ಕುವೈತ್ ಮೇಲೆ Eran ದಾಳಿ – ವಿದ್ಯುತ್ ಸ್ಥಾವರದಲ್ಲಿದ್ದ ಭಾರತೀಯ ಕಾರ್ಮಿಕ ಸಾವು.

ಕುವೈತ್ನ ವಿದ್ಯುತ್ ಉತ್ಪಾದನಾ ಸ್ಥಾವರ ಹಾಗೂ ನಿರ್ಲವಣೀಕರಣ ಘಟಕದ ಮೇಲೆ Eran ನಡೆಸಿದ ದಾಳಿಯಲ್ಲಿ ಭಾರತೀಯ ಕಾರ್ಮಿಕನೊಬ್ಬರು ಮೃತಪಟ್ಟಿದ್ಧಾರೆ. ಭಾನುವಾರ ಸಂಜೆ ಸಂಭವಿಸಿದ ಈ ದಾಳಿಯಿಂದ ಘಟಕದ ಕಟ್ಟಡದ ಒಂದು ಭಾಗಕ್ಕೆ ಭಾರೀ ಹಾನಿಯಾಗಿದೆ.
ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯ
ಕುವೈತ್ನ ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಪ್ರಕಾರ, ಇತ್ತೀಚಿನ ದಿನಗಳಲ್ಲಿ ದೇಶದ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿಗಳಲ್ಲೊಂದು ಇದಾಗಿದೆ. ಇನ್ನು ದಾಳಿಯ ಪರಿಣಾಮವಾಗಿ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಯ ಕುರಿತು ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಭಾರತದ ವಿದೇಶಾಂಗ ಸಚಿವಾಲಯ (MEA) ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.
READ THIS : DGP ಅಲೋಕ್ ಕುಮಾರ್ ಹೆಸರು ಕೆಡಿಸಲು ಕಿಡಿಗೇಡಿಗಳ ಕೃತ್ಯ..!

ದೇಶಗಳ ಜನರಿಗೆ “ಧನ್ಯವಾದಗಳು”
ಇದಕ್ಕೂ ಮುನ್ನ, ಇರಾನ್ ಇಸ್ರೇಲ್ ಸೇರಿದಂತೆ ಇತರ ದೇಶಗಳತ್ತ ಕ್ಷಿಪಣಿಗಳನ್ನು ಉಡಾಯಿಸಿದ್ದ ಸಂದರ್ಭದಲ್ಲಿ, ಅವುಗಳ ಮೇಲೆ ಭಾರತ, ಜರ್ಮನಿ, ಪಾಕಿಸ್ತಾನ ಮತ್ತು ಸ್ಪೇನ್ ದೇಶಗಳ ಜನರಿಗೆ “ಧನ್ಯವಾದಗಳು” ಎಂದು ಕೈಬರಹದ ಸಂದೇಶಗಳನ್ನು ಅಂಟಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಮುಂಬೈಯಲ್ಲಿರುವ ಇರಾನ್ ಕಾನ್ಸುಲೇಟ್ ಕಚೇರಿಯೂ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂಬಂಧಿತ ಚಿತ್ರಗಳನ್ನು ಹಂಚಿಕೊಂಡಿತ್ತು.
MUST WATCH : ಏಪ್ರಿಲ್ ನಂತರ ತುಮಕೂರಿಗೆ ನೀರಿನ ಕಂಟಕ!? ಜನರು ಪರದಾಡಬೇಕಾಗುತ್ತಾ?




