ಒಣಗಿದ ದಾಸವಾಳ ಹೂ ನುಂಗಿ ಮಗು ಸಾವನ್ನಪ್ಪಿರುವ ದಾರುಣ ಘನಟೆ Mysore ನಲ್ಲಿ ನಡೆದಿದೆ.

Mysore ಜಿಲ್ಲೆಯ ಹುಣಸೂರು ತಾಲ್ಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಪೂಜೆಗೆ ಇರಿಸಿದ್ದ ದಾಸವಾಳದ ಹೂವನ್ನು ಆರೂವರೆ ತಿಂಗಳ ಮಗು ನುಂಗಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದೆ.

ದಾಸವಾಳ ಹೂ ನುಂಗಿ ಕಂದಮ್ಮ ಸಾವು
ದಡ್ಡ ಹೆಜ್ಜೂರು ಗ್ರಾಮದ ಸುದರ್ಶನ್-ನವ್ಯ ದಂಪತಿಯ ಎರಡನೇ ಪುತ್ರ ಆರೂವರೆ ತಿಂಗಳ ಚಿನ್ಮಯಿ ಗೌಡ ಸಾವನ್ನಪ್ಪಿದ ಮಗು. ಚಿನ್ಮಯಿ ತನ್ನ ಅಣ್ಣನೊಂದಿಗೆ ಆಟವಾಡುತ್ತಿದ್ದ ವೇಳೆ ಮನೆಯ ಹೊಸಲಿನಲ್ಲಿ ಪೂಜೆಗೆ ಇಟ್ಟಿದ್ದ ದಾಸವಾಳ ಹೂವಿನ ತುಂಡನ್ನು ಬಾಯಿಗೆ ಹಾಕಿಕೋಮಡಿದೆ. ಈ ವೇಳೆ ಅಣ್ಣ ಕಿತ್ತುಕೊಳ್ಳುತ್ತಾನೆಂದು ಮಗು ಒಣಗಿದ ಹೂವನ್ನು ನುಂಗಿದ್ದರಿಂದ ಉಸಿರಾಟದ ತೊಂದರೆಯಾಗಿ ಅಸ್ವಸ್ಥಗೊಂಡಿದೆ.
RAED THIS : ಬಹುಭಾಷಾ ನಟ Prakash Raj ಅವರ ತಾಯಿ ಸ್ವರ್ಣಲತಾ ವಿಧಿವಶ

ಚಿಕಿತ್ಸೆ ಫಲಿಸದೇ ಮಗು ದಾರುಣ ಸಾವು – Mysore
ತಕ್ಷಣವೇ ಹನಗೋಡಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ.
MUST WATCH : ದಳಪತಿಯಿಂದ ರೈತ ಬಂಧುಗಳಿಗೆ ಸತ್ಕಾರ – HDK ದಂಪತಿಯ ಪ್ರೀತಿಗೆ ಭಾವುಕ..!




