ಮತ್ತೆ Commercial Cylinder ದರ ಏರಿಕೆಗೆ ತೈಲ ಕಂಪನಿಗಳ ನಿರ್ಧಾರ – ನಾಳೆಯಿಂದಲೇ ಬಳಕೆದಾರರಿಗೆ ಬೆಲೆ ಏರಿಕೆ ಬಿಸಿ.

ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ನಾಳೆಯಿಂದಲೇ ತಟ್ಟಿಲಿದೆ. ತೈಲ ಮಾರುಕಟ್ಟೆ ಕಂಪನಿಗಳು ಜುಲೈ 1ರಿಂದ ಕಮರ್ಶಿಯಲ್ ಹಾಗೂ ಇಂಡಸ್ಟ್ರಿಯಲ್ ಎಲ್ಪಿಜಿ ಸಿಲಿಂಡರ್ಗಳ ದರವನ್ನು ಹೆಚ್ಚಿಸಲು ನಿರ್ಧರಿಸಿವೆ ಎಂದು ವರದಿಯಾಗಿದೆ.
ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಶಾಕ್!
ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್ಜಿ ದರ ಏರಿಕೆಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿರುವ ನಡುವೆಯೇ ವಾಣಿಜ್ಯ ಗ್ಯಾಸ್ ದರ ಹೆಚ್ಚಳವು ವ್ಯಾಪಾರಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹೆಚ್ಚುವರಿ ವೆಚ್ಚದ ಪರಿಣಾಮವಾಗಿ ಹೋಟೆಲ್, ಆಹಾರ ಮತ್ತು ಇತರೆ ಸೇವೆಗಳ ದರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದನ್ನು ಓದಿ : ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಮತ್ತಷ್ಟು ದುಬಾರಿ – ಇಂದಿನ ದರವೆಷ್ಟಿದೆ?

ಜೂನ್ ತಿಂಗಳ ದರ ಏರಿಕೆ
- ದೆಹಲಿ – ₹42 ಹೆಚ್ಚಳ
- ಬೆಂಗಳೂರು – ₹46 ಹೆಚ್ಚಳ
- ಕೋಲ್ಕತ್ತಾ – ₹53.50 ಹೆಚ್ಚಳ
- 5 ಕೆಜಿ FTL ಸಿಲಿಂಡರ್ – ₹11 ಹೆಚ್ಚಳ

ಪ್ರಮುಖ ನಗರಗಳಲ್ಲಿ ದರ ಹೆಚ್ಚಳ ಜಾರಿ
ಕಳೆದ ಜೂನ್ ತಿಂಗಳಲ್ಲಿಯೂ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ದರ ಏರಿಕೆಯಾಗಿತ್ತು. ದೆಹಲಿ, ಬೆಂಗಳೂರು, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ದರ ಹೆಚ್ಚಳ ಜಾರಿಯಾಗಿತ್ತು. ಇದೀಗ ಮತ್ತೊಮ್ಮೆ ಜುಲೈ 1ರಿಂದ ದರ ಏರಿಕೆಯಾಗುತ್ತಿರುವುದು ವಾಣಿಜ್ಯ ಬಳಕೆದಾರರಿಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ.
ಗೃಹಬಳಕೆಯ 14.2 ಕೆಜಿ LPG ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆಯ ಸಿಲಿಂಡರ್ ದರ ಏರಿಕೆಯಿಂದ ಮಾರುಕಟ್ಟೆಯಲ್ಲಿ ವಿವಿಧ ಸೇವೆಗಳ ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನು ನೋಡಿ : ಪತ್ನಿಯಿಂದಲೇ ಪತಿಯ ಕೊ* – ಕೊ* ಮಾಡಿ ಹಾರ್ಟ್ ಅಟ್ಯಾಕ್ ಡ್ರಾಮಾ




