ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ (86) ಅವರು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು.
ಪ್ರಕಾಶ್ ರಾಜ್ ಅವರ ಅಮ್ಮ ಸ್ವರ್ಣಲತಾ ವಿಧಿವಶ
ಸ್ವರ್ಣಲತಾ ಅವರು ತಮ್ಮ ಮಗನ ಜೀವನದಲ್ಲಿ ಮಹತ್ವದ ಪಾತ್ರವಹಿಸಿದ್ದರು. ಹಲವು ಸಂದರ್ಭಗಳಲ್ಲಿ ಪ್ರಕಾಶ್ ರಾಜ್ ಅವರ ತಾಯಿಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದು, ಅವರ ಬೆಂಬಲ, ಪ್ರೀತಿ ಮತ್ತು ಮಾರ್ಗದರ್ಶನವೇ ತಮ್ಮ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದೆ ಎಂದು ಕೃತಜ್ಞತೆಯಿಂದ ಸ್ಮರಿಸುತ್ತಿದ್ದರು.

READ THIS : ಕುವೈತ್ ವಿದ್ಯುತ್ ಸ್ಥಾವರದ ಮೇಲೆ ಇರಾನ್ ಕ್ಷಿಪಣಿ ದಾಳಿ – ಓರ್ವ ಭಾರತೀಯ ಸಾವು
ಬೆಂಗಳೂರಿನಲ್ಲಿ ಅಂತ್ಯಕ್ರಿಯೆ
ಇಂದು ಸಂಜೆ ಬೆಂಗಳೂರಿನಲ್ಲಿ ಸ್ವರ್ಣಲತಾ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಕುಟುಂಬಸ್ಥರು, ಸ್ನೇಹಿತರು ಮತ್ತು ಆತ್ಮೀಯರು ಭಾಗಿಯಾಗಲಿದ್ದಾರೆ. ಚಿತ್ರರಂಗದ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಸ್ವರ್ಣಲತಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಸ್ವರ್ಣಲತಾ ಅಗಲಿಕೆ Prakash Raj ಕುಟುಂಬಕ್ಕಷ್ಟೇ ಸೀಮಿತವಾಗಿಲ್ಲ
ಸ್ವರ್ಣಲತಾ ಅಗಲಿಕೆ ಪ್ರಕಾಶ್ ರಾಜ್ ಕುಟುಂಬಕ್ಕಷ್ಟೇ ಸೀಮಿತವಾಗಿಲ್ಲ. ಅವರನ್ನು ಅರಿತ ಪ್ರತಿಯೊಬ್ಬರ ಮನದಲ್ಲೂ ತುಂಬಾ ದುಃಖವನ್ನು ಮೂಡಿಸಿದೆ.

MUST WATCH : ಏ.1 ರಂದು ನಡೆದಾಡುವ ದೇವರ ಜನ್ಮೋತ್ಸವ ಸಿದ್ದಗಂಗಾ ಮಠದಲ್ಲಿ ಹೇಗಿದೆ ಗೊತ್ತಾ ಸಿದ್ಧತೆ




