Tumakuru : ಬರ್ತಡೇ ಪಾರ್ಟಿ ಮುಗಿಸಿಕೊಂಡು ವಾಪಸ್ ಆಗುವಾಗ ದುರಂತ – ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬೈಕ್ – ಸವಾರರು ಸ್ಥಳದಲ್ಲೇ ಸಾವು.

ತುಮಕೂರು- ಕುಣಿಗಲ್ ಮಾರ್ಗದ ರಸ್ತೆ ಆಕ್ಸಿಡೆಂಟ್ ಜೋನ್ ಆಗ್ತಾ ಇದ್ಯಾ ಎಂಬ ಅನುಮಾನ ಶುರುವಾಗಿದೆ. Tumakuru ಹಾಗೂ ಕುಣಿಗಲ್ ಮುಖ್ಯ ರಸ್ತೆಯಾದ ಬಾಣವಾರ ಹಾಗೂ ರೈಸ್ ಮಿಲ್ ಬಳಿ ಸಾಲು ಸಾಲು ಅಪಘಾತಗಳು ಆಗ್ತಾ ಇದ್ದು, ಅಮಾಯಕ ಜನರು ಬಲಿಯಾಗುತ್ತಿದ್ದಾರೆ.
ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ದಾರುಣ ಸಾವು
ಕಳೆದ ಫೆಬ್ರವರಿಯಲ್ಲಿ ಇದೇ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದು, ಹಲವು ಮಂದಿಗೆ ಗಾಯಗಳಾಗಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಣಿಗಲ್ ರಸ್ತೆಯ ಬಾಣವಾರ ಬಳಿಯ ರೈಸ್ ಮಿಲ್ ಬಳಿ ಬೈಕ್ ನಿಯಂತ್ರಣ ಕಳೆದುಕೊಂಡು ಅಪಘಾತವಾಗಿದ್ದರ ಪರಿಣಾಮ, ಬೈಕ್ ಸವಾರರು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹೆಬ್ಬೂರು ಹೋಬಳಿಯ ರಂಗನಾಥಪುರ ಗ್ರಾಮದ ಪ್ರಸಾದ್ ಹಾಗೂ ವಸಂತ್ ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಯುವಕರಾಗಿದ್ದಾರೆ. ನಿನ್ನೆ ಸ್ನೇಹಿತನ ಬರ್ತಡೇಗೆಂದು ರಂಗನಾಥ ಪುರ ಗ್ರಾಮದ 20 ವರ್ಷದ ಪ್ರಸಾದ್ ಹಾಗೂ 22 ವರ್ಷದ ವಸಂತ್ ಎಂಬುವವರು ತುಮಕೂರಿಗೆ ಬಂದಿದ್ರು.

RAED THSI : ಸ್ವರ್ಣ ಪ್ರಿಯರಿಗೆ ಗುಡ್ ನ್ಯೂಸ್ – Gold Rate ನಲ್ಲಿ ಇಂದು ಇಳಿಕೆ
ಬರ್ತಡೇ ಪಾರ್ಟಿ ಮುಗಿಸಿಕೊಂಡು ವಾಪಸ್ ಆಗುವಾಗ ದುರಂತ
ಬರ್ತಡೇ ಪಾರ್ಟಿ ಮುಗಿಸಿಕೊಂಡು ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ವಾಪಸ್ ಆಗುವ ವೇಳೆ ಬಾಣವಾರ ಬಳಿಯ ರೈಸ್ ಮಿಲ್ ಬಳಿ ಗಾಡಿಯೊಂದನ್ನು ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಬೈಕ್ ಅಪಘಾತಕ್ಕೀಡಾಗಿದ್ದು, ಬೈಕ್ ಸವಾರರ ತಲೆಗೆ ತೀವ್ರ ಪೆಟ್ಟು ಆಗಿ ರಕ್ತಸ್ರಾವ ಉಂಟಾಗಿದ ಪರಿಣಾಮ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು Accident ನಲ್ಲಿ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯ್ತು. ಇತ್ತ ಕುಟುಂಬಕ್ಕೆ ಆಧಾರವಾಗಿದ್ದ ಗಂಡು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ, ಡಿವೈಎಸ್ ಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ರಮಕ್ಕೆ ಮುಂದಾಗಿದ್ದಾರೆ.

MUST WATCH : ಶ್ರೀ ರಾಮನವಮಿ ಪ್ರಸಾದ ಸೇವಿಸಿ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥ..!




