2026ರ IPL ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಅಭಿಯಾನ ಆರಂಭಿಸುವ ಮುನ್ನವೇ ಫ್ಯಾನ್ಸ್ಗೆ ಶಾಕ್ ಕೊಟ್ಟಿದೆ.

2026ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಆಟ ಆರಂಭಿಸುವ ಮುನ್ನವೇ ಧೋನಿ ಫ್ಯಾನ್ಸ್ಗೆ ಬಿಗ್ ಶಾಕ್ ನೀಡಿದೆ.
ಲೆಜೆಂಡ್ ಕ್ರಿಕೆಟಿಗ, ಚೆನ್ನೈ ತಂಡದ ಉಸಿರು ಕೂಲ್ ಕ್ಯಾಪ್ಟನ್ ಎಂ.ಎಸ್. ಧೋನಿ ಅವರು ಐಪಿಎಲ್ನ ಮೊದಲ 6 ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ಖುದ್ದು ಚೆನ್ನೈ ಸೂಪರ್ ಕಿಂಗ್ಸ್ನಿಂದ ಮಾಹಿತಿ ಹೊರಬಿದ್ದಿದೆ.

ಮೊದಲ 6 ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ
ಹೌದು, 19ನೇ ಆವೃತ್ತಿಯ ಐಪಿಎಲ್ಗಾಗಿ ಸತತ 1 ತಿಂಗಳು ತಯಾರಿ ಮಾಡಿಕೊಂಡಿದ್ದ ಎಂ.ಎಸ್. ಧೋನಿ, ಅಭ್ಯಾಸದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.
ಹೀಗಾಗಿ ಮಹಿ IPLನ ಮೊದಲ 6 ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇದೆ. ಈಗಾಗಲೇ ಎಲ್ಲಾ ಮಾದರಿ ಕ್ರಿಕೆಟ್ನಿಂದಲೂ ನಿವೃತ್ತರಾಗಿರುವ ಎಂ.ಎಸ್. ಧೋನಿ ಐಪಿಎಲ್ನಲ್ಲಿ ಮಾತ್ರ ಆಡುತ್ತಿದ್ದಾರೆ.
ಇನ್ನು 44 ವರ್ಷದ ಧೋನಿಗೆ ಇದು ಕೊನೆಯ ಐಪಿಎಲ್ ಆಗಬಹುದು ಎಂದು ಹೇಳಲಾಗುತ್ತಿದ್ದು, ಇದೇ ಆವೃತ್ತಿಯಲ್ಲಿ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

RAED THSI : ತುಮಕೂರು- ಕುಣಿಗಲ್ ರಸ್ತೆಯಲ್ಲಿ ಭೀಕರ Accident – ಬೈಕ್ ಸವಾರರು ಸಾವು
ಸಂಜು ಸ್ಯಾಮ್ಸನ್ ಮೇಲೆ ಬೆಟ್ಟದಷ್ಟು ನಿರೀಕ್ಷೆ!
ಸದ್ಯ ಋತುರಾಜ್ CSK ತಂಡವನ್ನ ಮುನ್ನಡೆಸುತ್ತಿದ್ದು, ರಾಜಸ್ಥಾನ್ ರಾಯಲ್ಸ್ ತಂಡದಿಂದ ವಿನಿಮಯ ಮಾಡಿಕೊಳ್ಳಲಾದ ಸಂಜು ಸ್ಯಾಮನ್ಸ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದೆ.
ಎಂ.ಎಸ್. ಬದಲಿಗೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸಂಜು ಕಣಕ್ಕಿಳಿಯಲಿದ್ದಾರೆ. ಇನ್ನು ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಧೋನಿ ಅವರು ಸಿಎಸ್ಕೆ ತಂಡವನ್ನ ಸೇರಿಕೊಳ್ಳುವ ನಿರೀಕ್ಷೆಯಿದೆ ಎಂದು ಪ್ರಾಂಚೈಸಿ ತಿಳಿಸಿದೆ.

ಚೆನ್ನೈ ತಂಡದ ಭವಿಷ್ಯ ಹೇಗಿರಲಿದೆ?
ಇನ್ನು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದರೂ, ಧೋನಿ ಎಲ್ಲಾ ಪಂದ್ಯಗಳನ್ನು ಆಡುವುದು ಅನುಮಾನವಾಗಿದೆ. ಇನ್ನು ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಒಟ್ನಲ್ಲಿ ಧೋನಿ ನಂತರದ ಚೆನ್ನೈ ತಂಡದ ಭವಿಷ್ಯ ಹೇಗಿರಲಿದೆ ಎಂಬುದಕ್ಕೆ ಮುಂಬರುವ ವಾರಗಳ ಪಂದ್ಯಗಳು ಸುಳಿವು ನೀಡಲಿವೆ.
MUST WATCH : ಅಧ್ಯಕ್ಷ ಟ್ರಂಪ್ ವಿರುದ್ಧ ತಿರುಗಿ ಬಿದ್ದ ಜನರು ಅಮೆರಿಕಾದಲ್ಲಿ ಆಕ್ರೋಶದ ಕಿಚ್ಚು ಹೇಗಿತ್ತು





