೆಯುತ್ತಿರುವಾಗಲೇ ಮನೆಯಿಂದ ಫೋನ್ ಬಂದಿದೆ ಎಂದು ಹೇಳಿ ತುರ್ತಾಗಿ ಹೊರಬಂದಿದ್ದಾರೆ.
ನಂತರ ಹೊಸಬಡಾವಣೆ ಪೊಲೀಸ್ ಠಾಣೆಗೆ ಬಂದ ಮಂಗಳಮ್ಮ, ಠಾಣೆಯಲ್ಲೇ ಪೊಲೀಸ್ ಸಮವಸ್ತ್ರ ಬದಲಿಸಿ ಸಿವಿಲ್ ಡ್ರೆಸ್ ಧರಿಸಿ ಹೊರಗೆ ತೆರಳಿದ್ದಾರೆ. ಆ ಬಳಿಕ ಇಡೀ ದಿನ ಅವರು ಯಾರಿಗೂ ಸಂಪರ್ಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದಾರೆ.
READ THIS : ವರದಕ್ಷಿಣೆಗಾಗಿ ಪೆಟ್ರೋಲ್ ಸುರಿದು ಗರ್ಭಿಣಿ ಸೊಸೆಯನ್ನೇ ಕೊಂದ ಅತ್ತೆ- ಮಾವ
ಮಂಗಳಮ್ಮ ಅವರ ಪತ್ತೆಗಾಗಿ ಹುಡುಕಾಟ – Tumakuru
ಇನ್ನು ಮಂಗಳಮ್ಮ ಅವರು ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ರೂ ಪತ್ತೆಯಾಗದ ಕಾರಣ, ಅವರ ಮಗಳು ಹೊಸಬಡಾವಣೆ ಪೊಲೀಸ್ ಠಾಣೆಗೆ ತೆರಳಿ ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ್ದಾರೆ. ಇನ್ನು ಮಂಗಳಮ್ಮ ಅವರು ತಮ್ಮ ಮಗಳೊಂದಿಗೆ ವಾಸವಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆ ಮನನೊಂದು ಮನೆ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗ್ತಿದೆ.
ಇನ್ನು ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪಿಎಸ್ಐ ಮಂಗಳಮ್ಮ ಅವರ ಪತ್ತೆಗಾಗಿ ಹುಡುಕಾಟವನ್ನು ಮುಂದುವರಿಸಿದ್ದಾರೆ.
ಒಟ್ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಈ ರೀತಿ ಕಾಣೆಯಾಗಿರುವುದು ಪೊಲೀಸ್ ಇಲಾಖೆಯನ್ನೇ ಸಂಚಲನ ಮೂಡಿಸಿದೆ.
MUST WATCH : ಕರಗ ಉತ್ಸವದಲ್ಲಿ ಇದೆಂಥಾ ಅಶ್ಲೀಲ ನೃತ್ಯ – ಅರೆಬರೆ ನೃತ್ಯಕ್ಕೆ ಸಾರ್ವಜನಿಕರಲ್ಲಿ ಆಕ್ರೋಶ..!




