ಆರ್ಬಿಐ ಕ್ಯಾಲೆಂಡರ್ ಪ್ರಕಾರ July ತಿಂಗಳಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ 13 ದಿನಗಳವರೆಗೆ ಇದೆ.

July ತಿಂಗಳಲ್ಲಿ ಬ್ಯಾಂಕ್ಗೆ ಹೋಗುವ ಯೋಜನೆ ಇದೆಯಾ? ಹಾಗಾದರೆ ಈ ಸುದ್ದಿ ತಪ್ಪದೇ ನೋಡಿ. ಆರ್ಬಿಐ ಬಿಡುಗಡೆ ಮಾಡಿರುವ ರಜಾ ಕ್ಯಾಲೆಂಡರ್ ಪ್ರಕಾರ ಜುಲೈ ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 13 ದಿನಗಳವರೆಗೆ ರಜೆ ಇರಲಿದೆ.
ಆದರೆ ಕರ್ನಾಟಕದಲ್ಲಿ ವಿಶೇಷ ರಜೆಗಳಿಲ್ಲದೆ ಕೇವಲ ನಿಯಮಿತ ಶನಿವಾರ ಮತ್ತು ಭಾನುವಾರದ ರಜೆಗಳು ಮಾತ್ರ ಇರಲಿವೆ.
ಒಟ್ಟು 13 ದಿನಗಳವರೆಗೆ ರಜಾದಿನಗಳು
ಆರ್ಬಿಐ ಕ್ಯಾಲೆಂಡರ್ ಪ್ರಕಾರ ಜುಲೈ ತಿಂಗಳಲ್ಲಿ ದೇಶಾದ್ಯಂತ ಒಟ್ಟು 13 ದಿನಗಳವರೆಗೆ ಬ್ಯಾಂಕುಗಳು ಬಂದ್ ಆಗಲಿವೆ. ಆದರೆ ಈ ಎಲ್ಲಾ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸುವುದಿಲ್ಲ. ಮಿಜೋರಾಂ, ಮೇಘಾಲಯ, ಸಿಕ್ಕಿಂ, ತ್ರಿಪುರಾ, ಒಡಿಶಾ, ಮಣಿಪುರ, ಉತ್ತರಾಖಂಡ್ ಹಾಗೂ ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಹಬ್ಬ ಹಾಗೂ ವಿಶೇಷ ದಿನಗಳ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ಘೋಷಿಸಲಾಗಿದೆ.

ಕರ್ನಾಟಕದ ಬ್ಯಾಂಕ್ ರಜೆಗಳು
ಕರ್ನಾಟಕದ ಬ್ಯಾಂಕ್ ಗ್ರಾಹಕರಿಗೆ ಮಾತ್ರ ಹೆಚ್ಚಿನ ಆತಂಕದ ಅಗತ್ಯವಿಲ್ಲ. ಜುಲೈ ತಿಂಗಳಲ್ಲಿ ರಾಜ್ಯದಲ್ಲಿ ಯಾವುದೇ ವಿಶೇಷ ಬ್ಯಾಂಕ್ ರಜೆ ಇಲ್ಲ.
ಕೇವಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ಸೇರಿದಂತೆ ಒಟ್ಟು ಆರು ದಿನಗಳು ಮಾತ್ರ ಬ್ಯಾಂಕುಗಳು ಬಂದ್ ಆಗಲಿವೆ.
ಇದನ್ನು ಓದಿ : ಜೂನ್ನಲ್ಲಿ ಬ್ಯಾಂಕುಗಳಿಗೆ 12 ದಿನಗಳವರೆಗೆ ರಜೆ

ದೇಶದ ಇತರ ರಾಜ್ಯಗಳ ಬ್ಯಾಂಕ್ ರಜೆಗಳು
ದೇಶದ ಇತರ ರಾಜ್ಯಗಳಲ್ಲಿ ಜುಲೈ 6ರಂದು ಮಿಜೋರಾಂನಲ್ಲಿ ಎಂಎಚ್ಐಪಿ ದಿನ, ಜುಲೈ 9ರಂದು ಮೇಘಾಲಯದಲ್ಲಿ ಬೆಹ್ ಡೇನ್ಖ್ಲಮ್, ಜುಲೈ 13ರಂದು ಸಿಕ್ಕಿಂ ಹಾಗೂ ಜಮ್ಮು-ಕಾಶ್ಮೀರದಲ್ಲಿ ಭಾನು ಜಯಂತಿ ಮತ್ತು ಬಲಿದಾನ ದಿನ, ಜುಲೈ 16ರಂದು ಒಡಿಶಾದಲ್ಲಿ ರಥಯಾತ್ರೆ, ಮಣಿಪುರದಲ್ಲಿ ಕಾಂಗ್ ಹಾಗೂ ಉತ್ತರಾಖಂಡ್ನಲ್ಲಿ ಹರೇಲಾ ಹಬ್ಬದ ಪ್ರಯುಕ್ತ ಬ್ಯಾಂಕುಗಳು ಬಂದ್ ಆಗಲಿವೆ. ಜುಲೈ 17ರಂದು ಮೇಘಾಲಯದಲ್ಲಿ ಯು ತಿರೋತ್ ಸಿಂಗ್ ಪುಣ್ಯತಿಥಿ, ಜುಲೈ 18ರಂದು ಸಿಕ್ಕಿಂನಲ್ಲಿ ದ್ರುಪಕಾ ಶೆ ಜಿ ಹಾಗೂ ಜುಲೈ 22ರಂದು ತ್ರಿಪುರಾದಲ್ಲಿ ಖರ್ಚಿ ಪೂಜೆಯ ಹಿನ್ನೆಲೆಯಲ್ಲಿ ರಜೆ ಇರಲಿದೆ.

ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಆನ್ಲೈನ್ನಲ್ಲೇ ಲಭ್ಯ
ಬ್ಯಾಂಕುಗಳಿಗೆ ರಜೆ ಇದ್ದರೂ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ. ಯುಪಿಐ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಬಹುತೇಕ ಸೇವೆಗಳು ಎಂದಿನಂತೆ ಲಭ್ಯವಿರಲಿವೆ.
ಎಟಿಎಂ ಸೇವೆಯೂ 24 ಗಂಟೆ ಕಾರ್ಯನಿರ್ವಹಿಸಲಿದ್ದು, ತುರ್ತು ಹಣಕಾಸಿನ ವ್ಯವಹಾರಗಳಿಗೆ ಯಾವುದೇ ತೊಂದರೆ ಇರುವುದಿಲ್ಲ. ಆದರೂ ಬ್ಯಾಂಕ್ ಶಾಖೆಗೆ ಭೇಟಿ ನೀಡುವವರು ಮುಂಚಿತವಾಗಿ ರಜೆ ಪಟ್ಟಿಯನ್ನು ಪರಿಶೀಲಿಸಿ ತಮ್ಮ ಕೆಲಸಗಳನ್ನು ಯೋಜಿಸಿಕೊಳ್ಳುವುದು ಉತ್ತಮ.
ಇದನ್ನು ನೋಡಿ : ಮದುವೆ ಆಗಲ್ಲ ಎಂದಿದ್ದಕ್ಕೆ ಪ್ರೇಯಸಿ ಮರ್ಡರ*.-ಊಟಕ್ಕೆ ಕರೆಸಿ ಪ್ರೇಯಸಿಯನ್ನ ಫಿನಿಶ್ ಮಾಡಿದ ಕಿರಾತಕ.!





